Union Cabinet Expansion ಸಚಿವ ಸಂಪುಟ ಪುನಾರಚನೆಯಲ್ಲಿಯೂ ‘ಸಬ್ ಕಾ ವಿಕಾಸ್’, ಯಾವ ರಾಜ್ಯ, ಲಿಂಗ ಮತ್ತು ಜಾತಿಗೆ ಎಷ್ಟು ಪ್ರಾತಿನಿಧ್ಯ?

Narendra Modi:ಮೂಲಗಳ ಪ್ರಕಾರ, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವಿಭಾಗಗಳ 12 ಸಚಿವರಲ್ಲದೆ, ಅಲ್ಪಸಂಖ್ಯಾತ ಗುಂಪುಗಳ ಐವರು ನಾಯಕರು - ಮುಸ್ಲಿಂ, ಸಿಖ್ ಮತ್ತು ಕ್ರಿಶ್ಚಿಯನ್ ಸಮುದಾಯಗಳಿಂದ ತಲಾ ಒಬ್ಬರು ಮತ್ತು ಇಬ್ಬರು ಬೌದ್ಧ ಧರ್ಮಕ್ಕೆ ಸೇರಿದ ಪ್ರತಿನಿಧಿಗಳಿರಲಿದ್ದಾರೆ.

Union Cabinet Expansion ಸಚಿವ ಸಂಪುಟ ಪುನಾರಚನೆಯಲ್ಲಿಯೂ 'ಸಬ್ ಕಾ ವಿಕಾಸ್', ಯಾವ ರಾಜ್ಯ, ಲಿಂಗ ಮತ್ತು ಜಾತಿಗೆ ಎಷ್ಟು ಪ್ರಾತಿನಿಧ್ಯ?
ನರೇಂದ್ರ ಮೋದಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jul 07, 2021 | 3:17 PM

ದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ಹೊಸ ಸಚಿವ ಸಂಪುಟದಲ್ಲಿ ಪರಿಶಿಷ್ಟ ಜಾತಿಯ 12 ಸಚಿವರು , ಪರಿಶಿಷ್ಟ ಪಂಗಡದ ಎಂಟು ಮಂದಿ ಮತ್ತು ಇತರ ಹಿಂದುಳಿದ ವರ್ಗದ 27 ಮಂತ್ರಿಗಳನ್ನು ಇರಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಬಲ್ಲಮೂಲಗಳ ಪ್ರಕಾರ ಹೊಸ ತಂಡದಲ್ಲಿ ಯಾದವ್, ಕುರ್ಮಿ, ದರ್ಜಿ, ಜಾಟ್, ಗುಜ್ಜರ್, ಖಂಡಾಯತ್, ಬೈರಗಿ, ಠಾಕೂರ್, ಕೋಲಿ, ವೊಕ್ಕಲಿಗ, ತುಳು ಗೌಡ ಮತ್ತು ಮಲ್ಲಾ ಮುಂತಾದ ಜಾತಿಯ ಪ್ರತಿನಿಧಿಗಳಿರಲಿದ್ದಾರೆ. ಹೊಸ ಮತ್ತು ಹಳೆಯ 43 ಸಚಿವರು ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನರೇಂದ್ರ ಮೋದಿ ಎರಡನೆಯ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರ ಈಗ ನಡೆಯುತ್ತಿರುವುದು ಸಚಿವ ಸಂಪುಟದ ಮೊದಲ ಪುನರ್ರಚನೆಯಾಗಿದೆ.  ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ (ಎಲ್ಲರ ಜತೆ ಎಲ್ಲರಿಗೂ ಅಭಿವೃದ್ಧಿ) ಎಂಬ ಸರ್ಕಾರದ ಧ್ಯೇಯವಾಕ್ಯವನ್ನು ಪ್ರಧಾನಿ ಮೋದಿ ಅನೇಕ ಬಾರಿ ಪುನರುಚ್ಚರಿಸಿದ್ದಾರೆ ಮತ್ತು ಎಲ್ಲರಿಗೂ ನ್ಯಾಯ ಒದಗಿಸುವುದು ಕೇಂದ್ರದ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.

ಉದ್ಯೋಗ ಮತ್ತು ಶಿಕ್ಷಣದಲ್ಲಿ ಸಾಮಾನ್ಯ ವರ್ಗದ ಬಡವರಿಗೆ ಶೇಕಡಾ 10 ರಷ್ಟು ಮೀಸಲಾತಿ ನೀಡಲು ಸಂವಿಧಾನವನ್ನು ತಿದ್ದುಪಡಿ ಮಾಡಲು 2019 ರಲ್ಲಿ ಸಂಸತ್ತು ಅನುಮೋದನೆ ನೀಡಿದಾಗ, ಮೋದಿ ಇದನ್ನು ಸಾಮಾಜಿಕ ನ್ಯಾಯದ ಗೆಲುವು ಎಂದು ಬಣ್ಣಿಸಿದ್ದರು.

