ಅದಾನಿ ಕಂಪನಿಗಳ ವಿರುದ್ಧ ಮತ್ತೆ ವಂಚನೆ ಆರೋಪ; ಇದು ಸೋರೋಸ್ ಪಿತೂರಿ ಎಂದ ಅದಾನಿ ಗ್ರೂಪ್

Adani Group vs OCCRP: ಮಾರಿಷಸ್ ಮೂಲಕ ಅಪಾರದರ್ಶಕ ಫಂಡ್​ಗಳ ಮೂಲಕ ಅದಾನಿ ಗ್ರೂಪ್​ನ ವಿವಿಧ ಕಂಪನಿಗಳ ಷೇರುಗಳ ವಹಿವಾಟು ನಡೆಸುವ ಮೂಲಕ ಅದಾನಿ ಆಪ್ತರು ಸಾಕಷ್ಟು ಲಾಭ ಮಾಡಿಕೊಂಡಿದ್ದಾರೆ ಎಂದು ಆರ್ಗನೈಸ್ಡ್ ಕ್ರೈಮ್ ಅಂಡ್ ಕರಪ್ಷನ್ ರಿಪೋರ್ಟಿಂಗ್ ಪ್ರಾಜೆಕ್ಟ್ (ಒಸಿಸಿಆರ್​​ಪಿ) ತನ್ನ ತನಿಖಾ ವರದಿಯಲ್ಲಿ ಆರೋಪ ಮಾಡಿದೆ. ಈ ಆರೋಪವನ್ನು ಅದಾನಿ ಗ್ರೂಪ್ ಸಾರಾಸಗಟಾಗಿ ತಳ್ಳಿಹಾಕಿದೆ.

ಅದಾನಿ ಕಂಪನಿಗಳ ವಿರುದ್ಧ ಮತ್ತೆ ವಂಚನೆ ಆರೋಪ; ಇದು ಸೋರೋಸ್ ಪಿತೂರಿ ಎಂದ ಅದಾನಿ ಗ್ರೂಪ್
ಅದಾನಿ ಗ್ರೂಪ್
Follow us
|

Updated on:Aug 31, 2023 | 11:39 AM

ನವದೆಹಲಿ, ಆಗಸ್ಟ್ 31: ಹಿಂಡನ್ಬರ್ಗ್ ರಿಸರ್ಚ್ ತನಿಖಾ ವರದಿ (Hindenburg Research) ಬಿಡುಗಡೆಯಾಗಿ ಆರೇಳು ತಿಂಗಳ ಬಳಿಕ ಪತ್ರಕರ್ತರ ಸಮೂಹದ ವೆಬ್​ಸೈಟ್​ವೊಂದು ತನಿಖಾ ವರದಿಯೊಂದನ್ನು ಪ್ರಕಟಿಸಿದೆ. ಮಾರಿಷಸ್ ದೇಶದ ಅಪಾರದರ್ಶಕ ಫಂಡ್​ಗಳ (Opaque Funds) ಮೂಲಕ ಅದಾನಿ ಗ್ರೂಪ್​ನ ಬಿಸಿನೆಸ್ ಪಾರ್ಟ್ನರ್​ಗಳು ಕೋಟ್ಯಂತರ ಹಣವನ್ನು ಹೂಡಿಕೆ ಮಾಡಿದ್ದಾರೆ ಎಂದು ಆರ್ಗನೈಸ್ಡ್ ಕ್ರೈಮ್ ಅಂಡ್ ಕರಪ್ಷನ್ ರಿಪೋರ್ಟಿಂಗ್ ಪ್ರಾಜೆಕ್ಟ್ ವೆಬ್​ಸೈಟ್​ನಲ್ಲಿ (OCCRP- Organised Crime and Corruption Reporting Project) ಆರೋಪಿಸಲಾಗಿದೆ. ಅನಾಮಧೇಯ ಪತ್ರಕರ್ತರು ತನಿಖೆ ನಡೆಸಿ ಈ ವರದಿ ರೂಪಿಸಿದ್ದಾರೆನ್ನಲಾಗಿದೆ. ಆದರೆ, ಈ ವರದಿಯನ್ನು ಅದಾನಿ ಗ್ರೂಪ್ ಸಾರಾಸಗಟಾಗಿ ತಳ್ಳಿಹಾಕಿದೆ. ಹಿಂಡನ್ಬರ್ಗ್ ರಿಸರ್ಚ್ ವರದಿಯಲ್ಲಿ ಪ್ರಸ್ತಾಪವಾಗಿರುವ ಕೆಲ ಅಂಶವನ್ನೇ ಮತ್ತೆ ಬಳಸಿ ಹೊಸ ಆರೋಪ ಮಾಡಲಾಗಿದೆ ಎಂದು ಅದಾನಿ ಗ್ರೂಪ್ ಸ್ಪಷ್ಟಪಡಿಸಿದೆ.

