ಅದಾನಿ ಸಮೂಹದಿಂದ ನಿಯಮ ಉಲ್ಲಂಘನೆ ಬಗ್ಗೆ ಜೆಪಿಸಿ ತನಿಖೆಯಾಗಲಿ: ರಾಹುಲ್ ಗಾಂಧಿ

|

Updated on: Aug 31, 2023 | 6:05 PM

Rahul Gandhi:ಇಂದು ಬೆಳಿಗ್ಗೆ, ಎರಡು ಜಾಗತಿಕ ಹಣಕಾಸು ಪತ್ರಿಕೆಗಳು ಅದಾನಿ ಬಗ್ಗೆ ಬಹಳ ಮುಖ್ಯವಾದ ಪ್ರಶ್ನೆಯನ್ನು ಎತ್ತಿದವು. ಇವು ಯಾವುದೇ ಯಾದೃಚ್ಛಿಕ ಪತ್ರಿಕೆಗಳಲ್ಲ. ಈ ಪತ್ರಿಕೆಗಳು ಭಾರತದಲ್ಲಿ ಹೂಡಿಕೆ ಮತ್ತು ಪ್ರಪಂಚದ ಉಳಿದ ಭಾಗಗಳಲ್ಲಿ ಭಾರತದ ಗ್ರಹಿಕೆ ಮೇಲೆ ಪರಿಣಾಮ ಬೀರುತ್ತವೆ ಎಂದಿದ್ದಾರೆ ರಾಹುಲ್ ಗಾಂಧಿ.

ಅದಾನಿ ಸಮೂಹದಿಂದ ನಿಯಮ ಉಲ್ಲಂಘನೆ ಬಗ್ಗೆ ಜೆಪಿಸಿ ತನಿಖೆಯಾಗಲಿ: ರಾಹುಲ್ ಗಾಂಧಿ
ರಾಹುಲ್ ಗಾಂಧಿ
Follow us on

ಮುಂಬೈ ಆಗಸ್ಟ್ 31: ವಿಪಕ್ಷಗಳ ಮೈತ್ರಿಕೂಟ ಇಂಡಿಯಾದ (I.N.D.I.A) ಮೂರನೇ ಸಭೆ ಇಂದು (ಗುರುವಾರ) ಮುಂಬೈನಲ್ಲಿ (Mumbai) ನಡೆಯಲಿದೆ. ವಿಪಕ್ಷಗಳ ಮೈತ್ರಿಕೂಟದಲ್ಲಿರುವ ವಿವಿಧ ನಾಯಕರು, ರಾಜ್ಯದ ಮುಖ್ಯಮಂತ್ರಿಗಳು ಈಗಾಗಲೇ ಮುಂಬೈಗೆ ತಲುಪಿದ್ದಾರೆ. ಸಭೆ ಆರಂಭವಾಗುವುದಕ್ಕಿಂತ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ರಾಹುಲ್, ಕೇಂದ್ರ ಸರ್ಕಾರ ಮತ್ತು ಅದಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಸ್ತುತ ಸಂಗತಿ ಜಿ 20 ಆಗಿದೆ. ಇದು ವಿಶ್ವದಲ್ಲಿ ಭಾರತದ ಸ್ಥಾನದ ಬಗ್ಗೆ ಇರುವುದಾಗಿದೆ. ಭಾರತದಂತಹ ದೇಶಕ್ಕೆ ಬಹಳ ಮುಖ್ಯವಾದದ್ದು ಏನೆಂದರೆ ಇಲ್ಲಿ ಬೇರೆ ಬೇರೆ ರೀತಿಯ ವ್ಯವಹಾರದ ಕ್ಷೇತ್ರಗಳಿರುತ್ತವೆ. ಇಲ್ಲಿ ಕಾರ್ಯವೆಸಗುವ ವ್ಯವಹಾರಗಳಲ್ಲಿ ಮತ್ತು ಆರ್ಥಿಕ ವಾತಾವರಣದಲ್ಲಿ ಪಾರದರ್ಶಕತೆ ಬೇಕಿದೆ ಎಂದು ಹೇಳಿದ್ದಾರೆ.

ಇಂದು ಬೆಳಿಗ್ಗೆ, ಎರಡು ಜಾಗತಿಕ ಹಣಕಾಸು ಪತ್ರಿಕೆಗಳು ಅದಾನಿ ಬಗ್ಗೆ ಬಹಳ ಮುಖ್ಯವಾದ ಪ್ರಶ್ನೆಯನ್ನು ಎತ್ತಿದವು. ಇವು ಯಾವುದೇ ಯಾದೃಚ್ಛಿಕ ಪತ್ರಿಕೆಗಳಲ್ಲ. ಈ ಪತ್ರಿಕೆಗಳು ಭಾರತದಲ್ಲಿ ಹೂಡಿಕೆ ಮತ್ತು ಪ್ರಪಂಚದ ಉಳಿದ ಭಾಗಗಳಲ್ಲಿ ಭಾರತದ ಗ್ರಹಿಕೆ ಮೇಲೆ ಪರಿಣಾಮ ಬೀರುತ್ತವೆ ಎಂದಿದ್ದಾರೆ ರಾಹುಲ್ .


