ಎನ್​ಟಿಪಿಸಿಯಿಂದ ಭಾರೀ ಮೊತ್ತದ ಗುತ್ತಿಗೆ ಪಡೆದ ಬಳಿಕ ಬಿಎಚ್​ಇಎಲ್ ಷೇರುಬೆಲೆ ಏರುಗತಿಗೆ

BHEL Share Value 52-week High: ಬೆಂಗಳೂರಿನ ಬಿಎಚ್​ಇಎಲ್ ಸಂಸ್ಥೆ ಆಗಸ್ಟ್ 30ರಂದು ಅಂತಾರಾಷ್ಟ್ರೀಯ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಎನ್​ಟಿಪಿಸಿಯ 15,530 ಕೋಟಿ ರೂ ಮೊತ್ತದ ಥರ್ಮಲ್ ಪವರ್ ಪ್ರಾಜೆಕ್ಟ್​ನ ಗುತ್ತಿಗೆ ಪಡೆದಿದೆ. ಇದಕ್ಕೆ ಮುನ್ನ ಎಚ್​ಎಚ್​ಪಿಸಿ ಮತ್ತು ಮಹಾನ್ ಎನರ್ಜೆನ್ ಸಂಸ್ಥೆಗಳಿಂದಲೂ ಎರಡು ಪ್ರಮುಖ ಗುತ್ತಿಗೆಗಳು ಬಿಎಚ್​ಇಎಲ್ ಪಾಲಾಗಿದ್ದವು. ಈ ಕಾರಣಕ್ಕೆ ಕಳೆದ ಕೆಲ ದಿನಗಳಿಂದ ಬಿಎಚ್​ಇಎಲ್ ಷೇರು ಬೆಲೆ ಸತತವಾಗಿ ಹೆಚ್ಚುತ್ತಿದೆ.

ಎನ್​ಟಿಪಿಸಿಯಿಂದ ಭಾರೀ ಮೊತ್ತದ ಗುತ್ತಿಗೆ ಪಡೆದ ಬಳಿಕ ಬಿಎಚ್​ಇಎಲ್ ಷೇರುಬೆಲೆ ಏರುಗತಿಗೆ
ಷೇರು ಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 31, 2023 | 12:38 PM

ಮುಂಬೈ, ಆಗಸ್ಟ್ 31: ಬೆಂಗಳೂರು ಮೂಲದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿ ಸಂಸ್ಥೆ (BHEL) ಷೇರುಬೆಲೆ ಏರುಗತಿಯಲ್ಲಿ ಮುಂದುವರಿದಿದೆ. ಉಷ್ಣ ವಿದ್ಯುತ್ ಸ್ಥಾವರ (Thermal Power Plant) ಸ್ಥಾಪಿಸಲು ಎನ್​ಟಿಪಿಸಿಯಿಂದ 15,530 ಕೋಟಿ ರೂ ಗುತ್ತಿಗೆ ಪಡೆದ ಒಂದು ದಿನದ ಬಳಿಕ ಆಗಸ್ಟ್ 31ರಂದು ಬಿಎಚ್​ಇಎಲ್ ಷೇರುಬೆಲೆ 52 ವಾರಗಳ ಗರಿಷ್ಠ ಮಟ್ಟಕ್ಕೆ ಏರಿದೆ. ಗುರುವಾರ ಬಿಎಚ್​ಇಎಲ್ ಷೇರುಬೆಲೆ ಶೇ. 1.7ರಷ್ಟು ಏರಿ 121.15 ರೂ ಮಟ್ಟಕ್ಕೆ ತಲುಪಿತ್ತು. ಇದರೊಂದಿಗೆ ಕಳೆದ ಐದು ದಿನದಲ್ಲಿ ಅದರ ಬೆಲೆ ಶೇ. 6ರಷ್ಟು ಹೆಚ್ಚಾಯಿತು. ಸದ್ಯ ಬಿಎಚ್​ಇಎಲ್ ಷೇರು 120.65 ರೂ ಬೆಲೆಯಲ್ಲಿ ವಹಿವಾಟು ಕಾಣುತ್ತಿದೆ. ನಿನ್ನೆ ದಿನಾಂತ್ಯದಲ್ಲಿ (ಆಗಸ್ಟ್ 30) ಅದು 118 ರೂ ಬೆಲೆಯಲ್ಲಿ ಅಂತ್ಯಗೊಂಡಿತ್ತು.