ಅದಾನಿ ಗ್ರೂಪ್​ನ ಪ್ರಮುಖ ಸಾರ್ವಜನಿಕ ಹೂಡಿಕೆದಾರರು (Public Investors) ಅದಾನಿಯ ಆಪ್ತರೇ ಆಗಿದ್ದಾರೆ. ಇದು ಭಾರತದ ಷೇರುಮಾರುಕಟ್ಟೆ ಕಾನೂನಿನ ಉಲ್ಲಂಘನೆಯಾಗಿರುವ ಸಾಧ್ಯತೆ ಇದೆ ಎಂದು ತನಿಖಾ ವರದಿ ಹೇಳುತ್ತದೆ. ಟ್ಯಾಕ್ಸ್ ಹೇವನ್ ಎನಿಸಿರುವ ಮಾರಿಷಸ್​ನ ಫಂಡ್​ಗಳ ಮೂಲಕ ಅದಾನಿ ಗ್ರೂಪ್​ನ ವಿವಿಧ ಕಂಪನಿಗಳ ಷೇರುಗಳನ್ನು ಖರೀದಿಸಿದ ಮತ್ತು ಮಾರಿದ ಪ್ರಕರಣಗಳು ಕನಿಷ್ಠ ಎರಡಾದರೂ ಇದೆ ಎಂದು ಹೇಳಲಾಗಿದೆ.

ಮಾರಿಷಸ್ ಫಂಡ್​ಗಳ ಮೂಲಕ ವರ್ಷಗಳಿಂದ ಅದಾನಿ ಷೇರುಗಳನ್ನು ಖರೀದಿಸುವುದು ಮತ್ತು ಮಾರುವುದು ಮಾಡುತ್ತಾ ಸಾಕಷ್ಟು ಲಾಭ ಮಾಡಲಾಗಿದೆ. ಈ ಹೂಡಿಕೆಗಳನ್ನು ನಿರ್ವಹಿಸುವ ಮ್ಯಾನೇಜ್ಮೆಂಟ್ ಸಂಸ್ಥೆ ವಿನೋದ್ ಅದಾನಿ ಕಂಪನಿಗೆ ಹಣ ಪಾವತಿಸಿದೆ ಎಂದೂ ಒಸಿಸಿಆರ್​ಪಿಯ ವರದಿಯಲ್ಲಿ ಹೇಳಿದೆ.

ಇದನ್ನೂ ಓದಿ: ಅತ್ಯಂತ ಕಡಿಮೆ ಬೆಲೆಗೆ ಯಾರೇ ಕೊಟ್ಟರೂ ತೈಲ ಖರೀದಿಸುತ್ತೇವೆ: ಕೇಂದ್ರ ಸಚಿವ ಹರದಿಪ್ ಸಿಂಗ್ ಪುರಿ

ಮಾರಿಷಸ್ ದೇಶದ ಒಪೇಕ್ ಫಂಡ್ ಅಥವಾ ಅಪಾರದರ್ಶಕ ಫಂಡ್​ಗಳ ಮೂಲಕ ಈ ಕೆಲಸ ಆಗಿರುವುದು ತಿಳಿದುಬಂದಿದೆ. ಒಪೇಕ್ ಫಂಡ್ ಎನ್ನುವುದು ತನ್ನ ಪೋರ್ಟ್​ಫೋಲಿಯೋಗಳ ಮಾಹಿತಿಯನ್ನು ಹೂಡಿಕೆದಾರರಿಗೆ ತಿಳಿಸುವುದಿಲ್ಲ. ಈ ಫಂಡ್​ಗಳು ಯಾವ್ಯಾವ ಕಂಪನಿಗಳ ಷೇರುಗಳ ಮೇಲೆ ಹೂಡಿಕೆ ಮಾಡಿವೆ ಎನ್ನುವ ಮಾಹಿತಿ ಅದರ ಹೂಡಿಕೆದಾರರಿಗೆ ಗೊತ್ತಿರುವುದಿಲ್ಲ. ಹೆಡ್ಜ್ ಫಂಡ್​ಗಳು ಇಂಥವಕ್ಕೆ ಉದಾಹರಣೆ.

