Sippy Sidhu: ಶೂಟರ್ ಸಿಪ್ಪಿ ಸಿಧು ಹತ್ಯೆ ಪ್ರಕರಣ: 7 ವರ್ಷಗಳ ಬಳಿಕ ನ್ಯಾಯಮೂರ್ತಿ ಪುತ್ರಿ ಸಿಬಿಐ ವಶಕ್ಕೆ
ಚಂಡೀಗಢ: ಕಳೆದ 7 ವರ್ಷಗಳ ಹಿಂದೆ ನಡೆದ ರಾಷ್ಟ್ರೀಯ ಶೂಟರ್ ಹತ್ಯೆ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ, ಹತ್ಯೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಪುತ್ರಿಯನ್ನು ಸಿಬಿಐ ವಶಕ್ಕೆ ಪಡೆದಿದೆ. 2015ರಲ್ಲಿ ಚಂಡೀಗಢದ ಸೆಕ್ಟರ್ 27ರ ಉದ್ಯಾನದಲ್ಲಿ ರಾಷ್ಟ್ರೀಯ ಶೂಟರ್ ಹಾಗೂ ವಕೀಲರಾಗಿದ್ದ ಸುಖಮನ್ಪ್ರೀತ್ ಸಿಂಗ್ ಸಿಧು ಅಲಿಯಾಸ್ ಸಿಪ್ಪಿ ಸಿಧು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ.
ಚಂಡೀಗಢ: ಕಳೆದ 7 ವರ್ಷಗಳ ಹಿಂದೆ ನಡೆದ ರಾಷ್ಟ್ರೀಯ ಶೂಟರ್ ಸಿಪ್ಪಿ ಸಿಧು ಹತ್ಯೆ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ, ಹತ್ಯೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಪುತ್ರಿಯನ್ನು ಸಿಬಿಐ ವಶಕ್ಕೆ ಪಡೆದಿದೆ. 2015ರಲ್ಲಿ ಚಂಡೀಗಢದ ಸೆಕ್ಟರ್ 27ರ ಉದ್ಯಾನದಲ್ಲಿ ರಾಷ್ಟ್ರೀಯ ಶೂಟರ್ ಹಾಗೂ ವಕೀಲರಾಗಿದ್ದ ಸುಖಮನ್ಪ್ರೀತ್ ಸಿಂಗ್ ಸಿಧು ಅಲಿಯಾಸ್ ಸಿಪ್ಪಿ ಸಿಧು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ.
ಘಟನೆ ನಡೆದು 7 ವರ್ಷಗಳ ಬಳಿಕ ನ್ಯಾಯಮೂರ್ತಿಯೊಬ್ಬರ ಪುತ್ರಿಯನ್ನು ವಶಕ್ಕೆ ಪಡೆಯಲಾಗಿದೆ. ಸಿಬಿಐ ಅಧಿಕಾರಿಗಳು ಬುಧವಾರ ಹಿಮಾಚಲ ಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿ ಸಬೀನಾ ಅವರ ಪುತ್ರಿ ಕಲ್ಯಾಣಿ ಸಿಂಗ್ ಅವರನ್ನು ಬಂಧಿಸಿದ್ದಾರೆ. ನ್ಯಾಯಮೂರ್ತಿ ಸಬೀನಾ ಅವರು ಹಿಮಾಚಲ ಪ್ರದೇಶ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ.
ಮೃತ ಸಿಪ್ಪು ಸಿಧು ಅವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿಯಾದ ಎಸ್‌ಎಸ್ ಸಿಧು ಅವರ ಮೊಮ್ಮಗನಾಗಿದ್ದಾರೆ. ಆರೋಪಿ ಕಲ್ಯಾಣಿ ಸಿಂಗ್ ಅವರನ್ನು ವಿಚಾರಣೆಗಾಗಿ ಸಿಬಿಐ ನಾಲ್ಕು ದಿನಗಳ ಕಸ್ಟಡಿಗೆ ಪಡೆದುಕೊಂಡಿದೆ ಎಂದು ವರದಿಯಾಗಿದೆ.
ಘಟನೆ ಹಿನ್ನೆಲೆ ಏನು? ಅಂದು ಸೆಪ್ಟೆಂಬರ್ 20, 2015ನೇ ಇಸವಿ. ಶೂಟರ್ ಸಿಪ್ಪಿ ಸಿಧುವನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು, ಅವರ ಮೃತದೇಹವು ಉದ್ಯಾನದಲ್ಲಿ ಪತ್ತೆಯಾಗಿತ್ತು. 12 ಬೋರ್ ಗನ್ ಮೂಲಕ ಕೊಲೆ ಮಾಡಿರುವ ಕುರಿತು ಮಾಹಿತಿ ಲಭ್ಯವಾಗಿತ್ತು. ಗನ್ನಿಂದ ನಾಲ್ಕು ಗುಂಡುಗಳನ್ನು ಹಾರಿಸಲಾಗಿತ್ತು. ಚಂಡೀಗಢ ಪೊಲೀಸರು ಸೆಕ್ಟರ್ 26 ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದರು. ಜನವರಿ 2016 ರಲ್ಲಿ, ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು.
