ಇಂದು ನಿಗದಿಯಾಗಿದ್ದ ಕೇಂದ್ರ ಸಚಿವ ಸಂಪುಟ ಸಭೆ ರದ್ದು
ಬೆಳಗ್ಗೆ 11.30ಕ್ಕೆ ನಿಗದಿಯಾಗಿದ್ದ ಕೇಂದ್ರ ಸಂಪುಟ ಸಭೆಯನ್ನು ರದ್ದುಪಡಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇಂದು ನಿಗದಿಯಾಗಿದ್ದ ಕೇಂದ್ರ ಸಚಿವ ಸಂಪುಟ ಸಭೆ ರದ್ದಾಗಿದೆ. ಬೆಳಗ್ಗೆ 11.30ಕ್ಕೆ ನಿಗದಿಯಾಗಿದ್ದ ಕೇಂದ್ರ ಸಂಪುಟ ಸಭೆಯನ್ನು ರದ್ದುಪಡಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ, 20 ಹೊಸ ಸಚಿವರು ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಅನೇಕ ಮಾಧ್ಯಮಗಳು ವರದಿ ಮಾಡಿವೆ. ಮಾಧ್ಯಮಗಳ ವರದಿಗಳ ಪ್ರಕಾರ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಉನ್ನತ ಸಚಿವರೊಂದಿಗೆ ಪ್ರಧಾನಿ ಮೋದಿ ಅವರ ಸಭೆ ರದ್ದುಗೊಂಡಿರುವುದರಿಂದ ಈ ನಿರ್ಧಾರ ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ರದ್ದಾಗಿರುವ ಸಭೆ ಯಾವಾಗ ನಡೆಯಲಿದೆ ಎನ್ನುವ ಬಗ್ಗೆ ಮಾಹಿತಿ ಇನ್ನೂ ಸಿಕ್ಕಿಲ್ಲ. ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ರೈಲ್ವೆ ಸಚಿವ ಪಿಯೂಷ್ ಗೋಯಲ್, ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಮತ್ತು ಇತರರು ಭಾಗವಹಿಸುವ ಸಾಧ್ಯತೆ ಇದ್ದು, ಸದರಿ ಸಭೆಯಲ್ಲಿ, ಪ್ರಧಾನ ಮಂತ್ರಿಗಳು ಮಂತ್ರಿಗಳ ಕಾರ್ಯಕ್ಷಮತೆ ಮತ್ತು ಮುಂದಿನ ಯೋಜನೆಗಳ ಪ್ರಸ್ತಾಪಗಳ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ. ಇದಕ್ಕೂ ಮುನ್ನ ಜೂನ್ 20 ರಂದು ಕೂಡಾ ಪ್ರಧಾನಿ ಇದೇ ರೀತಿಯ ಸಭೆ ನಡೆಸಿದ್ದರು ಎನ್ನುವುದು ಗಮನಾರ್ಹ.
ಕೇಂದ್ರ ಸಚಿವ ಸಂಪುಟ 81 ಸದಸ್ಯರನ್ನು ಹೊಂದಬಹುದು. ಪ್ರಸ್ತುತ, 53 ಸಚಿವರಿದ್ದಾರೆ. 28 ಹೊಸ ಮುಖಗಳನ್ನು ಸೇರಿಸಲು ಅವಕಾಶವಿದೆ. 2019 ರಲ್ಲಿ ಸತತ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ಮೋದಿ ಸರ್ಕಾರದ ಮೊದಲ ಸಚಿವ ಸಂಪುಟ ವಿಸ್ತರಣೆ ಇದಾಗಿದೆ. ಇದಕ್ಕೂ ಮುನ್ನ ಶನಿವಾರ ಮತ್ತು ಭಾನುವಾರ, ಪ್ರಧಾನಿ ಮೋದಿ ಅವರು ಬಿಜೆಪಿಯ ಹಿರಿಯ ಮುಖಂಡರಾದ ಅಮಿತ್ ಶಾ ಮತ್ತು ಬಿ.ಎಲ್.ಸಂತೋಷ್ ಅವರ ಅಧಿಕೃತ ನಿವಾಸವಾದ ಲೋಕ್ ಕಲ್ಯಾಣ್ ಮಾರ್ಗದಲ್ಲಿ ಸಭೆ ನಡೆಸಿದ್ದಾರೆ.
ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಾಧ್ಯತೆ ಇರುವ ಪ್ರಮುಖರ ಪಟ್ಟಿ ಹೀಗಿದೆ 1. ಸರ್ಬಾನಂದ ಸೋನೊವಾಲ್ (ಬಿಜೆಪಿ) – ಮಾಜಿ ಕೇಂದ್ರ ಕ್ರೀಡಾ ಮತ್ತು ಯುವ ವ್ಯವಹಾರ ಸಚಿವ (2014-2016), ಮಾಜಿ ಅಸ್ಸಾಂ ಸಿಎಂ ಮತ್ತು ಶಾಸಕ 2. ಸುಶೀಲ್ ಮೋದಿ (ಬಿಜೆಪಿ) – ಬಿಹಾರದ ಮಾಜಿ ಉಪ ಸಿಎಂ ಮತ್ತು ರಾಜ್ಯಸಭಾ ಸಂಸದ 3. ನಾರಾಯಣ್ ರಾಣೆ (ಬಿಜೆಪಿ) – ಮಹಾರಾಷ್ಟ್ರದ ಮಾಜಿ ಸಿಎಂ ಮತ್ತು ರಾಜ್ಯಸಭಾ ಸಂಸದ 4. ಹೀನಾ ಗವಿತ್ (ಬಿಜೆಪಿ) – ನಂದೂರ್‌ಬಾರ್‌ನ ಲೋಕಸಭಾ ಸಂಸದೆ 5. ಪ್ರೀತಂ ಮುಂಡೆ (ಬಿಜೆಪಿ) – ಬೀಡ್ ಲೋಕಸಭಾ ಸಂಸದ 6. ಜಾಫರ್ ಇಸ್ಲಾಂ (ಬಿಜೆಪಿ) – ಬಿಜೆಪಿ ವಕ್ತಾರ ಮತ್ತು ರಾಜ್ಯಸಭಾ ಸಂಸದ 7. ಅನುಪ್ರಿಯಾ ಪಟೇಲ್ [ಅಪ್ನಾ ದಳ (ಎಸ್)] – ಮಿರ್ಜಾಪುರದ ಲೋಕಸಭಾ ಸಂಸದೆ 8. ಲಾಕೆಟ್ ಚಟರ್ಜಿ (ಬಿಜೆಪಿ) – ಹೂಗ್ಲಿಯ ಲೋಕಸಭಾ ಸಂಸದ 9. ದಿಲೀಪ್ ಘೋಷ್ (ಬಿಜೆಪಿ) – ಮದಿನಿಪುರದ ಲೋಕಸಭಾ ಸಂಸದ 10. ಶಾಂತನು ಠಾಕೂರ್ (ಬಿಜೆಪಿ) – ಬಂಗಾಂವ್‌ನ ಲೋಕಸಭಾ ಸಂಸದ 11.ತೀರಥ್ ಸಿಂಗ್ ರಾವತ್ (ಬಿಜೆಪಿ) – ಗರ್ಹ್ವಾಲ್‌ನ ಲೋಕಸಭಾ ಸಂಸದ 12. ಪಶುಪತಿ ಕುಮಾರ್ ಪಾರಸ್ (ಎಲ್ ಜೆಪಿ) – ಹಾಜಿಪುರದ ಲೋಕಸಭಾ ಸಂಸದ 13. ಶಿವ ಪ್ರತಾಪ್ ಶುಕ್ಲಾ (ಬಿಜೆಪಿ) – ಮಾಜಿ ಕೇಂದ್ರ ಖಾತೆಯ ರಾಜ್ಯಸಚಿವ ಮತ್ತು ರಾಜ್ಯಸಭಾ ಸಂಸದ 14. ಸುನೀತಾ ದುಗ್ಗಲ್ (ಬಿಜೆಪಿ) – ಸಿರ್ಸಾದ ಲೋಕಸಭಾ ಸಂಸದೆ 15. ಆರ್‌ಸಿಪಿ ಸಿಂಗ್ [ಜೆಡಿಯು] – ರಾಜ್ಯಸಭಾ ಸಂಸದ 16. ಲಲ್ಲನ್ ಸಿಂಗ್ [ಜೆಡಿಯು] – ಮುಂಗರ್ ಲೋಕಸಭಾ ಸಂಸದ 17. ರಾಹುಲ್ ಕಸ್ವಾನ್ (ಬಿಜೆಪಿ) – ಚುರು ಲೋಕಸಭಾ ಸಂಸದ 18. ಅಶ್ವಿನಿ ವೈಷ್ಣವ್ (ಬಿಜೆಪಿ) – ರಾಜ್ಯಸಭಾ ಸಂಸದ 19. ಮೀನಾಕ್ಷಿ ಲೇಖಿ (ಬಿಜೆಪಿ) – ನವದೆಹಲಿಯ ಲೋಕಸಭಾ ಸಂಸದೆ 20. ಮನೋಜ್ ತಿವಾರಿ (ಬಿಜೆಪಿ) – ಈಶಾನ್ಯ ದೆಹಲಿಯ ಲೋಕಸಭಾ ಸಂಸದ 21. ಜಮ್ಯಾಂಗ್ ತ್ಸೆರಿಂಗ್ ನಮ್ಯಾಗ್ಯಾಲ್ (ಬಿಜೆಪಿ) – ಲಡಾಕ್ ಮೂಲದ ಲೋಕಸಭಾ ಸಂಸದ
Published On - 8:00 am, Wed, 7 July 21