AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ಮನೆಯಲ್ಲಿ ಶಮಿತಾ ಜತೆಗೆ ಸಲಿಗೆ; ಮೌನ ಮುರಿದ ರಾಕೇಶ್​ ಬಾಪಟ್​ ಮಾಜಿ ಪತ್ನಿ  

ಬಿಗ್ ಬಾಸ್ ಓಟಿಟಿ ಕಾರ್ಯಕ್ರಮಕ್ಕೆ ಕಾಲಿಟ್ಟ ದಿನದಿಂದಲೂ ಶಮಿತಾ ಶೆಟ್ಟಿ ಮತ್ತು ರಾಕೇಶ್ ಬಾಪಟ್ ಹೆಚ್ಚು ಆಪ್ತವಾಗಿದ್ದಾರೆ. ಇಬ್ಬರೂ ಒಂದೇ ವಯೋಮಾನದವರಾದ ಕಾರಣ ಹೆಚ್ಚು ಸಲುಗೆ ಬೆಳೆದಿದೆ.

ಬಿಗ್​ ಬಾಸ್​ ಮನೆಯಲ್ಲಿ ಶಮಿತಾ ಜತೆಗೆ ಸಲಿಗೆ; ಮೌನ ಮುರಿದ ರಾಕೇಶ್​ ಬಾಪಟ್​ ಮಾಜಿ ಪತ್ನಿ  
ಬಿಗ್​ ಬಾಸ್​ ಮನೆಯಲ್ಲಿ ಶಮಿತಾ ಜತೆಗೆ ಸಲಿಗೆ; ಮೌನ ಮುರಿದ ರಾಕೇಶ್​ ಬಾಪಟ್​ ಮಾಜಿ ಪತ್ನಿ  
TV9 Web
| Edited By: |

Updated on: Sep 17, 2021 | 5:59 PM

Share

ರಾಕೇಶ್​ ಬಾಪಟ್​ ಹಾಗೂ ಶಮಿತಾ ಶೆಟ್ಟಿ ಬಿಗ್​ ಬಾಸ್​ ಒಟಿಟಿಯಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇವರಿಬ್ಬರೂ ಮದುವೆ ಆದರೆ ಉತ್ತಮವಾಗಿರುತ್ತಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಈಗ ಇವರಿಬ್ಬರ ಒಡನಾಟದ ಬಗ್ಗೆ ರಾಕೇಶ್​ ಬಾಪಟ್​ ಮಾಜಿ ಪತ್ನಿ ರಿಧಿ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಮಾತು ಕೇಳಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.

ಬಿಗ್ ಬಾಸ್ ಓಟಿಟಿ ಕಾರ್ಯಕ್ರಮಕ್ಕೆ ಕಾಲಿಟ್ಟ ದಿನದಿಂದಲೂ ಶಮಿತಾ ಶೆಟ್ಟಿ ಮತ್ತು ರಾಕೇಶ್ ಬಾಪಟ್ ಹೆಚ್ಚು ಆಪ್ತವಾಗಿದ್ದಾರೆ. ಇಬ್ಬರೂ ಒಂದೇ ವಯೋಮಾನದವರಾದ ಕಾರಣ ಹೆಚ್ಚು ಸಲುಗೆ ಬೆಳೆದಿದೆ. ಅಲ್ಲದೇ, ಪರಸ್ಪರ ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತಿದ್ದಾರೆ. ಅವರಿಬ್ಬರು ಮದುವೆ ಆಗುವ ಸಾಧ್ಯತೆ ಹೆಚ್ಚಿದೆ ಎಂದು ಕೆಲವರು ಅಭಿಪ್ರಾಯ ಪಡುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಶಮಿತಾಗೆ ಹಲವು ಬಾರಿ ರಾಕೇಶ್ ಕಿಸ್ ಮಾಡಿದ ಬಳಿಕವಂತೂ ಈ ವಿಚಾರ ಇನ್ನಷ್ಟು ಪುಷ್ಠಿ ಪಡೆದುಕೊಂಡಿದೆ. ಈಗ ರಾಕೇಶ್​ ಬಾಪಟ್ ಮಾಜಿ​ ಹೆಂಡತಿ ರಿಧಿ ಈ ಬಗ್ಗೆ ಮೌನ ಮುರಿದಿದ್ದಾರೆ. ರಾಕೇಶ್​ ಖುಷಿ ಆಗಿದ್ದಾನೆ ಎಂದರೆ ನಾನು ಕೂಡ ಖುಷಿಯಾಗುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಈ ಮೂಲಕ ಅವರ ಸಂಬಂಧ ಬಗ್ಗೆ ತಮ್ಮದೇನು ತಕರಾರು ಇಲ್ಲ ಎಂದು ಪರೋಕ್ಷವಾಗಿ ಹೇಳಿದ್ದರು.