ಎನ್​ಟಿಪಿಸಿ ಸೇರಿ ಮೂರು ಪ್ರಮುಖ ಗುತ್ತಿಗೆ ಪಡೆದ ಬಿಎಚ್​ಇಎಲ್

ಛತ್ತೀಸ್​ಗಡದ ಲಾರಾ ಎಂಬಲ್ಲಿ 2×800 ಮೆಗಾವ್ಯಾಟ್ ಸೂಪರ್​ಕ್ರಿಟಿಕಲ್ ಥರ್ಮಲ್ ಪವರ್ ಪ್ರಾಜೆಕ್ಟ್​ನ ಎರಡನೇ ಹಂತದ ಯೋಜನೆಯ ಗುತ್ತಿಗೆಯನ್ನು ಎನ್​ಟಿಪಿಸಿ ವತಿಯಿಂದ ಬಿಎಚ್​ಇಎಲ್​ಗೆ ನೀಡಲಾಗಿದೆ. ಅಂತಾರಾಷ್ಟ್ರೀಯ ಬಿಡ್ಡಿಂಗ್ ಮೂಲಕ ಬಿಎಚ್​ಇಎಲ್ ಪಡೆದಿರುವ ಈ ಗುತ್ತಿಗೆಯ ಮೊತ್ತ 15,530 ಕೋಟಿ ರೂ ಆಗಿದೆ.

ಇದನ್ನೂ ಓದಿ: ಎಬಿಆರ್​ವೈ ಸ್ಕೀಮ್ ಮೂಲಕ ನಿರೀಕ್ಷೆಮೀರಿ ಹೊಸ ಉದ್ಯೋಗಸೃಷ್ಟಿ; ಸರ್ಕಾರದಿಂದ ದತ್ತಾಂಶ ಬಿಡುಗಡೆ

ಫ್ಯಾಕ್ಟರಿಯ ವಿನ್ಯಾಸ, ಎಂಜಿನಿಯರಿಂಗ್, ತಯಾರಿಕೆ, ಸರಬರಾಜು, ಕಟ್ಟಡನಿರ್ಮಾಣ, ಟೆಸ್ಟಿಂಗ್ ಮತ್ತು ಕಮಿಷನಿಂಗ್ ಇತ್ಯಾದಿ ಇನ್ನೂ ಹಲವು ಕಾರ್ಯಗಳು ಈ ಗುತ್ತಿಗೆಯಲ್ಲಿ ಒಳಗೊಂಡಿವೆ. ಎರಡು ಯೂನಿಟ್​ಗಳನ್ನು ಮಾಡಲಾಗಿದ್ದು ಪ್ರತಿಯೊಂದಕ್ಕೂ ನಿಗದಿತ ಗುರಿ ನೀಡಲಾಗಿದೆ. ಯೂನಿಟ್-1 ಅನ್ನು ಪೂರ್ಣಗೊಳಿಸಲು 48 ತಿಂಗಳು (4 ವರ್ಷ), ಯೂನಿಟ್-2 ಅನ್ನು ಪೂರ್ಣಗೊಳಿಸಲು 52 ತಿಂಗಳ ಕಾಲಾವಕಾಶ ಕೊಡಲಾಗಿದೆ. ಈ ಡೆಡ್​ಲೈನ್ ಒಳಗೆ ಪ್ರಾಜೆಕ್ಟ್ ಮುಗಿಯಬೇಕೆಂದು ಕಟ್ಟುನಿಟ್ಟಾಗಿ ತಿಳಿಸಲಾಗಿದೆ.

ಎನ್​ಟಿಪಿಸಿ ಗುತ್ತಿಗೆ ಪಡೆಯುವ ಮುನ್ನ ಬಿಎಚ್​ಇಎಲ್ ಸಂಸ್ಥೆ ಎನ್​ಎಚ್​ಪಿಸಿ ಮತ್ತು ಅದಾನಿ ಕಂಪನಿಯಿಂದ ಇತ್ತೀಚೆಗಷ್ಟೇ ಎರಡು ಗುತ್ತಿಗೆಗಳನ್ನು ಪಡೆದಿತ್ತು.

ಇದನ್ನೂ ಓದಿ: ಅದಾನಿ ಕಂಪನಿಗಳ ವಿರುದ್ಧ ಮತ್ತೆ ವಂಚನೆ ಆರೋಪ; ಇದು ಸೋರೋಸ್ ಪಿತೂರಿ ಎಂದ ಅದಾನಿ ಗ್ರೂಪ್

ಎನ್​ಎಚ್​ಪಿಸಿಯಿಂದ 2,242 ಕೋಟಿ ರೂ ಮೊತ್ತದ ಪ್ರಾಜೆಕ್ಟ್ ಸಿಕ್ಕಿದೆ. ಇನ್ನು, ಮಹಾನ್ ಎನರ್ಜೆನ್ ಲಿ ಸಂಸ್ಥೆಯಿಂದ 2×800 ಮೆಗಾವ್ಯಾಟ್ ಪವರ್ ಪ್ರಾಜೆಕ್ಟ್ ಮಧ್ಯಪ್ರದೇಶದ ಬಂಧೋರಾ ಎಂಬಲ್ಲಿ ಸ್ಥಾಪನೆಯಾಗಲಿದೆ. ಇದರ ಗುತ್ತಿಗೆ ಮೊತ್ತ 4,000 ಕೋಟಿ ರೂ ಆಗಿದೆ. ಮಹಾನ್ ಎನರ್ಜೆನ್ ಸಂಸ್ಥೆ ಅದಾನಿ ಪವರ್​ನ ಅಂಗಸಂಸ್ಥೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