ಕೇಂದ್ರ ಸಚಿವ ಸ್ಥಾನಕ್ಕೆ ಸದಾನಂದ ಗೌಡ, ರಮೇಶ್ ಪೋಖ್ರಿಯಾಲ್ ನಿಶಾಂಕ್ ರಾಜೀನಾಮೆ
ಕೇಂದ್ರ ಸಚಿವ ಸ್ಥಾನಕ್ಕೆ ಸದಾನಂದ ಗೌಡ, ರಮೇಶ್ ಪೋಖ್ರಿಯಾಲ್ ನಿಶಾಂಕ್ ರಾಜೀನಾಮೆ ನೀಡಿದ್ದಾರೆ.
ಕೇಂದ್ರ ಸಚಿವ ಸ್ಥಾನಕ್ಕೆ ಸದಾನಂದ ಗೌಡ, ರಮೇಶ್ ಪೋಖ್ರಿಯಾಲ್ ನಿಶಾಂಕ್ ರಾಜೀನಾಮೆ ನೀಡಿದ್ದಾರೆ. ಸಚಿವ ಸಂಪುಟ ಪುನಾರಚನೆ ಹಿನ್ನೆಲೆಯಲ್ಲಿ ಇವರಿಬ್ಬರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅನಾರೋಗ್ಯ ಸಮಸ್ಯೆ ಹಿನ್ನೆಲೆ ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರನ್ನು ಕೈಬಿಡಲು ಯೋಚಿಸಲಾಗಿದೆ ಎಂಬ ಸುದ್ದಿ ಈ ಹಿಂದೆಯೇ ಹೊರಬಿದ್ದಿತ್ತು. ಅದಕ್ಕೆ ಪೂರಕವಾಗಿ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೇವೇಳೆ, ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಸ್ಥಾನಕ್ಕೆ ಸದಾನಂದ ಗೌಡ ಕೂಡಾ ರಾಜೀನಾಮೆ ನೀಡಿದ್ದು, ಅವರು ಸಂಪುಟದಿಂದ ಹೊರಗೆ ಬಂದಿದ್ದಾರೆ. ಅಂತೆಯೇ ದೆಬೋಶ್ರೀ ಚೌಧರಿ, ಸಂತೋಷ್ ಗಂಗ್ವಾರ್ ಹಾಗೂ ಕರ್ನಾಟಕದ ನೂತನ ರಾಜ್ಯಪಾಲರಾಗಿ ನೇಮಕಗೊಂಡ ಥಾವರಚಂದ್ ಗೆಹಲೋತ್ ಕೂಡಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕರ್ನಾಟಕದಿಂದ ಇಬ್ಬರಿಗೆ ಸ್ಥಾನ ಸಿಗುವುದು ಖಚಿತವಾಗಿದ್ದು, ಶೋಭಾ ಕರಂದ್ಲಾಜೆ ಹಾಗೂ ನಾರಾಯಣ ಸ್ವಾಮಿ ಇಬ್ಬರೂ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವುದು ಖಚಿತವೆಂದು ಸುದ್ದಿ ಲಭ್ಯವಾಗುತ್ತಿರುವ ಹೊತ್ತಿನಲ್ಲೇ ಸದಾನಂದ ಗೌಡ ರಾಜೀನಾಮೆ ನೀಡಿರುವುದು ಗಮನಾರ್ಹ. ಇಂದು ನೂತನ ಸಂಸದರು ಪ್ರಮಾಣ ವಚನ ಸ್ವೀಕರಿಸಲಿದ್ದು, ಹೊಸಬರು, ಸಂಪುಟದಲ್ಲಿ ಬಡ್ತಿ ಪಡೆಯುವವರ ಸೇರಿದಂತೆ ಇಂದು ಸಂಜೆ 43 ಸಂಸದರು ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. ನಿನ್ನೆಯಿಂದ ಈವರೆಗೆ ಒಟ್ಟು 4 ಸಚಿವ ಸ್ಥಾನಗಳು ಖಾಲಿಯಾಗಿವೆ.
ಕರ್ನಾಟಕದಿಂದ ಸಂಸದೆ ಶೋಭಾ ಕರಂದ್ಲಾಜೆ, ಆನೇಕಲ್ ನಾರಾಯಣಸ್ವಾಮಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿದ್ದು ಉಳಿದ ಸಂಭಾವ್ಯ ಸಚಿವರ ಪಟ್ಟಿ ಹೀಗಿದೆ: ಜ್ಯೋತಿರಾದಿತ್ಯ ಸಿಂಧಿಯಾ, ಸರ್ಬಾನಂದ ಸೋನೋವಾಲ್, ಪಶುಪತಿನಾಥ್ ಪಾರಸ್, ನಾರಾಯಣ ರಾಣೆ, ಭೂಪೇಂದ್ರ ಯಾದವ್, ಅನುಪ್ರಿಯಾ ಪಟೇಲ್, ಕಪಿಲ್ ಪಾಟೀಲ್, ಮೀನಾಕ್ಷಿ ಲೇಖಿ, ರಾಹುಲ್ ಕಸಾವಾ, ಅಶ್ವಿನಿ ವೈಷ್ಣವ್, ಶಾಂತನು ಠಾಕೂರ್, ವಿನೋದ್ ಸೋನ್‌ಕರ್, ಪಂಕಜ್ ಚೌಧರಿ, ಆರ್‌ಸಿಪಿ ಸಿಂಗ್, ದಿಲೇಶ್ವರ್ ಕಾಮತ್, ಚಂದ್ರೇಶ್ವರ್ ಪ್ರಸಾದ್ ಚಂದ್ರವಂಶಿ, ರಾಮನಾಥ್ ಠಾಕೂರ್, ರಾಜ್‌ಕುಮಾರ್ ರಂಜನ್, ಬಿ.ಎಲ್.ವರ್ಮಾ, ಅಜಯ್ ಮಿಶ್ರಾ, ಹೀನಾ ಗಾವಿತ್, ಅಜಯ್ ಭಟ್ಟ, ಪ್ರೀತಂ ಮುಂಡೆ ಹೆಸರು ಸಂಭಾವ್ಯ ಕೇಂದ್ರ ಸಚಿವರ ಪಟ್ಟಿಯಲ್ಲಿ ಇದೆ ಎಂದು ಟಿವಿ9ಗೆ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: Modi Cabinet: ಶೋಭಾ ಕರಂದ್ಲಾಜೆ-ಆನೇಕಲ್ ನಾರಾಯಣಸ್ವಾಮಿಗೆ ಪ್ರಧಾನಿ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ
Published On - 1:25 pm, Wed, 7 July 21