Modi Cabinet: ಶೋಭಾ ಕರಂದ್ಲಾಜೆ-ಆನೇಕಲ್ ನಾರಾಯಣಸ್ವಾಮಿಗೆ ಪ್ರಧಾನಿ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ
ಸಚಿವ ಸಂಪುಟ ಸ್ಥಾನದಲ್ಲಿ ಕರ್ನಾಟಕದಿಂದ ಇಬ್ಬರಿಗೆ ಸ್ಥಾನ ಸಿಗುವುದು ಖಚಿತವಾಗಿದ್ದು, ಶೋಭಾ ಕರಂದ್ಲಾಜೆ ಹಾಗೂ ನಾರಾಯಣ ಸ್ವಾಮಿ ಇಬ್ಬರೂ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವುದು ಖಚಿತವೆಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ದೆಹಲಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಇಂದು ಸಂಜೆ 6 ಗಂಟೆಗೆ ಪುನಾರಚನೆ ಆಗುತ್ತಿದೆ. ಸಂಭಾವ್ಯ ಕೇಂದ್ರ ಸಚಿವರ ಪಟ್ಟಿ ಟಿವಿ9ಗೆ ಲಭ್ಯವಾಗಿದೆ. ಸಚಿವ ಸಂಪುಟ ಸ್ಥಾನದಲ್ಲಿ ಕರ್ನಾಟಕದಿಂದ ಇಬ್ಬರಿಗೆ ಸ್ಥಾನ ಸಿಗುವುದು ಖಚಿತವಾಗಿದ್ದು, ಶೋಭಾ ಕರಂದ್ಲಾಜೆ ಹಾಗೂ ನಾರಾಯಣ ಸ್ವಾಮಿ ಇಬ್ಬರೂ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವುದು ಖಚಿತವೆಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ಅನಾರೋಗ್ಯ ಸಮಸ್ಯೆ ಹಿನ್ನೆಲೆ ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್‌ಗೆ ಕೊಕ್ ನೀಡುವ ಸಾಧ್ಯತೆ ಇದ್ದು, ಶಿಕ್ಷಣ ಸಚಿವ ಸ್ಥಾನಕ್ಕೆ ಬೇರೆಯವರನ್ನು ಆಯ್ಕೆ ಮಾಡುವ ಸಂಭವವಿದೆ. ಅಂತೆಯೇ ದೆಬೋಶ್ರೀ ಚೌಧರಿಗೂ ಕೊಕ್ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕದಿಂದ ಸಂಸದೆ ಶೋಭಾ ಕರಂದ್ಲಾಜೆ, ಆನೇಕಲ್ ನಾರಾಯಣಸ್ವಾಮಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿದ್ದು ಉಳಿದ ಸಂಭಾವ್ಯ ಸಚಿವರ ಪಟ್ಟಿ ಹೀಗಿದೆ: ಜ್ಯೋತಿರಾದಿತ್ಯ ಸಿಂಧಿಯಾ, ಸರ್ಬಾನಂದ ಸೋನೋವಾಲ್, ಪಶುಪತಿನಾಥ್ ಪಾರಸ್, ನಾರಾಯಣ ರಾಣೆ, ಭೂಪೇಂದ್ರ ಯಾದವ್, ಅನುಪ್ರಿಯಾ ಪಟೇಲ್, ಕಪಿಲ್ ಪಾಟೀಲ್, ಮೀನಾಕ್ಷಿ ಲೇಖಿ, ರಾಹುಲ್ ಕಸಾವಾ, ಅಶ್ವಿನಿ ವೈಷ್ಣವ್, ಶಾಂತನು ಠಾಕೂರ್, ವಿನೋದ್ ಸೋನ್‌ಕರ್, ಪಂಕಜ್ ಚೌಧರಿ, ಆರ್‌ಸಿಪಿ ಸಿಂಗ್, ದಿಲೇಶ್ವರ್ ಕಾಮತ್, ಚಂದ್ರೇಶ್ವರ್ ಪ್ರಸಾದ್ ಚಂದ್ರವಂಶಿ, ರಾಮನಾಥ್ ಠಾಕೂರ್, ರಾಜ್‌ಕುಮಾರ್ ರಂಜನ್, ಬಿ.ಎಲ್.ವರ್ಮಾ, ಅಜಯ್ ಮಿಶ್ರಾ, ಹೀನಾ ಗಾವಿತ್, ಅಜಯ್ ಭಟ್ಟ, ಪ್ರೀತಂ ಮುಂಡೆ ಹೆಸರು ಸಂಭಾವ್ಯ ಕೇಂದ್ರ ಸಚಿವರ ಪಟ್ಟಿಯಲ್ಲಿ ಇದೆ ಎಂದು ಟಿವಿ9ಗೆ ಮಾಹಿತಿ ಲಭ್ಯವಾಗಿದೆ.
