Independence Day 2023: ಕೆಂಪುಕೋಟೆಯಲ್ಲಿ ಭಾಯಿಯೋ ಔರ್ ಬೆಹೆನೋ ಬಿಟ್ಟು ಬೇರೆ ಪದ ಬಳಸಿ ಭಾಷಣ ಆರಂಭಿಸಿದ ಮೋದಿ

ಪ್ರತಿ ಬಾರಿಯೂ ಪ್ರಧಾನಿ ಮೋದಿ ಭಾಷಣ ಆರಂಭಿಸುವಾಗ ಮಿತ್ರೋ, ಭಾಯಿಯೋ ಔರ್ ಬೆಹನೋ ಎಂದೇ ಸಂಬೋಧಿಸುತ್ತಿದ್ದರು. ಆದರೆ ಈ ಬಾರಿ ಆ ಈ ಪದಗಳನ್ನು ಬಳಕೆ ಮಾಡಿಲ್ಲ ಬದಲಾಗಿದೆ ‘ಪರಿವಾರ್​ಜನ್’ ಎನ್ನುವ ಪದವನ್ನು ಬಳಕೆ ಮಾಡಿದ್ದಾರೆ ಹಾಗೆಂದರೆ ಪರಿವಾರದವರೇ ಎಂದರ್ಥ.

Independence Day 2023: ಕೆಂಪುಕೋಟೆಯಲ್ಲಿ ಭಾಯಿಯೋ ಔರ್ ಬೆಹೆನೋ ಬಿಟ್ಟು ಬೇರೆ ಪದ ಬಳಸಿ ಭಾಷಣ ಆರಂಭಿಸಿದ ಮೋದಿ
ನರೇಂದ್ರ ಮೋದಿ
Follow us
|

Updated on: Aug 15, 2023 | 10:21 AM

ಪ್ರತಿ ಬಾರಿಯೂ ಪ್ರಧಾನಿ ನರೇಂದ್ರ ಮೋದಿ(Narendra Modi) ಭಾಷಣ ಆರಂಭಿಸುವಾಗ ಮಿತ್ರೋ, ಭಾಯಿಯೋ ಔರ್ ಬೆಹನೋ ಎಂದೇ ಸಂಬೋಧಿಸುತ್ತಿದ್ದರು. ಆದರೆ ಈ ಬಾರಿ ಆ ಈ ಪದಗಳನ್ನು ಬಳಕೆ ಮಾಡಿಲ್ಲ ಬದಲಾಗಿದೆ ‘ಪರಿವಾರ್​ಜನ್’ ಎನ್ನುವ ಪದವನ್ನು ಬಳಕೆ ಮಾಡಿದ್ದಾರೆ ಹಾಗೆಂದರೆ ಪರಿವಾರದವರೇ ಎಂದರ್ಥ. ಮಣಿಪುರ ವಿಚಾರವಾಗಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಸಹಜ ಸ್ಥಿತಿ ಮರಳುತ್ತಿದೆ. ಮಣಿಪುರದಲ್ಲಿ ಶಾಂತಿ ಕಾಪಾಡಲಾಗುವುದು ಎಂದರು.

ಮಣಿಪುರದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಅಲ್ಲಿ ಶಾಂತಿ ನೆಲೆಸುತ್ತಿದೆ, ಶಾಂತಿಯೊಂದೇ ಸಮಾಧಾನದ ಮಾರ್ಗ ಎಂದರು. ಶಾಂತಿಯ ಮೂಲಕ ಮಾತ್ರ ಪರಿಹಾರವನ್ನು ಕಂಡುಕೊಳ್ಳಬಹುದು.