ಮೋದಿಯ ಹೊಸ ತಂಡದಲ್ಲಿ ಯಾವ ಜಾತಿ,ಲಿಂಗ ಮತ್ತು ಭೌಗೋಳಿಕ ಪ್ರದೇಶಗಳಿಗೆ ಎಷ್ಟು ಪ್ರಾತಿನಿಧ್ಯ ನೀಡಲಾಗಿದೆ? ಮೂಲಗಳ ಪ್ರಕಾರ, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವಿಭಾಗಗಳ 12 ಸಚಿವರಲ್ಲದೆ, ಅಲ್ಪಸಂಖ್ಯಾತ ಗುಂಪುಗಳ ಐವರು ನಾಯಕರು – ಮುಸ್ಲಿಂ, ಸಿಖ್ ಮತ್ತು ಕ್ರಿಶ್ಚಿಯನ್ ಸಮುದಾಯಗಳಿಂದ ತಲಾ ಒಬ್ಬರು ಮತ್ತು ಇಬ್ಬರು ಬೌದ್ಧ ಧರ್ಮಕ್ಕೆ ಸೇರಿದ ಪ್ರತಿನಿಧಿಗಳಿರಲಿದ್ದಾರೆ.

1. ಪರಿಶಿಷ್ಟ ಜಾತಿಗೆ ಸೇರಿದ 12 ಸಚಿವರು – ರಾಜ್ಯಗಳ ಪ್ರಕಾರ (8): ಬಿಹಾರ, ಸಂಸದ, ಯುಪಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಕರ್ನಾಟಕ, ರಾಜಸ್ಥಾನ, ತಮಿಳುನಾಡು – ಸಮುದಾಯವಾರು (12): ಚಮರ್-ರಾಮದಾಸಿಯಾ, ಖತಿಕ್, ಪಾಸಿ, ಕೋರಿ, ಮಾದಿಗ, ಮಹರ್, ಅರುಂದತಿಯಾರ್, ಮೇಘವಾಲ್, ರಾಜ್‌ಬೋಂಶಿ, ಮಾಟುವಾ-ನಮಾಶುದ್ರ, ಧಂಗರ್, ದುಸಾಧ್ ಇಬ್ಬರು ಕೇಂದ್ರ ಸಚಿವರು

2. ಪರಿಶಿಷ್ಟ ಪಂಗಡದ 8 ಸಚಿವರು – ರಾಜ್ಯವಾರು(8): ಅರುಣಾಚಲ ಪ್ರದೇಶ, ಜಾರ್ಖಂಡ್, ಛತ್ತೀಸ್‌ಗಡ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಅಸ್ಸಾಂ – ಸಮುದಾಯವಾರು (7): ಗೊಂಡ್, ಸಂತಾಲ್, ಮಿಜಿ, ಮುಂಡಾ, ಟೀ ಬುಡಕಟ್ಟು, ಕೊಕಾನಾ, ಸೋನೊವಾಲ್ – ಕಚಾರಿ – 3 ಕ್ಯಾಬಿನೆಟ್ ಸಚಿವರು

3. 27 ಒಬಿಸಿ ಮಂತ್ರಿಗಳು ರಾಜ್ಯವಾರು (15) ಸಮುದಾಯವಾರು (19): ಯಾದವ್, ಕುರ್ಮಿ, ಜಾಟ್, ಗುರ್ಜಾರ್, ಖಂಡಾಯತ್, ಭಂಡಾರಿ, ಬೈರಗಿ, ಟೀ ಟ್ರೈಬ್, ಠಾಕೋರ್, ಕೋಲಿ, ವೊಕ್ಕಲಿಗಾ ತುಳು ಗೌಡ, ಈಜಾವಾ, ಲೋಧ್, ಅಗ್ರಿ, ವಂಜಾರಿ, ಮೈಟೈ, ನ್ಯಾಟ್, ಮಲ್ಲಾ-ನಿಶಾದ್ ಡಾರ್ಜಿ (ಅನೇಕ ಸಮುದಾಯಗಳು ಮೊದಲ ಬಾರಿಗೆ ಸ್ಥಾನ ಪಡೆಯುತ್ತಿವೆ) 5- ಒಬಿಸಿ ಕ್ಯಾಬಿನೆಟ್ ಸಚಿವರು