ಚಂಡೀಗಢ ಆಡಳಿತದ ಒತ್ತಾಯದ ಮೇರೆಗೆ ಸಿಬಿಐ 13 ಏಪ್ರಿಲ್ 2016 ರಂದು ಎಫ್‌ಐಆರ್ ದಾಖಲಿಸಿತ್ತು. “ಹೆಚ್ಚಿನ ತನಿಖೆಯ ಸಮಯದಲ್ಲಿ, ಪ್ರಕರಣದಲ್ಲಿ ಆರೋಪಿ (ಕಲ್ಯಾಣಿ ಸಿಂಗ್) ಭಾಗಿಯಾಗಿರುವುದು ಬೆಳಕಿಗೆ ಬಂದಿತು.
ಹಾಗೆಯೇ ಅವರನ್ನು ವಿಚಾರಣೆಗೆ ಒಳಪಡಿಸಿ ಬಂಧಿಸಲಾಗಿದೆ. “ಆರೋಪಿಯನ್ನು ಬುಧವಾರ ಚಂಡೀಗಢದ ವಿಶೇಷ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಹಾಗೆಯೇ ಹೆಚ್ಚಿನ ವಿಚಾರಣೆಗಾಗಿ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ.
ಹತ್ಯೆಯ ವೇಳೆ ಸಿಪ್ಪಿ ಹಂತಕನ ಜೊತೆ ಮಹಿಳೆಯೊಬ್ಬರು ಇದ್ದರು ಎಂದು ಸಿಬಿಐ ಈ ಮೊದಲೇ ತಿಳಿಸಿತ್ತು. ಪತ್ರಿಕೆಗೆ ಈ ಕುರಿತು ಜಾಹೀರಾತನ್ನೂ ನೀಡಿತ್ತು. ಒಂದೊಮ್ಮೆ ಮಹಿಳೆಯದ್ದು ಏನೂ ತಪ್ಪಿಲ್ಲದಿದ್ದರೆ ನಮ್ಮನ್ನು ಸಂಪರ್ಕಿಸಬಹುದು, ಇಲ್ಲದಿದ್ದರೆ ಆಕೆಯೂ ಅಪರಾಧದಲ್ಲಿ ಭಾಗಿಯಾಗಿದ್ದಾಳೆ ಎಂದು ಭಾವಿಸಲಾಗುವುದು ಎಂದು ಹೇಳಲಾಗಿತ್ತು.
ಆದರೆ ಯಾವುದೂ ಕಾರ್ಯರೂಪಕ್ಕೆ ಬರದಿದ್ದಾಗ, ಡಿಸೆಂಬರ್ 2021 ರಲ್ಲಿ, ಸಿಬಿಐ ಬಹುಮಾನದ ಹಣವನ್ನು 10 ಲಕ್ಷಕ್ಕೆ ದ್ವಿಗುಣಗೊಳಿಸಿತು. ಈ ಜಾಹೀರಾತಿನಲ್ಲಿ ಯಾರಿಗಾದರೂ ಕೊಲೆಯ ಬಗ್ಗೆ ಅಥವಾ ಯಾವುದೇ ಸಂಬಂಧಿತ ಸಂಗತಿಯ ಬಗ್ಗೆ ಮಾಹಿತಿ ಇದ್ದರೆ, ತಮ್ಮನ್ನು ಸಂಪರ್ಕಿಸುವಂತೆ ತಿಳಿಸಲಾಗಿತ್ತು. ಆಗಲೂ ಯಾವುದೇ ಫಲಿತಾಂಶ ಬಂದಿರಲಿಲ್ಲ.
ಈ ಪ್ರಕರಣದಲ್ಲಿ ಸಿಧು ಅವರ ಕುಟುಂಬದ ಸದಸ್ಯರೊಬ್ಬರು, ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಮನೆಯಿಂದ ಹೊರಡುವಾಗ ಸೆಕ್ಟರ್-26ರಲ್ಲಿ ಸ್ನೇಹಿತರೊಬ್ಬರನ್ನು ಭೇಟಿಯಾಗುವುದಾಗಿ ಹೇಳಿದ್ದರು. ಬಳಿಕ ಫೋನ್ ನಾಟ್ ರೀಚೆಬಲ್ನಲ್ಲಿತ್ತು. ಕೆಲವೇ ಸಮಯದಲ್ಲಿ ಪೊಲೀಸರು ನಮ್ಮನ್ನು ಸಂಪರ್ಕಿಸಿದರು, ಕಾರು ಕೂಡ ಅಲ್ಲಿಯೇ 200 ಮೀಟರ್ ದೂರದಲ್ಲಿತ್ತು ಎಂದು ಪೋಷಕರು ಹೇಳಿದ್ದಾರೆ.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:37 am, Thu, 16 June 22