ಕೇಂದ್ರದ ಕ್ಯಾಬಿನೆಟ್ನಲ್ಲಿ 13 ವಕೀಲರು, 6 ಮಂದಿ ವೈದ್ಯರು, 5 ಇಂಜಿನಿಯರ್, 7 ಮಂದಿ ನಾಗರಿಕ ಸೇವೆಯಲ್ಲಿದ್ದವರು, 4 ಮಾಜಿ ಮುಖ್ಯಮಂತ್ರಿಗಳು, 18 ಮಂದಿ ಮಾಜಿ ಮಂತ್ರಿಗಳು, 39 ಮಂದಿ ಶಾಸಕರಾಗಿ ಅನುಭವ ಉಳ್ಳವರು ಇದ್ದಾರೆ. ಇದೀಗ ಸಂಪುಟ ವಿಸ್ತರಣೆಯಲ್ಲಿ ತೆಲಂಗಾಣದ ಕೇಂದ್ರ ಸಹಾಯಾಕ ಸಚಿವರಾಗಿದ್ದ ಕಿಷನ್‌ರಡ್ಡಿಗೆ ಪದೋನ್ನತಿ ಲಭಿಸುವ ಸಾಧ್ಯತೆ ಇದ್ದು, ಸಹಾಯಕ ಸಚಿವರಿಂದ ಪೂರ್ಣಕಾಲಿಕ ಸ್ಬತಂತ್ರ ಸಚಿವರಾಗಿ ಬಡ್ತಿ ಸಿಗಲಿದೆ ಎನ್ನಲಾಗಿದೆ. ನೂತನವಾಗಿ ಸ್ಥಾಪಿಸಲಾಗಿರೋ ಸಹಕಾರ ಖಾತೆಯ ಸ್ವತಂತ್ರ ಸಚಿವರಾಗಿ ಅವರನ್ನು ನೇಮಕ ಮಾಡುವ ಸಾಧ್ಯತೆ ಇದೆ.
ಕೇಂದ್ರ ಸಚಿವ ಸಂಪುಟದ ಪುನಾರಚನೆಗೆ ಸಂಬಂಧಿಸಿದಂತೆ ರಾಷ್ಟ್ರಪತಿ ಭವನದಲ್ಲಿ ನೂತನ ಸಚಿವರ ಪ್ರಮಾಣ ವಚನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಂಜೆ 6 ಗಂಟೆಗೆ ಪ್ರಮಾಣ ವಚನ ಸಮಾರಂಭ ನಡೆಯಲಿದೆ ಎಂದು ರಾಷ್ಟ್ರಪತಿ ಕಾರ್ಯಾಲಯದಿಂದ ಮಾಹಿತಿ ಸಿಕ್ಕಿದೆ, ನೂತನ ಸಚಿವರಿಗೆ ಸಾಂಪ್ರದಾಯಿಕ ವೇಷಭೂಷಣದೊಂದಿಗೆ ಭಾಗಿಯಾಗಲು ಸೂಚನೆ ನೀಡಲಾಗಿದೆ.
ಪ್ರಧಾನಿ ಮೋದಿ ಸಭೆ ಬಳಿಕ ಹೇಳಿಕೆ ನೀಡಿರುವ ಎ.ನಾರಾಯಣಸ್ವಾಮಿ, ಸಾಮಾನ್ಯ ಕಾರ್ಯಕರ್ತನನ್ನು ಪಕ್ಷ ಗುರುತಿಸಿ ಗೌರವಿಸಿದೆ. ನನ್ನನ್ನ ವಿಶೇಷವಾಗಿ ನಮ್ಮ ಪಕ್ಷ ಗುರುತಿಸಿದ್ದಕ್ಕೆ ನಾನು ಒಂದು ರಾಷ್ಟ್ರಕ್ಕೆ ಉದಾಹರಣೆಯಾಗುತ್ತೇನೆ ಎಂದು ದೆಹಲಿಯಲ್ಲಿ ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೇಂದ್ರ ಸಚಿವ ಸ್ಥಾನಕ್ಕೆ ಸದಾನಂದ ಗೌಡ, ರಮೇಶ್ ಪೋಖ್ರಿಯಾಲ್ ನಿಶಾಂಕ್ ರಾಜೀನಾಮೆ
(union-cabinet-expansion-shobha-karandlaje-and-narayanaswamy-to-become-union-ministers-from-karnataka)
Published On - 1:17 pm, Wed, 7 July 21