Union Cabinet Expansion ಸಂಪುಟ ಪುನಾರಚನೆಗೆ ಮುನ್ನ ನೂತನ ಸಹಕಾರ ಸಚಿವಾಲಯ ರಚಿಸಿದ ಮೋದಿ ನೇತೃತ್ವದ ಕೇಂದ್ರ ಸರ್ಕಾರ

Ministry Of Cooperation: ಹೊಸ ಸಚಿವಾಲಯದ ರಚನೆಯು ಸಮುದಾಯ ಆಧಾರಿತ ಅಭಿವೃದ್ಧಿ ಸಹಭಾಗಿತ್ವಕ್ಕೆ ಕೇಂದ್ರದ ಬದ್ಧತೆಯನ್ನು ಸೂಚಿಸುತ್ತದೆ ಎಂದು ಕ್ಯಾಬಿನೆಟ್ ಸಚಿವಾಲಯದ ಪ್ರಕಟಣೆಯಲ್ಲಿ ಹೇಳಿದೆ. ಸಹಕಾರ್ ಸೆ ಸಮೃದ್ದಿ (ಸಹಕಾರದಿಂದ ಸಮೃದ್ಧಿ) ಎಂಬುದು ಸಹಕಾರ ಸಚಿವಾಲಯದ ವಿಷನ್ ಆಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರ "ಐತಿಹಾಸಿಕ" ಎಂದು ಪ್ರಕಟಣೆ ಹೇಳಿದೆ.

Union  Cabinet Expansion ಸಂಪುಟ ಪುನಾರಚನೆಗೆ ಮುನ್ನ ನೂತನ ಸಹಕಾರ ಸಚಿವಾಲಯ ರಚಿಸಿದ ಮೋದಿ ನೇತೃತ್ವದ ಕೇಂದ್ರ  ಸರ್ಕಾರ
ಪ್ರಧಾನಿ ನರೇಂದ್ರ ಮೋದಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jul 07, 2021 | 1:11 PM

ದೆಹಲಿ: ದೇಶದಲ್ಲಿ ಸಹಕಾರಿ ಆಂದೋಲನಕ್ಕೆ ಹೆಚ್ಚಿನ ಉತ್ತೇಜನ ನೀಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಮಂಗಳವಾರ ಹೊಸ ‘ಸಹಕಾರ ಸಚಿವಾಲಯ’ವೊಂದನ್ನು ರಚಿಸಿದೆ. ಕೇಂದ್ರ ಸಚಿವ ಸಂಪುಟವು ಪುನಾರಚನೆಗೆ ನಿಗದಿಯಾಗುವ ಒಂದು ದಿನ ಮುಂಚಿತವಾಗಿ ಈ ಕ್ರಮವು ಬಂದಿದ್ದು, ಕೆಲವು ಹೊಸ ಮುಖಗಳು ಕೇಂದ್ರವನ್ನು ಪ್ರಮುಖ ಸ್ಥಾನಗಳಲ್ಲಿ ಸೇರುವ ನಿರೀಕ್ಷೆಯಿದೆ. ಹೊಸ ಸಚಿವಾಲಯದ ರಚನೆಯು ಸಮುದಾಯ ಆಧಾರಿತ ಅಭಿವೃದ್ಧಿ ಸಹಭಾಗಿತ್ವಕ್ಕೆ ಕೇಂದ್ರದ ಬದ್ಧತೆಯನ್ನು ಸೂಚಿಸುತ್ತದೆ ಎಂದು ಕ್ಯಾಬಿನೆಟ್ ಸಚಿವಾಲಯದ ಪ್ರಕಟಣೆಯಲ್ಲಿ ಹೇಳಿದೆ. ಸಹಕಾರ್ ಸೆ ಸಮೃದ್ದಿ (ಸಹಕಾರದಿಂದ ಸಮೃದ್ಧಿ) ಎಂಬುದು ಸಹಕಾರ ಸಚಿವಾಲಯದ ವಿಷನ್ ಆಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರ “ಐತಿಹಾಸಿಕ” ಎಂದು ಪ್ರಕಟಣೆ ಹೇಳಿದೆ.

“ಈ ಸಚಿವಾಲಯವು ದೇಶದಲ್ಲಿ ಸಹಕಾರಿ ಆಂದೋಲನವನ್ನು ಬಲಪಡಿಸಲು ಪ್ರತ್ಯೇಕ ಆಡಳಿತ, ಕಾನೂನು ಮತ್ತು ನೀತಿ ಚೌಕಟ್ಟನ್ನು ಒದಗಿಸುತ್ತದೆ. ಇದು ಸಹಕಾರಿಗಳನ್ನು ನಿಜವಾದ ಜನ-ಆಧಾರಿತ ಚಳುವಳಿಯಾಗಿ ತಳಮಟ್ಟದವರೆಗೆ ತಲುಪಲು ಸಹಾಯ ಮಾಡುತ್ತದೆ” ಎಂದು ಪ್ರಕಟಣೆ ತಿಳಿಸಿದೆ.