ಇದು ಯಾರ ಹಣ? ಎಂಬುದು ಮೊದಲ ಪ್ರಶ್ನೆ. ಇದು ಅದಾನಿಯವರದ್ದೋ ಅಥವಾ ಬೇರೆಯವರದ್ದೋ? ಗೌತಮ್ ಅದಾನಿ ಅವರ ಸಹೋದರ ವಿನೋದ್ ಅದಾನಿ ಎಂಬ ವ್ಯಕ್ತಿಯೇ ಇದರ ಹಿಂದಿನ ಮಾಸ್ಟರ್ ಮೈಂಡ್. ಈ ಹಣದ ದಂಧೆಯಲ್ಲಿ ಇನ್ನಿಬ್ಬರು ಭಾಗಿಯಾಗಿದ್ದಾರೆ. ಒಬ್ಬರು ನಾಸಿರ್ ಅಲಿ ಶಾಬಾನ್ ಅಹ್ಲಿ, ಇನ್ನೊಬ್ಬರು ಚಾಂಗ್ ಚುಂಗ್ ಲಿಂಗ್ ಎಂಬ ಚೀನಾದ ವ್ಯಕ್ತಿ. ಎರಡನೇ ಪ್ರಶ್ನೆ ಏನೆಂದರೆ ಬಹುತೇಕ ಎಲ್ಲಾ ಭಾರತೀಯ ಮೂಲಸೌಕರ್ಯಗಳನ್ನು ನಿಯಂತ್ರಿಸುವ ಕಂಪನಿಯೊಂದರ ಮೌಲ್ಯಮಾಪನದೊಂದಿಗೆ ಈ ಇಬ್ಬರು ವಿದೇಶಿ ಪ್ರಜೆಗಳಿಗೆ ವ್ಯವಹರಿಸಲು ಯಾಕೆ ಅನುಮತಿ ನೀಡಲಾಗಿದೆ?

ತನಿಖೆ ನಡೆದಿತ್ತು, ಸೆಬಿಗೆ ಸಾಕ್ಷ್ಯಾಧಾರಗಳನ್ನು ನೀಡಲಾಯಿತು. ಅದು ಗೌತಮ್ ಅದಾನಿಗೆ ಕ್ಲೀನ್ ಚಿಟ್ ನೀಡಿತು. ಹಾಗಾಗಿ, ಇಲ್ಲಿ ಏನೋ ತಪ್ಪಾಗಿದೆ ಎಂಬುದು ಸ್ಪಷ್ಟವಾಗಿದೆ. G20 ನಾಯಕರು ಭಾರತಕ್ಕೆ ಬರುವ ಮುನ್ನವೇ, ಪ್ರಧಾನಿ ಮೋದಿಯವರ ನಿಕಟವರ್ತಿಗಳ ಮಾಲೀಕತ್ವದ ಈ ವಿಶೇಷ ಕಂಪನಿ ಯಾವುದು ಮತ್ತು ಭಾರತದಂತಹ ಆರ್ಥಿಕತೆಯಲ್ಲಿ ಈ ವ್ಯಕ್ತಿಗೆ ವ್ಯವಹಾರ ಮಾಡಲು ಅನುಮತಿ ನೀಡಿದ್ದು ಯಾರು ಎಂದು ಕೇಳುತ್ತಿದ್ದೇನೆ ಎಂದು ರಾಹುಲ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಅದಾನಿ ಕಂಪನಿಗಳ ವಿರುದ್ಧ ಮತ್ತೆ ವಂಚನೆ ಆರೋಪ; ಇದು ಸೋರೋಸ್ ಪಿತೂರಿ ಎಂದ ಅದಾನಿ ಗ್ರೂಪ್

ಪ್ರಧಾನಿಯವರು ಇಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸ್ಪಷ್ಟವಾಗಿ ವಿವರಿಸುವುದು ಬಹಳ ಮುಖ್ಯ. ಕನಿಷ್ಠ ಜೆಪಿಸಿಗೆ ಅವಕಾಶ ನೀಡಿ ಸಮಗ್ರ ತನಿಖೆಯಾಗಬೇಕು. ತನಿಖೆಗೆ ಪ್ರಧಾನಿ ಏಕೆ ಒತ್ತಾಯಿಸುತ್ತಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ? ಅವರು ಯಾಕೆ ಸುಮ್ಮನಿದ್ದಾರೆ? ಇದಕ್ಕೆ ಜವಾಬ್ದಾರರಾದವರನ್ನುಕಂಬಿ ಹಿಂದೆ ಹಾಕಲಾಗಿದೆ? ಜಿ 20 ನಾಯಕರು ಇಲ್ಲಿಗೆ ಬರುವ ಮುನ್ನವೇ ಇದು ಪ್ರಧಾನಿಯ ಮೇಲೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತಿದೆ.ಜಿ 20 ನಾಯಕರುಬರುವ ಮೊದಲು ಈ ವಿಷಯವನ್ನು ಸ್ಪಷ್ಟಪಡಿಸುವುದು ಮುಖ್ಯ ಎಂದು ರಾಹುಲ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:29 pm, Thu, 31 August 23