ಮತ್ತಷ್ಟು ಓದಿ: India Independence Day: ಸ್ವಾತಂತ್ರ್ಯ ದಿನಕ್ಕೆ ಡೂಡಲ್ ರಚಿಸುವ ಮೂಲಕ ಭಾರತೀಯರ ಸಂಭ್ರಮವನ್ನು ಇಮ್ಮಡಿಗೊಳಿಸಿದ ಗೂಗಲ್

ಕೇಂದ್ರ ಮತ್ತು ರಾಜ್ಯ ಸರ್ಕಾರವು ಪರಿಹಾರ ಕಂಡುಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಪ್ರಧಾನಿ ಹೇಳಿದರು. ಕೆಂಪು ಕೋಟೆಯಿಂದ ತಮ್ಮ 10 ನೇ ಸ್ವಾತಂತ್ರ್ಯ ಭಾಷಣದಲ್ಲಿ, ಮೋದಿ ಅವರು ಭಾರತೀಯ ಆರ್ಥಿಕತೆಯ ಬೆಳವಣಿಗೆ, ಸಾಮಾಜಿಕ ಕಲ್ಯಾಣ, ರಾಷ್ಟ್ರೀಯ ಭದ್ರತೆ ಮತ್ತು ಮಹಿಳಾ ಸಬಲೀಕರಣದಂತಹ ವಿಷಯಗಳ ಬಗ್ಗೆ ಪ್ರಸ್ತಾಪಿಸಿದರು.

ಹಣದುಬ್ಬರ ತಗ್ಗಿಸುವ ಪ್ರಯತ್ನ

ನನ್ನ ದೇಶದ ಜನರ ಮೇಲಿನ ಹಣದುಬ್ಬರದ ಹೊರೆಯನ್ನು ಕಡಿಮೆ ಮಾಡಲು ನಾನು ಈ ದಿಕ್ಕಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ನನ್ನ ಪ್ರಯತ್ನ ಮುಂದುವರಿಯುತ್ತದೆ. ಗ್ರಾಮದಿಂದ ಗ್ರಾಮಕ್ಕೆ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ, ಸರ್ಕಾರ ಯಾವ ಯೋಜನೆಗಳಿಗೆ ಅಡಿಗಲ್ಲು ಹಾಕುತ್ತದೋ ಅದು ನಮ್ಮ ಅವಧಿಯಲ್ಲಿಯೇ ಪೂರ್ಣಗೊಳ್ಳುತ್ತದೆ.

ಡಿಜಿಟಲ್ ಇಂಡಿಯಾ

ಭಾರತವು 1000 ವರ್ಷಗಳ ಗುಲಾಮಗಿರಿ ಮತ್ತು ಮುಂಬರುವ 1000 ವರ್ಷಗಳ ಭವ್ಯ ಹಂತದಲ್ಲಿ ನಿಂತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಅದಕ್ಕಾಗಿಯೇ ನಾವು ಕಾಯಬೇಕಾಗಿಲ್ಲ. ಸಂದಿಗ್ಧತೆಯಲ್ಲಿ ಬದುಕಬೇಡಿ. ಕಳೆದು ಹೋದ ಪರಂಪರೆಯ ಬಗ್ಗೆ ಹೆಮ್ಮೆ ಪಡುತ್ತಾ, ಕಳೆದು ಹೋದ ಏಳಿಗೆಯನ್ನು ಸಾಧಿಸುತ್ತಾ ಮುನ್ನಡೆಯಬೇಕು. ನಾವು ಯುವ ಶಕ್ತಿಯಲ್ಲಿ ನಂಬಿಕೆ ಇಟ್ಟಿದ್ದೇವೆ.

ಜಗತ್ತಿನ ಯುವಜನತೆ ಆಶ್ಚರ್ಯ ಪಡುತ್ತಿದ್ದಾರೆ. ಭಾರತ ಮಾಡಿದ ಅದ್ಭುತಗಳು ಕೇವಲ ದೆಹಲಿ, ಮುಂಬೈ ಮತ್ತು ಚೆನ್ನೈಗೆ ಮಾತ್ರ ಸೀಮಿತವಾಗಿಲ್ಲ. ಟೈರ್ II ಮತ್ತು ಟೈರ್ III ನಗರಗಳು ಸಹ ದಾಖಲೆಗಳನ್ನು ಸೃಷ್ಟಿಸುತ್ತಿವೆ. ನಮ್ಮ ಸಣ್ಣ ನಗರಗಳು ಗಾತ್ರ ಮತ್ತು ಜನಸಂಖ್ಯೆಯಲ್ಲಿ ಚಿಕ್ಕದಾಗಿರಬಹುದು. ಆದರೆ ಭರವಸೆ ಮತ್ತು ಆಕಾಂಕ್ಷೆ ಮತ್ತು ಪ್ರಯತ್ನ ಮತ್ತು ಪ್ರಭಾವ ಯಾವುದಕ್ಕೂ ಕಡಿಮೆ ಇಲ್ಲ.