‘ಬಿಗ್​ ಬಾಸ್​ನಲ್ಲಿ ಕಾಣುತ್ತಿದ್ದಾನಲ್ಲ, ಅದೇ ರೀತಿಯಲ್ಲಿ ರಾಕೇಶ್​ ಇದ್ದಾನೆ. ಇಬ್ಬರಿಗಿಂತ ಹೆಚ್ಚು ಜನರು ಅವನ ಸುತ್ತ ಇದ್ದರೆ ಅದು ಅವನಿಗೆ ದೊಡ್ಡ ಗುಂಪು. ಅರಚಾಟ, ಕೂಗಾಟ ರಾಕೇಶ್​ಗೆ ಇಷ್ಟ ಆಗುವುದಿಲ್ಲ. ನಂಬುವವರ ಜತೆ ಆತ ಹೆಚ್ಚು ಸಲುಗೆಯಿಂದ ಇರುತ್ತಾನೆ. ನಿಶಾಂತ್​ ನನ್ನ ಗೆಳೆಯ. ಅವನು ಉತ್ತಮವಾಗಿ ಆಡುತ್ತಿದ್ದಾನೆ. ನನಗ ಗೆಳೆಯರನ್ನೇ ಬಿಗ್​ ಬಾಸ್​ನಲ್ಲಿ ನೋಡಿದಂತೆ ಭಾಸವಾಗುತ್ತಿದೆ’ ಎಂದಿದ್ದಾರೆ ಅವರು.

ಇತ್ತೀಚೆಗೆ ಬಿಗ್ ಬಾಸ್ ಮನೆಗೆ ಶಮಿತಾ ಶೆಟ್ಟಿಯವರ ತಾಯಿ ಸುನಂದಾ ಶೆಟ್ಟಿ ಭೇಟಿ ನೀಡಿದ್ದರು. ಮಗಳ ಪರ್ಫಾಮೆನ್ಸ್ ಬಗ್ಗೆ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದರು. ಅಲ್ಲದೇ ಈ ವೇಳೆ ರಾಕೇಶ್ ಬಾಟಪ್ ಬಗ್ಗೆಯೂ ಪ್ರಶ್ನೆ ಎದುರಾಯಿತು. ‘ಎಂತಹ ಒಳ್ಳೆಯ ಮನುಷ್ಯ. ಆತ ಒಬ್ಬ ಜಂಟಲ್ಮ್ಯಾನ್’ ಎಂದು ಹೇಳುವ ಮೂಲಕ ರಾಕೇಶ್ ಬಾಪಟ್ಗೆ ಸುನಂದಾ ಶೆಟ್ಟಿ ಫುಲ್ ಮಾರ್ಕ್ಸ್ ನೀಡಿದ್ದರು. ಹಾಗಾಗಿ ಶಮಿತಾ-ರಾಕೇಶ್ ಸಂಬಂಧಕ್ಕೆ ಮನೆಯವರ ಒಪ್ಪಿಗೆ ಇದೆ ಎಂಬುದು ಬಹುತೇಕ ಖಚಿತ ಆದಂತಾಗಿದೆ.

ಇದನ್ನೂ ಓದಿ: ಮತ್ತೊಂದು ಹುಡುಗಿ ಜತೆ ಆಪ್ತತೆ; ಮುರಿದು ಬಿತ್ತು ಶಮಿತಾ ಶೆಟ್ಟಿ-ರಾಕೇಶ್ ಬಾಪಟ್ ಸಂಬಂಧ

ಶಮಿತಾ ಶೆಟ್ಟಿ-ರಾಕೇಶ್​ ಬಾಪಟ್​​ ಸಂಬಂಧಕ್ಕೆ ಮನೆಯವರ ಒಪ್ಪಿಗೆ? ಶಿಲ್ಪಾ ಶೆಟ್ಟಿ ತಾಯಿಯಿಂದ ಹೊಗಳಿಕೆ​

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್