ಜಾಗತಿಕವಾಗಿ ಭಾರತ ನಿರ್ಣಾಯಕ ಪಾತ್ರ ವಹಿಸುತ್ತಿದೆ; ಫಿನ್ಲೆಂಡ್ ಅಧ್ಯಕ್ಷ ಮೆಚ್ಚುಗೆ

ಭಾರತ ಮತ್ತು ಫಿನ್ಲೆಂಡ್ ಇಂದು ತಮ್ಮ ದ್ವಿಪಕ್ಷೀಯ ಸಂಬಂಧಗಳಲ್ಲಿ ಪ್ರಮುಖ ಮೈಲಿಗಲ್ಲನ್ನು ಗುರುತಿಸಿವೆ. ಎರಡೂ ದೇಶಗಳು ವ್ಯಾಪಾರ, ತಂತ್ರಜ್ಞಾನ, ಚಲನಶೀಲತೆ, ಸುಸ್ಥಿರತೆ ಮತ್ತು ನಾವೀನ್ಯತೆಗಳನ್ನು ಒಳಗೊಂಡ ಸರಣಿ ಉಪಕ್ರಮಗಳಿಗೆ ಒಪ್ಪಿಕೊಂಡಿವೆ. ಫಿನ್ಲೆಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಅವರ ಭಾರತ ಭೇಟಿಯ ಸಂದರ್ಭದಲ್ಲಿ, 11ನೇ ರೈಸಿನಾ ಸಂವಾದದಲ್ಲಿ ಈ ಘೋಷಣೆ ಮಾಡಲಾಯಿತು. ಎರಡೂ ದೇಶಗಳು ಜೈವಿಕ ಇಂಧನ, ತ್ಯಾಜ್ಯದಿಂದ ಇಂಧನ ತಯಾರಿಕೆ, ಹಸಿರು ಹೈಡ್ರೋಜನ್, ವಿದ್ಯುತ್ ಸಂಗ್ರಹಣೆ ಮತ್ತು ನವೀಕರಿಸಬಹುದಾದ ಇಂಧನ ವ್ಯವಸ್ಥೆಗಳು, ಗಾಳಿ, ಸೌರಶಕ್ತಿ ಮತ್ತು ಸಣ್ಣ ಜಲವಿದ್ಯುತ್ ಸೇರಿದಂತೆ ಕ್ಷೇತ್ರಗಳಲ್ಲಿ ಸಹಯೋಗವನ್ನು ವಿಸ್ತರಿಸಿದರು.

ಜಾಗತಿಕವಾಗಿ ಭಾರತ ನಿರ್ಣಾಯಕ ಪಾತ್ರ ವಹಿಸುತ್ತಿದೆ; ಫಿನ್ಲೆಂಡ್ ಅಧ್ಯಕ್ಷ ಮೆಚ್ಚುಗೆ
Pm Modi With Finland President

Updated on: Mar 05, 2026 | 9:46 PM

ನವದೆಹಲಿ, ಮಾರ್ಚ್ 5: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ನವದೆಹಲಿಯಲ್ಲಿ ರೈಸಿನಾ ಸಂವಾದದ 11ನೇ ಆವೃತ್ತಿಯನ್ನು ಉದ್ಘಾಟಿಸಿದರು. ಮುಖ್ಯ ಭಾಷಣ ಮಾಡಿದ ಫಿನ್ಲೆಂಡ್ ಅಧ್ಯಕ್ಷ ಡಾ. ಅಲೆಕ್ಸಾಂಡರ್ ಸ್ಟಬ್ ಜಾಗತಿಕ ದಕ್ಷಿಣವು ಮುಂದಿನ ವಿಶ್ವ ಕ್ರಮವನ್ನು ನಿರ್ಧರಿಸುತ್ತದೆ. ಭಾರತವು ಅದರಲ್ಲಿ ನಿರ್ಣಾಯಕ ಅಂಶವನ್ನು ವಹಿಸುತ್ತದೆ ಎಂದು ಹೇಳಿದರು. ಜಾಗತಿಕ ಶಕ್ತಿ ಸಮತೋಲನವು ಬದಲಾಗಿದೆ. ಪಾಶ್ಚಿಮಾತ್ಯ ಪ್ರಾಬಲ್ಯದ ಪ್ರಪಂಚದ ಯುಗ ಮುಗಿದಿದೆ, ಇಂದು ವಿಶ್ವ ರಾಜಕೀಯದಲ್ಲಿ ಪ್ರಮುಖ ಸವಾಲುಗಳಿವೆ ಎಂದು ಅವರು ಒಪ್ಪಿಕೊಂಡರು.