ಕೊರೊನಾ ನಂತರ ವಿಶ್ವ ಕ್ರಮವು ಬದಲಾಗುತ್ತಿದೆ

ಇಂದು ದೇಶವು ಜಿ-20 ಶೃಂಗಸಭೆಯನ್ನು ಆಯೋಜಿಸುವ ಅವಕಾಶವನ್ನು ಪಡೆದುಕೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಕಳೆದ ಒಂದು ವರ್ಷದಿಂದ, ಜಿ 20ಯಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ, ಇದು ದೇಶದ ಸಾಮರ್ಥ್ಯದ ಬಗ್ಗೆ ಜಗತ್ತಿಗೆ ಅರಿವು ಮೂಡಿಸಿದೆ.

2014 ಹಾಗೂ 2019ರಲ್ಲಿ ಸರ್ಕಾರವನ್ನು ನೀವು ಗೆಲ್ಲಿಸಿದಾಗ ನಮಗೆ ದೇಶವನ್ನು ಸುಧಾರಣೆ ಮಾಡುವ ಧೈರ್ಯ ಬಂದಿತ್ತು ಎಂದು ಮೋದಿ ಹೇಳಿದರು.

ದೇಶವು ಮಣಿಪುರದ ಜನರೊಂದಿಗೆ ನಿಂತಿದೆ, ನಮ್ಮ ಸರ್ಕಾರವು ಒಬಿಸಿಗಳ ನುರಿತ ಕಾರ್ಮಿಕರಿಗೆ, ಅಕ್ಕಸಾಲಿಗರಿಗೆ 1300 ರಿಂದ 1500 ಕೋಟಿ ರೂಪಾಯಿಗಳ ಯೋಜನೆಯನ್ನು ಪ್ರಾರಂಭಿಸುತ್ತದೆ. ಮುಂದಿನ ತಿಂಗಳು ವಿಶ್ವಕರ್ಮ ಜಯಂತಿಯಂದು ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಮೋದಿ ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ತಾಜಾ ಸುದ್ದಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
ವಿದ್ಯಾರ್ಥಿಗಳ ನಡುವೆಯೂ  ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಜನಪ್ರಿಯರು
ವಿದ್ಯಾರ್ಥಿಗಳ ನಡುವೆಯೂ  ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಜನಪ್ರಿಯರು
 ದುಡ್ಡಿನ ವಿಷಯದಲ್ಲಿ ದರ್ಶನ್ ಕಡ್ಡಿ ಮುರಿದಂತೆ ಮಾತಾಡುತ್ತಿದ್ದರು: ಕೆ ಮಂಜು
 ದುಡ್ಡಿನ ವಿಷಯದಲ್ಲಿ ದರ್ಶನ್ ಕಡ್ಡಿ ಮುರಿದಂತೆ ಮಾತಾಡುತ್ತಿದ್ದರು: ಕೆ ಮಂಜು
ಲೂಟಿ ಹೋಡೆಯೋಕೆ ಸರ್ಕಾರ ಸಿದ್ಧತೆ ಮಾಡ್ತಿದೆ -ಆರ್.ಅಶೋಕ್
ಲೂಟಿ ಹೋಡೆಯೋಕೆ ಸರ್ಕಾರ ಸಿದ್ಧತೆ ಮಾಡ್ತಿದೆ -ಆರ್.ಅಶೋಕ್
ಏಯ್ ಅಂದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಜೊತೆ ಜಗಳಕ್ಕೆ ನಿಂತ ಪೊಲೀಸ್!
ಏಯ್ ಅಂದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಜೊತೆ ಜಗಳಕ್ಕೆ ನಿಂತ ಪೊಲೀಸ್!