
ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕೊರೊನಾ ಲಸಿಕೆ (Covid 19 Vaccination) ಅಭಿಯಾನ ಅದ್ಭುತ ಗುರಿ ಸಾಧಿಸಿದೆ. ಇಂದು ಒಂದೇ ದಿನ 2 ಕೋಟಿಗೂ ಅಧಿಕ ಡೋಸ್ಗಳಷ್ಟು ಕೊವಿಡ್ 19 ಲಸಿಕೆಯನ್ನು ನೀಡಲಾಗಿದೆ. ಕೊರೊನಾ ಲಸಿಕೆ ಅಭಿಯಾನವನ್ನು ಜನವರಿಯಲ್ಲಿ ಶುರು ಮಾಡಲಾಗಿದ್ದು, ಆಗಿನಿಂದ ಈವರೆಗೆ ಇದೇ ಮೊದಲ ಬಾರಿಗೆ 2 ಕೋಟಿ ಡೋಸ್ ಗಡಿ ದಾಟಿದ್ದು ದಾಖಲೆಯನ್ನು ನಿರ್ಮಿಸಿದಂತಾಗಿದೆ. ಅಂದಹಾಗೆ ಇವತ್ತು ಬರೋಬ್ಬರಿ 2,11,28,784 ಡೋಸ್ಗಳನ್ನು ನೀಡಿದ್ದಾಗಿ ಕೊವಿನ್ ಪೋರ್ಟಲ್ನಲ್ಲಿ ದಾಖಲಾಗಿದೆ. ಮಧ್ಯಾಹ್ನ 1.30ರ ಹೊತ್ತಿಗೇ ಲಸಿಕೆ 1 ಕೋಟಿ ಡೋಸ್ ಗಡಿ ದಾಟಿತ್ತು.
ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಹಿನ್ನೆಲೆಯಲ್ಲಿ ಇಂದು ದೇಶಾದ್ಯಂತ ಕೊವಿಡ್ 19 ಲಸಿಕಾ ಬೃಹತ್ ಮೇಳವನ್ನು ಆಯೋಜಿಸಲಾಗಿತ್ತು. ಇಂದು ಒಂದೇದಿನ 2 ಕೋಟಿ ಡೋಸ್ ಗಡಿ ದಾಟುವ ಮೂಲಕ ದೇಶ ಕೊವಿಡ್ 19 ಲಸಿಕೆ ಅಭಿಯಾನದಲ್ಲಿ ಮತ್ತೊಂದು ಹೆಜ್ಜೆ ಮುಂದಡಿ ಇಟ್ಟಿದೆ. ದೇಶದಲ್ಲಿ ಒಟ್ಟಾರೆ 78.68 ಕೋಟಿ ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿದ ಕೇಂದ್ರ ಆರೋಗ್ಯ ಸಚಿವಾಲಯ, ಇಂದು 2 ಕೋಟಿಗೂ ಹೆಚ್ಚು ಡೋಸ್ ಕೊರೊನಾ ಲಸಿಕೆ ನೀಡುವ ಮೂಲಕ ಭಾರತದ ಕೊವಿಡ್ 19 ವಿರುದ್ಧ ಹೋರಾಟಕ್ಕೆ ಮತ್ತಷ್ಟು ಬಲ ಬಂದಿದೆ ಎಂದು ಖುಷಿ ಹಂಚಿಕೊಂಡಿದೆ.
ಇನ್ನು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಫುಲ್ ಖುಷಿಯಾಗಿದ್ದಾರೆ. ಇಂದಿನ ಲಸಿಕಾ ಮೇಳ ತುಂಬ ವೇಗವಾಗಿ ನಡೆಯಿತು. ಆರೋಗ್ಯ ಕಾರ್ಯಕರ್ತರ ಶ್ರಮವನ್ನು ಶ್ಲಾಘಿಸಲೇಬೇಕು ಎಂದು ಹೇಳಿದ್ದಾರೆ. ಮಧ್ಯಾಹ್ನ 1.30ರ ಹೊತ್ತಿಗೆ ಒಂದು ಕೋಟಿ ಡೋಸ್ ಮೀರಿದಾಗಲೇ ಟ್ವೀಟ್ ಮಾಡಿದ್ದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟಿದ ದಿನದಂತು ದೇಶ 1 ಕೋಟಿ ಡೋಸ್ ಕೊವಿಡ್ 19 ಲಸಿಕೆಯನ್ನು ನೀಡಿದೆ. ಇನ್ನೂ ಸಂಜೆಯವರೆಗೆ ಸಮಯವಿದೆ. ಇಂದು ಕೊರೊನಾ ಲಸಿಕೆ ನೀಡುವುದರಲ್ಲಿ ನಾವು ಖಂಡಿತ ದಾಖಲೆ ಬರೆಯುತ್ತೇವೆ. ಇದೇ ಪ್ರಧಾನಿ ಮೋದಿಯವರಿಗೆ ನೀಡುವ ಉಡುಗೊರೆ ಎಂದು ಹೇಳಿದ್ದರು.
ಭಾರತದಲ್ಲಿ ಜನವರಿಯಿಂದ ಕೊವಿಡ್ 19 ಲಸಿಕಾ ಅಭಿಯಾನ ಶುರುವಾಗಿದ್ದರೂ ಕೆಲವು ಅಡಚಣೆಗಳ ಕಾರಣದಿಂದ ಮಧ್ರ ಸ್ವಲ್ಪ ದಿನ ತೊಡಕಾಗಿತ್ತು. ಆದರೆ ಈಗ ಅಭಿಯಾನ ವೇಗ ಪಡೆದುಕೊಂಡಿದೆ. ಇಲ್ಲಿಯವರೆಗೆ ಆಗಸ್ಟ್ 27, ಆಗಸ್ಟ್ 31 ಮತ್ತು ಸೆಪ್ಟೆಂಬರ್ 6ರಂದು 1 ಕೋಟಿಗೂ ಹೆಚ್ಚು ಡೋಸ್ಗಳಷ್ಟು ಕೊರೊನಾ ಲಸಿಕೆ ನೀಡಲಾಗಿತ್ತು.
ಇದನ್ನೂ ಓದಿ: Vaccination: ದೇಶದಲ್ಲಿ ಇಂದು ಬೃಹತ್ ಲಸಿಕೆ ಮೇಳ; ಈಗಾಗಲೇ 1 ಕೋಟಿ ಡೋಸ್ ಲಸಿಕೆ ನೀಡಿ ದಾಖಲೆ
ದುರ್ಗಾಮಾತೆ ಪರಮಭಕ್ತ ಪ್ರಧಾನಿ ಮೋದಿ ನಾಲ್ಕು ದಶಕಗಳಿಂದ ನವರಾತ್ರಿ ಉಪವಾಸ ವ್ರತ ಅಚರಿಸಿಕೊಂಡು ಬಂದಿದ್ದಾರೆ!
ಬಿಗ್ ಬಾಸ್ ಮನೆಯಲ್ಲಿ ಶಮಿತಾ ಜತೆಗೆ ಸಲಿಗೆ; ಮೌನ ಮುರಿದ ರಾಕೇಶ್ ಬಾಪಟ್ ಮಾಜಿ ಪತ್ನಿ
Published On - 6:36 pm, Fri, 17 September 21