ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ (Covid 19 Vaccine Drive) ವೇಗದಿಂದ ಸಾಗುತ್ತಿದೆ. ಈಗಾಗಲೇ 100 ಕೋಟಿ ಡೋಸ್ ನೀಡಿಕೆ ಮುಗಿದು ದಾಖಲೆ ಸೃಷ್ಟಿಯಾಗಿದೆ. ಶುಕ್ರವಾರ ಅಂದರೆ ಅಕ್ಟೋಬರ್ 29ರ ವೇಳೆಗೆ 105 ಕೋಟಿಗೂ ಹೆಚ್ಚು ಡೋಸ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಶುಕ್ರವಾರ ಒಂದೇ ದಿನ ಸಂಜೆ 7ಗಂಟೆವರೆಗೆ 51 ಲಕ್ಷಕ್ಕೂ ಅಧಿಕ ಡೋಸ್ ಲಸಿಕೆ ನೀಡಲಾಗಿತ್ತು ಎಂದು ಹೇಳಿದೆ.
ಟ್ವೀಟ್ ಮಾಡಿರುವ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಇಲ್ಲಿಯವರೆಗೆ 105 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಇದು ವಿಜಯ.. ಭಾರತದ ಜನರಿಗೆ ಅಭಿನಂದನೆಗಳು. ಕೊವಿಡ್ 19 ಲಸಿಕೆ ಅಭಿಯಾನ ಹೊಸ ದಾಖಲೆಗಳನ್ನು ನಿರ್ಮಿಸಿದೆ ಎಂದು ಹೇಳಿದ್ದಾರೆ. ದೇಶದಲ್ಲಿ ಕೊರೊನಾ ವೈರಸ್ ವಿರುದ್ಧ ಲಸಿಕೆ ಅಭಿಯಾನ ಜನವರಿ 16ರಂದು ಶುರುವಾಗಿದೆ. ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್ಗೆ ನೀಡಲಾಗಿತ್ತು. ಎರಡನೇ ಹಂತದ ಕೊರೊನಾ ಲಸಿಕೆ ನೀಡಿಕೆ ಮಾರ್ಚ್ 1ರಿಂದ ಪ್ರಾರಂಭವಾಗಿ, 60 ವರ್ಷ ಮೇಲ್ಪಟ್ಟವರಿಗೆ ಮತ್ತು 45 ವರ್ಷ ಮೇಲ್ಪಟ್ಟು, ಬೇರೆ ಕೆಲವು ರೋಗಗಳಿಂದ ಬಳಲುತ್ತಿರುವವರಿಗೆ ನೀಡಲಾಯಿತು. ಹಾಗೇ, ಏಪ್ರಿಲ್ 1ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ನೀಡಲು ಶುರು ಮಾಡಲಾಯಿತು. ಅದಾದ ನಂತರ ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲು ಪ್ರಾರಂಭ ಮಾಡಲಾಯಿತು.
1️⃣0️⃣5️⃣ Crore Vaccines of Victory!
Congratulations to the people as India’s #COVID19 vaccination drive achieves new accolades. pic.twitter.com/WZuJUEtHtJ
— Dr Mansukh Mandaviya (@mansukhmandviya) October 29, 2021
ಭಾರತ ಅಕ್ಟೋಬರ್ 21ರಂದು 100 ಕೋಟಿ ಡೋಸ್ ಲಸಿಕೆ ನೀಡಿಕೆಯ ದಾಖಲೆ ನಿರ್ಮಿಸಿದೆ. ಅಂದು ಪ್ರಧಾನಿ ನರೇಂದ್ರ ಮೋದಿ, ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸೇರಿ ಅನೇಕ ಗಣ್ಯರು ಇಲ್ಲಿನ ಆರೋಗ್ಯ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ್ದರು. ದೇಶದ ಜನರ ಸಹಕಾರಕ್ಕೆ ಕೃತಜ್ಞತೆಯನ್ನೂ ಹೇಳಿದ್ದರು. ಭಾರತದ ಲಸಿಕೆ ಅಭಿಯಾನದ ಸಾಧನೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘಿಸಿದೆ. ಶತಕೋಟಿ ಡೋಸ್ ಲಸಿಕೆ ನೀಡಿದ ಎರಡನೇ ದೇಶ ಭಾರತ. ಅದರ ಬೆನ್ನಲ್ಲೇ ಇಲ್ಲಿ ಲಸಿಕೆ ಅಭಿಯಾನವನ್ನು ಇನ್ನಷ್ಟು ವೇಗಗೊಳಿಸಲಾಗಿದೆ.
ಇದನ್ನೂ ಓದಿ: Rajinikanth: ರಜನಿಕಾಂತ್ಗೆ ಹೃದಯದ ಸಮಸ್ಯೆ; ಆಸ್ಪತ್ರೆಗೆ ದಾಖಲಾಗಿರುವ ತಲೈವಾ ಆರೋಗ್ಯ ಸ್ಥಿತಿ ಈಗ ಹೇಗಿದೆ?
ಜಿಮ್ನಲ್ಲಿ ಪುನೀತ್ ರಾಜ್ಕುಮಾರ್ ವರ್ಕೌಟ್: ಹೇಗಿರುತ್ತಿತ್ತು ಗೊತ್ತಾ ಅಪ್ಪು ಕಸರತ್ತು? ಇಲ್ಲಿದೆ ವಿಡಿಯೋ
Published On - 9:40 am, Sat, 30 October 21