ಎಟಿಎಂನಲ್ಲಿ ಒಂದಕ್ಕೆ ಐದರಷ್ಟು ಹಣ: ಎಟಿಎಂ ಎದುರು ಮುಗಿಬಿದ್ದ ಗ್ರಾಹಕರು

| Updated By: ನಯನಾ ರಾಜೀವ್

Updated on: Jun 16, 2022 | 12:18 PM

ನೀವು 10000ರೂ. ನಗದು ಪಡೆಯಲು ಎಟಿಎಂಗೆ ಹೋಗಿ ಬದಲಾಗಿ ನಿಮಗೆ 50000ರೂ. ಸಿಕ್ಕರೆ ನೀವು ಏನು ಮಾಡುತ್ತೀರಿ? ಮತ್ತಷ್ಟು ಹಣವನ್ನು ಪಡೆಯಲು ಪ್ರಯತ್ನಿಸುತ್ತೀರಿ ಅಲ್ಲವೇ? ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ಇಂತಹದ್ದೇ ಘಟನೆ ನಡೆದಿದೆ. ನಾಗ್ಪುರ ನಗರದಿಂದ ಸುಮಾರು 30 ಕಿಮೀ ದೂರದಲ್ಲಿರುವ ಖಪರ್ಖೇಡಾ ಪಟ್ಟಣದ ಖಾಸಗಿ ಬ್ಯಾಂಕ್‌ನ ಎಟಿಎಂನಲ್ಲಿ ಗ್ರಾಹಕರೊಬ್ಬರಿಗೆ 500 ರೂ ಬದಲಿಗೆ 500ರೂ. ಮುಖಬೆಲೆಯ 5 ನೋಟುಗಳು ದೊರೆತಿವೆ.

ಎಟಿಎಂನಲ್ಲಿ ಒಂದಕ್ಕೆ ಐದರಷ್ಟು ಹಣ: ಎಟಿಎಂ ಎದುರು ಮುಗಿಬಿದ್ದ ಗ್ರಾಹಕರು
ATM
Image Credit source: NDTV
Follow us on

ನೀವು 10000ರೂ. ನಗದು ಪಡೆಯಲು ಎಟಿಎಂಗೆ ಹೋಗಿ ಬದಲಾಗಿ ನಿಮಗೆ 50000ರೂ. ಸಿಕ್ಕರೆ ಏನು ಮಾಡುತ್ತೀರಿ? ಮತ್ತಷ್ಟು ಹಣವನ್ನು ಪಡೆಯಲು ಪ್ರಯತ್ನಿಸುತ್ತೀರಿ ಅಲ್ಲವೇ?  ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ಇಂತಹದ್ದೇ ಘಟನೆ ನಡೆದಿದೆ. ನಾಗ್ಪುರ ನಗರದಿಂದ ಸುಮಾರು 30 ಕಿಮೀ ದೂರದಲ್ಲಿರುವ ಖಪರ್ಖೇಡಾ ಪಟ್ಟಣದ ಖಾಸಗಿ ಬ್ಯಾಂಕ್‌ನ ಎಟಿಎಂನಲ್ಲಿ ಗ್ರಾಹಕರೊಬ್ಬರಿಗೆ 500 ರೂ ಬದಲಿಗೆ 500ರೂ. ಮುಖಬೆಲೆಯ 5 ನೋಟುಗಳು ದೊರೆತಿವೆ.

ಎಟಿಎಂನಿಂದ ಗ್ರಾಹಕರೊಬ್ಬರು 500 ಡ್ರಾ ಮಾಡಲು ಪ್ರಯತ್ನಿಸಿದಾಗ ಅವರಿಗೆ ಆಶ್ಚರ್ಯ ಕಾದಿತ್ತು, 500 ರೂ,ಗಳ ಬದಲು 2,500 ರೂ ಸಿಕ್ಕಿತ್ತು.
ಈ ಸುದ್ದಿ ಕಾಳ್ಗಿಚ್ಚಿನಂತೆ ಎಲ್ಲೆಡೆ ಹರಡಿ ಕೆಲವೇ ನಿಮಿಷಗಳಲ್ಲಿ ಎಟಿಎಂ ಎದುರು ಗ್ರಾಹಕರ ಕ್ಯೂ ನಿಂತಿತ್ತು. ಬಳಿಕ ಗ್ರಾಹಕರೊಬ್ಬರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಸ್ಥಳಕ್ಕಾಗಮಿಸಿ ಎಟಿಎಂ ಕೇದ್ರವನ್ನು ಮುಚ್ಚಿ ಬ್ಯಾಂಕ್​ಗೆ ಮಾಹಿತಿ ರವಾನಿಸಿದ್ದಾರೆ.

ತಾಂತ್ರಿಕ ದೋಷದಿಂದ ಎಟಿಎಂನಲ್ಲಿ ಹೆಚ್ಚಿನ ಹಣ ಬರುತ್ತಿತ್ತು, ಎಂದು ಖಪರ್ಖೇಡ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

100 ರೂ. ಇರಿಸುವ ಜಾಗದಲ್ಲಿ 500 ರೂ. ಇರಿಸಿದ್ದು, ಈ ಗೊಂದಲಕ್ಕೆ ಕಾರಣವಾಗಿದೆ. ಹಾಗಾಗಿ 500 ರೂ. ಎಂಟ್ರಿ ಮಾಡಿದಾಗ 100ರೂ. ಬದಲು 500 ರೂ. ಮುಖಬೆಲೆಯ 5 ನೋಟುಗಳು ಸಿಕ್ಕಿದ್ದವು.

ಈ ಘಟನೆಯ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎನ್ನುವ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.

 

ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 12:13 pm, Thu, 16 June 22