29 ಇತರ ಸಮುದಾಯದವರು- ಇತರ ಸಮುದಾಯಗಳಾದ ಬ್ರಾಹ್ಮಣ, ಬನಿಯಾ, ಕ್ಷತ್ರಿಯ, ಭೂಮಿಹಾರ್, ಕಾಯಸ್ಥ, ಲಿಂಗಾಯತ, ಪಟೇಲ್, ಮರಾಠಾ ಮತ್ತು ರೆಡ್ಡಿ. ಮಹಿಳೆಯರು: ಇಬ್ಬರು ಕ್ಯಾಬಿನೆಟ್ ಮಂತ್ರಿಗಳು ಸೇರಿದಂತೆ 11 ಸಚಿವೆಯರು ಇರಲಿದ್ದಾರೆ. ವಯಸ್ಸು: ಇಡೀ ಸಂಪುಟದ ಸರಾಸರಿ ವಯಸ್ಸು ಈಗ 58 ವರ್ಷಗಳು. ಅನುಭವ: ಆಯ್ಕೆಯಾದ 46 ಮಂತ್ರಿಗಳಿಗೆ ಕೇಂದ್ರ ಸಚಿವರಾಗಿರುವ ಅನುಭವ, 23 ಮಂದಿ ಮೂರು ಅಥವಾ ಹೆಚ್ಚಿನ ಅವಧಿಗೆ ಅನುಭವಿ ಸಂಸದರು, ನಾಲ್ವರು ಮಾಜಿ ಮುಖ್ಯಮಂತ್ರಿಗಳು, ಎಂಟು ಮಂದಿ ಮಾಜಿ ರಾಜ್ಯ ಸಚಿವರು ಮತ್ತು 39 ಮಾಜಿ ಶಾಸಕರು. 13 ವಕೀಲರು, ಆರು ವೈದ್ಯರು, ಐದು ಎಂಜಿನಿಯರ್‌ಗಳು, ಏಳು ನಾಗರಿಕ ಸೇವಾ ಸಿಬ್ಬಂದಿ ಇದ್ದಾರೆ.

ಭೌಗೋಳಿಕ ವೈವಿಧ್ಯ: 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮಂತ್ರಿಗಳು, ಈಶಾನ್ಯದಿಂದ ಐದು ಮಂತ್ರಿಗಳು.

ಯಾವ ರಾಜ್ಯದಲ್ಲಿ ಎಲ್ಲಿಯವರಿಗೆ ಎಷ್ಟು ಸ್ಥಾನ? * ಉತ್ತರ ಪ್ರದೇಶ: ಪೂರ್ವಾಂಚಲ್, ಅವಧ್, ಬ್ರಜ್, ಬುಂದೇಲ್‌ಖಂಡ್, ರೋಹಿಲಖಂಡ್, ಪಶ್ಚಿಮ್ ಪ್ರದೇಶ, ಹರಿತ್ ಪ್ರದೇಶ * ಮಹಾರಾಷ್ಟ್ರ: ಕೊಂಕಣ, ದೇಶ, ಖಂಡೇಶ್, ಮರಾಠವಾಡ, ವಿದರ್ಭ * ಗುಜರಾತ್: ಸೌರಾಷ್ಟ್ರ, ಉತ್ತರ, ದಕ್ಷಿಣ ಮತ್ತು ಮಧ್ಯ ಗುಜರಾತ್ * ಕರ್ನಾಟಕ: ಬಾಂಬೆ ಕರ್ನಾಟಕ, ಬೆಂಗಳೂರು ಕರ್ನಾಟಕ, ಹೈದರಾಬಾದ್ ಕರ್ನಾಟಕ, ಕರಾವಳಿ ಕರ್ನಾಟಕ * ಪಶ್ಚಿಮ ಬಂಗಾಳ: ಪ್ರೆಸಿಡೆನ್ಸಿ, ಮದಿನಿಪುರ ಮತ್ತು ಜಲ್ಪೈಗುರಿ * ಮಧ್ಯಪ್ರದೇಶ: ಚಂಬಲ್, ಸತ್ಪುರ ಮತ್ತು ಮಧ್ಯ ಸೆಂಟ್ರಲ್ ಮಧ್ಯ ಪ್ರದೇಶ * ಈಶಾನ್ಯ: ನಾಲ್ಕು ರಾಜ್ಯಗಳ ಐವರು ಮಂತ್ರಿಗಳು (ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ತ್ರಿಪುರ)

ಇದನ್ನೂ ಓದಿ: Union Cabinet Expansion ಮೋದಿ ಸಚಿವ ಸಂಪುಟದಲ್ಲಿ 12 ಮಂದಿ ಎಸ್​​ಸಿ, 8 ಎಸ್​​ಟಿ, 27 ಒಬಿಸಿ; ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನಿರೀಕ್ಷೆ

(Cabinet Reshuffle Caste Age Gender other factors in Narendra Modi’s new team)

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