ಪ್ರಧಾನಿ ನರೇಂದ್ರ ಮೋದಿ ಇಂದು ಹೈದರಾಬಾದ್ ಹೌಸ್‌ನಲ್ಲಿ ಫಿನ್ಲೆಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಡಿಜಿಟಲೀಕರಣ, ಸುಸ್ಥಿರತೆ, ಶುದ್ಧ ಇಂಧನ, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಸೆಮಿಕಂಡಕ್ಟರ್‌ಗಳಂತಹ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸಲು, ರಕ್ಷಣೆ ಮತ್ತು ಬಾಹ್ಯಾಕಾಶದಲ್ಲಿ ತೊಡಗಿಸಿಕೊಳ್ಳುವಿಕೆಯನ್ನು ಗಾಢವಾಗಿಸಲು ಇಬ್ಬರೂ ನಾಯಕರು ಒಪ್ಪಿಕೊಂಡರು.

 

ದ್ವಿಪಕ್ಷೀಯ ಮಾತುಕತೆಯ ನಂತರ ಜಂಟಿ ಪತ್ರಿಕಾ ಹೇಳಿಕೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಮತ್ತು ಫಿನ್ಲೆಂಡ್ ತಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಡಿಜಿಟಲೀಕರಣ ಮತ್ತು ಸುಸ್ಥಿರತೆಯ ಮೇಲೆ ಕೇಂದ್ರೀಕರಿಸಿದ ಕಾರ್ಯತಂತ್ರದ ಪಾಲುದಾರಿಕೆಯಾಗಿ ರೂಪಿಸಲು ನಿರ್ಧರಿಸಿವೆ. ಇದು ಹೈ-ಟೆಕ್ ವಲಯಗಳಲ್ಲಿ ಸಹಯೋಗವನ್ನು ವೇಗಗೊಳಿಸುತ್ತದೆ ಎಂದು ಹೇಳಿದರು. “ಈ ಪಾಲುದಾರಿಕೆಯು AIನಿಂದ 6G ಟೆಲಿಕಾಂ, ಶುದ್ಧ ಇಂಧನದಿಂದ ಕ್ವಾಂಟಮ್ ಕಂಪ್ಯೂಟಿಂಗ್‌ವರೆಗೆ ಅನೇಕ ಹೈಟೆಕ್ ಕ್ಷೇತ್ರಗಳಲ್ಲಿ ನಮ್ಮ ಸಹಕಾರವನ್ನು ವೇಗಗೊಳಿಸುತ್ತದೆ ಎಂದು ಮೋದಿ ಹೇಳಿದರು.


ಇದನ್ನೂ ಓದಿ: Video: 25 ವರ್ಷಗಳಿಂದ ಒಂದು ದಿನವೂ ರಜೆ ತೆಗೆದುಕೊಳ್ಳದ ಪ್ರಧಾನಿ ಮೋದಿಯನ್ನು ಹೊಗಳಿದ ಕೆನಡಾ ಪ್ರಧಾನಿ ಮಾರ್ಕ್​

ಭಾರತ ಮತ್ತು ಫಿನ್ಲೆಂಡ್ ಇಂದು ಎರಡೂ ದೇಶಗಳ ನಾವೀನ್ಯತೆ ಪರಿಸರ ವ್ಯವಸ್ಥೆಗಳನ್ನು ಸಂಪರ್ಕಿಸಲು ಸಮಗ್ರ ವಲಸೆ ಮತ್ತು ಚಲನಶೀಲತೆ ಒಪ್ಪಂದಕ್ಕೆ ಸಹಿ ಹಾಕಿದವು. ಇದಾದ ಬಳಿಕ ಪ್ರಧಾನಿ ಮೋದಿ ಫಿನ್ಲೆಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಫಿನ್ಲೆಂಡ್ ಭಾರತೀಯ ವಿದ್ಯಾರ್ಥಿಗಳು ಮತ್ತು ಪ್ರತಿಭೆಗಳಿಗೆ ಆದ್ಯತೆಯ ತಾಣವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಈ ಪಾಲುದಾರಿಕೆಯು ಉದ್ಯಮಶೀಲತಾ ಕ್ಷೇತ್ರಕ್ಕೂ ವಿಸ್ತರಿಸಲಿದೆ ಎಂದು ಅವರು ಒತ್ತಿ ಹೇಳಿದರು.


