BIG NEWS: ಲಡಾಖ್‌ನ ಗೋಗ್ರಾದಿಂದ ತಮ್ಮ ಸೇನೆಯನ್ನು ಸಂಪೂರ್ಣವಾಗಿ ಹಿಂಪಡೆದ ಭಾರತ ಹಾಗೂ ಚೀನಾ
ಲಡಾಖ್‌ನ ಗೋಗ್ರಾ ಪ್ರದೇಶದಿಂದ ಭಾರತ ಮತ್ತು ಚೀನಾ ತನ್ನ ಸೈನ್ಯವನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ.
ಲಡಾಖ್‌ನ ಗೋಗ್ರಾ ಪ್ರದೇಶದಿಂದ ಭಾರತ ಮತ್ತು ಚೀನಾ ತನ್ನ ಸೈನ್ಯವನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಭಾರತ ಮತ್ತು ಚೀನಾದ ಸೇನೆಗಳು ಇಂದು ಪೂರ್ವ ಲಡಾಖ್ ಸೆಕ್ಟರ್‌ನ ಗಸ್ತು ಪಾಯಿಂಟ್-15 ಬಳಿಯಿಂದ ತನ್ನ ಸೈನ್ಯವನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಎಂದು ಸರ್ಕಾರದ ಮೂಲಗಳು ತಿಳಿಸಿದೆ. ಪೂರ್ವ ಲಡಾಖ್‌ನ ಪೆಟ್ರೋಲಿಂಗ್ ಪಾಯಿಂಟ್-15 ಬಳಿಯ ಗೋಗ್ರಾ ಹೈಟ್ಸ್-ಹಾಟ್ ಸ್ಪ್ರಿಂಗ್ಸ್ ಪ್ರದೇಶದಲ್ಲಿ (Gogra Heights-Hot Springs) ಭಾರತ ಮತ್ತು ಚೀನಾ ನಡುವಿನ ಬಿಕ್ಕಟ್ಟು ಅಂತಿಮವಾಗಿ ಕೊನೆಗೊಂಡಿದೆ. ಭಾರತ ಮತ್ತು ಚೀನಾದ ಸೇನೆಗಳು ಮಂಗಳವಾರ ಒಪ್ಪಿಗೆ ಸೂಚಿಸಿದ್ದು, ಕಳೆದ ವಾರ ಘೋಷಿಸಿದ ಪಡೆಗಳ ಹಿಂಪಡೆಯುವಿಕೆ ಪೂರ್ಣಗೊಳಿಸಿದವು.
Armies of India & China today completed disengagement process in Gogra Heights-Hot Springs area near Patrolling Point-15 in eastern Ladakh sector. The 2 sides have also completed verification of each others positions adapter pulling back troops from friction point: Govt Sources pic.twitter.com/rzu8jgPmv7
— ANI (@ANI) September 13, 2022
ಮೇ 2020 ರಲ್ಲಿ ಪ್ರಾರಂಭವಾದ ಪೂರ್ವ ಲಡಾಖ್‌ನ ಹಲವಾರು ಪ್ರದೇಶಗಳಲ್ಲಿ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಇರುವ ಬಿಕ್ಕಟ್ಟಿನ ನಂತರ ಈ ಪ್ರದೇಶದಲ್ಲಿ ಉದ್ಭವಿಸಿದ ತಾತ್ಕಾಲಿಕ ಮೂಲಸೌಕರ್ಯಗಳನ್ನು ತೆರವು ಮಾಡುವುದನ್ನು ಎರಡೂ ಸೇನೆಗಳು ಪರಿಶೀಲಿಸಿವೆ ಎಂದು ಭಾರತೀಯ ಸರ್ಕಾರದ ಮೂಲಗಳು ತಿಳಿಸಿವೆ. ಸೋಮವಾರ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ಹಿಂಪಡೆಯುವ ಪ್ರಕ್ರಿಯೆಯು ನಿಗದಿಯಂತೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸೆಪ್ಟೆಂಬರ್ 9 ರಂದು ಗೋಗ್ರಾ-ಹಾಟ್‌ಸ್ಪ್ರಿಂಗ್ಸ್ ಪ್ರದೇಶದಲ್ಲಿನ ಹಿಂಪಡೆಯುವಿಕೆಯನ್ನು ಸೆಪ್ಟೆಂಬರ್ 12 ರೊಳಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿತ್ತು.
ಹೇಳಲಾದ ಘರ್ಷಣೆಯ ಹಂತದಲ್ಲಿ ನಿರ್ಗಮಿಸುವ ಒಪ್ಪಂದದ ನಂತರ, ಜೆನ್ ಪಾಂಡೆ ಲಡಾಖ್‌ಗೆ ಪ್ರಯಾಣಿಸಿದ್ದರು. ಶನಿವಾರ ಅವರು ಪೂರ್ವ ಲಡಾಖ್ ವಲಯದ ಒಟ್ಟಾರೆ ಭದ್ರತಾ ಪರಿಸ್ಥಿತಿಯ ಸಮಗ್ರ ಪರಿಶೀಲನೆ ನಡೆಸಿದರು.
ಮೇ 5, 2020 ರಂದು ಪ್ಯಾಂಗಾಂಗ್ ಸರೋವರ ಪ್ರದೇಶದಲ್ಲಿ ಭಾರತೀಯ ಸೇನೆ ಮತ್ತು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ನಡುವಿನ ಹಿಂಸಾತ್ಮಕ ಘರ್ಷಣೆಯ ನಂತರ ಪೂರ್ವ ಲಡಾಖ್‌ನಲ್ಲಿ ಬಿಕ್ಕಟ್ಟು ಪ್ರಾರಂಭವಾಯಿತು. ಇಲ್ಲಿಯವರೆಗೆ ಭಾರತ ಮತ್ತು ಚೀನಾ 16 ಸುತ್ತುಗಳ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಗಳನ್ನು ಅಡೆತಡೆಗಳನ್ನು ಪರಿಹರಿಸಲು ನಡೆಸಿವೆ. ಇದರಲ್ಲಿ ಪ್ಯಾಂಗೊಂಗ್ ಸರೋವರ ಮತ್ತು ಗಾಲ್ವಾನ್ ಕಣಿವೆಯಲ್ಲಿ, ಜೂನ್ 2020 ರಲ್ಲಿ ಉಭಯ ಸೇನೆಗಳ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿದ್ದು ಎರಡೂ ಕಡೆಗಳಲ್ಲಿ ಅನೇಕ ಸಾವುನೋವುಗಳಿಗೆ ಕಾರಣವಾಯಿತು.
Published On - 2:21 pm, Tue, 13 September 22