ಅದಾನಿ ಗ್ರೂಪ್ ಸ್ಪಷ್ಟನೆ

ಒಸಿಸಿಆರ್​ಪಿಯಿಂದ ಪ್ರಕಟವಾಗಿರುವ ವರದಿಯನ್ನು ಅದಾನಿ ಗ್ರೂಪ್ ಅಲ್ಲಗಳೆದಿದೆ. ಹಿಂಡನ್ಬರ್ಗ್ ರಿಸರ್ಚ್ ಈ ಹಿಂದೆ ಬಿಡುಗಡೆ ಮಾಡಿದ ತನಿಖಾ ವರದಿಯಲ್ಲಿ ಈ ಅಂಶಗಳು ಇವೆ. ಇದೆಲ್ಲವೂ ಜಾರ್ಜ್ ಸೋರೋಸ್ ಪಿತೂರಿಯಾಗಿದೆ. ಹಿಂಡನ್ಬರ್ಗ್ ರಿಪೋರ್ಟ್ ವರದಿಯೇ ಆಧಾರರಹಿತವಾಗಿದೆ. ಸೋರೋಸ್ ಬೆಂಬಲಿತ ವರ್ಗಗಳು ಹಾಗೂ ವಿದೇಶೀ ಮೀಡಿಯಾದ ಒಂದು ಗುಂಪು ಈ ಸುಳ್ಳು ವಿಚಾರವನ್ನು ಜಗ್ಗಿಜಗ್ಗಿ ಎಳೆಯುತ್ತಿವೆ ಎಂದು ಅದಾನಿ ಗ್ರೂಪ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಕಾಲಜ್ಞಾನಿ ಗೂಗಲ್; ಯಾವ ಸಮಯದಲ್ಲಿ ಕಡಿಮೆ ಬೆಲೆಗೆ ವಿಮಾನ ಟಿಕೆಟ್ ಬುಕ್ ಮಾಡಬಹುದು? ಗೂಗಲ್ ಫ್ಲೈಟ್ಸ್​ನಲ್ಲಿದೆ ಹೊಸ ಫೀಚರ್

ಒಸಿಸಿಆರ್​ಪಿ ವರದಿಯಲ್ಲಿ ಮಾಡಿರುವ ಆರೋಪಗಳು ಹಿಂಡನ್ಬರ್ಗ್ ವರದಿಯಲ್ಲಿ ಪ್ರಸ್ತಾಪವಾಗಿವೆ. ಸೆಬಿಯಿಂದ ಇದರ ತನಿಖೆ ನಡೆಯುತ್ತಿದೆ. ತನ್ನ ಕಡೆಯಿಂದ ಯಾವ ತಪ್ಪೂ ಆಗಿಲ್ಲ ಎಂದು ಅದಾನಿ ಗ್ರೂಪ್ ಸ್ಪಷ್ಟಪಡಿಸಿದೆ.

ಆರ್ಗನೈಸ್ಡ್ ಕ್ರೈಮ್ ಅಂಡ್ ಕರಪ್ಷನ್ ರಿಪೋರ್ಟಿಂಗ್ ಪ್ರಾಜೆಕ್ಟ್ ಎಂಬುದು ಸ್ವತಂತ್ರ ಪತ್ರಕರ್ತರಿಂದ ನಿರ್ವಹಿಸುವ ಸಂಸ್ಥೆಯಾಗಿದೆ. ಎಡಪಂಥದಲ್ಲಿ ಗುರುತಿಸಿಕೊಂಡಿರುವ ಖ್ಯಾತ ಹೂಡಿಕೆದಾರರು ಮತ್ತು ಉದ್ಯಮಿಗಳಾದ ಜಾರ್ಜ್ ಸೋರೋಸ್, ರಾಕ್​ಫೆಲರ್ ಬ್ರದರ್ಸ್ ಮೊದಲಾದವರು ಒಸಿಸಿಆರ್​ಪಿಗೆ ಫಂಡಿಂಗ್ ಮಾಡುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:22 am, Thu, 31 August 23

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