ಶೈಕ್ಷಣಿಕ ವಲಯದಲ್ಲಿ ಫಿನ್ಲೆಂಡ್​​ನ ಜಾಗತಿಕ ಸ್ಥಾನವನ್ನು ಒಪ್ಪಿಕೊಂಡ ಪ್ರಧಾನಿ ಮೋದಿ, “ಇಂದು, ಶಿಕ್ಷಕರ ತರಬೇತಿ, ಶಾಲೆಯಿಂದ ಶಾಲೆಗೆ ಪಾಲುದಾರಿಕೆ ಮತ್ತು ಶಿಕ್ಷಣದ ಭವಿಷ್ಯದಲ್ಲಿ ಸಂಶೋಧನಾ ಸಹಕಾರವನ್ನು ವಿಸ್ತರಿಸಲು ನಾವು ಒಪ್ಪಿಕೊಂಡಿದ್ದೇವೆ” ಎಂದು ಹೇಳಿದರು.

ಇದನ್ನೂ ಓದಿ: ಮಿಲಿಟರಿ ಸಂಘರ್ಷ ಯಾವುದೇ ಸಮಸ್ಯೆಗೆ ಪರಿಹಾರ ಅಸಾಧ್ಯ; ಅಮೆರಿಕ-ಇರಾನ್ ಯುದ್ಧದ ಬಗ್ಗೆ ಪ್ರಧಾನಿ ಮೋದಿ ಹೇಳಿಕೆ


ಭಾರತ ಮತ್ತು ಫಿನ್ಲೆಂಡ್ ನಡುವಿನ ಐತಿಹಾಸಿಕ ಭಾರತ-ಯುರೋಪಿಯನ್ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದವು ವ್ಯಾಪಾರ, ಹೂಡಿಕೆ ಮತ್ತು ತಂತ್ರಜ್ಞಾನ ಸಹಕಾರವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. “ಇಂದು ಜಗತ್ತು ಅಸ್ಥಿರತೆ ಮತ್ತು ಅನಿಶ್ಚಿತತೆಯ ಅವಧಿಯನ್ನು ಎದುರಿಸುತ್ತಿದೆ. ಉಕ್ರೇನ್‌ನಿಂದ ಪಶ್ಚಿಮ ಏಷ್ಯಾದವರೆಗೆ ಪ್ರಪಂಚದ ಅನೇಕ ಭಾಗಗಳಲ್ಲಿ ಸಂಘರ್ಷ ಮುಂದುವರೆದಿದೆ. 2026ರ ಆರಂಭದಲ್ಲಿ ಐತಿಹಾಸಿಕ ಭಾರತ-ಯುರೋಪಿಯನ್ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದವು ಭಾರತ ಮತ್ತು ಫಿನ್ಲೆಂಡ್ ನಡುವಿನ ವ್ಯಾಪಾರ, ಹೂಡಿಕೆ ಮತ್ತು ತಂತ್ರಜ್ಞಾನ ಸಹಕಾರವನ್ನು ಮತ್ತಷ್ಟು ಬಲಪಡಿಸುತ್ತದೆ. ಡಿಜಿಟಲ್ ತಂತ್ರಜ್ಞಾನ, ಮೂಲಸೌಕರ್ಯ ಮತ್ತು ಸುಸ್ಥಿರತೆಯಂತಹ ಕ್ಷೇತ್ರಗಳಲ್ಲಿ ಭಾರತ ಮತ್ತು ಫಿನ್ಲೆಂಡ್ ಪ್ರಮುಖ ಪಾಲುದಾರರು” ಎಂದು ಮೋದಿ ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us