ಸಹಕಾರಿ ಆಧಾರಿತ ಆರ್ಥಿಕ ಅಭಿವೃದ್ಧಿ ಮಾದರಿಯು ಭಾರತಕ್ಕೆ ಬಹಳ ಪ್ರಸ್ತುತವಾಗಿದೆ, ಪ್ರತಿಯೊಬ್ಬ ಸದಸ್ಯರು ಜವಾಬ್ದಾರಿಯುತ ಮನೋಭಾವದಿಂದ ಕೆಲಸ ಮಾಡುತ್ತಾರೆ ಎಂದು ಸರ್ಕಾರ ಹೇಳಿದೆ. ಈ ಹೊಸ ಸಚಿವಾಲಯವು ಸಹಕಾರಿ ಸಂಸ್ಥೆಗಳಿಗೆ ವ್ಯವಹಾರವನ್ನು ಸುಲಭಗೊಳಿಸಲು ಮತ್ತು ಬಹು-ರಾಜ್ಯ ಸಹಕಾರ ಸಂಸ್ಥೆಗಳ ಅಭಿವೃದ್ಧಿಗೆ ಅನುವು ಮಾಡಿಕೊಡುವ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಕೆಲಸ ಮಾಡುತ್ತದೆ ಎಂದು ಅದು ಹೇಳಿದೆ.

ಹೊಸ ಸಹಕಾರ ಸಚಿವಾಲಯವನ್ನು ಸ್ಥಾಪಿಸುವ ಮೋದಿ ಸರ್ಕಾರದ ನಿರ್ಧಾರವು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಈ ವರ್ಷದ ತಮ್ಮ ಬಜೆಟ್ ಭಾಷಣದಲ್ಲಿ ಮಾಡಿದ ಬದ್ಧತೆಯನ್ನು ಪಾಲಿಸಿದೆ. ಈ ವರ್ಷ ಫೆಬ್ರವರಿ 1 ರಂದು 2021-22ರ ಬಜೆಟ್ ಮಂಡಿಸಿದಾಗ ನಿರ್ಮಲಾ ಸೀತಾರಾಮನ್ ಅವರು “ಸರ್ಕಾರವು ಬಹು-ರಾಜ್ಯ ಸಹಕಾರಿ ಸಂಸ್ಥೆಗಳ ಅಭಿವೃದ್ಧಿಗೆ ಬದ್ಧವಾಗಿದೆ ಮತ್ತು ಅವರಿಗೆ ಎಲ್ಲಾ ಬೆಂಬಲವನ್ನು ನೀಡುತ್ತದೆ. ಸಹಕಾರಿ ಸಂಸ್ಥೆಗಳಿಗೆ ‘ವ್ಯವಹಾರ ಮಾಡುವ ಸುಲಭತೆಯನ್ನು’ ಮತ್ತಷ್ಟು ಸುಗಮಗೊಳಿಸಲು , ಅವರಿಗಾಗಿ ಪ್ರತ್ಯೇಕ ಆಡಳಿತ ರಚನೆಯನ್ನು ಸ್ಥಾಪಿಸಲು ನಾನು ಸಲಹೆ ನೀಡುತ್ತೇನೆ ಎಂದಿದ್ದರು.

ಪ್ರಧಾನಿ ಮೋದಿಯವರ ಮೆಗಾ ಕ್ಯಾಬಿನೆಟ್ ಪುನರ್ರಚನೆಇಂದು ಸಂಜೆ 6 ಗಂಟೆಗೆ ನಡೆಯಲಿದೆ.ಹೊಸ ಕ್ಯಾಬಿನೆಟ್ ಭಾರತದ ಇತಿಹಾಸದಲ್ಲಿ ಅತ್ಯಂತ ಕಿರಿಯ ವಯಸ್ಸಿನವರಾಗಲಿದೆ ಎಂದು ಸರ್ಕಾರದ ಉನ್ನತ ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ.

ಜ್ಯೋತಿರಾದಿತ್ಯ ಸಿಂಧಿಯಾ, ಸರ್ಬಾನಂದ ಸೋನೊವಾಲ್, ಲೋಕ ಜನಶಕ್ತಿ ಪಕ್ಷದ ಪಶುಪತಿ ಕುಮಾರ್ ಪಾರಸ್, ನಾರಾಯಣ್ ರಾಣೆ, ಮತ್ತು ವರುಣ್ ಗಾಂಧಿ ಮೊದಲಾದವರು ಈಗಾಗಲೇ ಈಗಾಗಲೇ ರಾಷ್ಟ್ರ ರಾಜಧಾನಿಗೆ ಆಗಮಿಸುತ್ತಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಇದನ್ನೂ ಓದಿ:  ಇಂದು ನಿಗದಿಯಾಗಿದ್ದ ಕೇಂದ್ರ ಸಚಿವ ಸಂಪುಟ ಸಭೆ ರದ್ದು

Published On - 1:08 pm, Wed, 7 July 21