ಜಾಗತಿಕ ಸಂಘರ್ಷ, ಉದ್ವಿಗ್ನತೆ ನಡುವೆ ಭಾರತ-ಆಸಿಯಾನ್ ಸ್ನೇಹ ನಿರ್ಣಾಯಕ; ಲಾವೋಸ್‌ನಲ್ಲಿ ಪ್ರಧಾನಿ ಮೋದಿ

|

Updated on: Oct 10, 2024 | 10:25 PM

PM Modi in Laos: 21ನೇ ಆಸಿಯಾನ್-ಭಾರತ ಮತ್ತು 19ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲು 2 ದಿನಗಳ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಲಾವೋಸ್‌ಗೆ ತೆರಳಿದ್ದಾರೆ. ಅವರು ಸಮಗ್ರ ಕಾರ್ಯತಂತ್ರದ ಸಹಭಾಗಿತ್ವದ ಮೂಲಕ ಭಾರತ ಮತ್ತು ಆಸಿಯಾನ್ ದೇಶಗಳ ನಡುವಿನ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ. ಈ ವೇಳೆ ಪ್ರಧಾನಿ ಮೋದಿಯ ಭಾಷಣದ ಹೈಲೈಟ್ಸ್ ಇಲ್ಲಿದೆ.

ಜಾಗತಿಕ ಸಂಘರ್ಷ, ಉದ್ವಿಗ್ನತೆ ನಡುವೆ ಭಾರತ-ಆಸಿಯಾನ್ ಸ್ನೇಹ ನಿರ್ಣಾಯಕ; ಲಾವೋಸ್‌ನಲ್ಲಿ ಪ್ರಧಾನಿ ಮೋದಿ
ಲಾವೋಸ್‌ನಲ್ಲಿ ಪ್ರಧಾನಿ ಮೋದಿ
Follow us on

ವಿಯೆಂಟಿಯಾನ್: ಲಾವೋಸ್‌ನ ವಿಯೆಂಟಿಯಾನ್‌ನಲ್ಲಿ ಇಂದು ನಡೆದ ಆಸಿಯಾನ್-ಭಾರತ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ಆಕ್ಟ್ ಈಸ್ಟ್ ನೀತಿಯು ಭಾರತ ಮತ್ತು ಆಸಿಯಾನ್ ದೇಶಗಳ ನಡುವಿನ ಐತಿಹಾಸಿಕ ಸಂಬಂಧಗಳಿಗೆ ಶಕ್ತಿ ಹಾಗೂ ವೇಗವನ್ನು ನೀಡಿದೆ ಎಂದು ಪ್ರತಿಪಾದಿಸಿದ್ದಾರೆ. ಜಾಗತಿಕ ಸಂಘರ್ಷಗಳ ಹಿನ್ನೆಲೆಯಲ್ಲಿ ಭಾರತ-ಆಸಿಯಾನ್ ಸಹಕಾರ ಇಂದು ಹೆಚ್ಚು ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

“ನಾನು ಭಾರತದ ಆಕ್ಟ್-ಈಸ್ಟ್ ನೀತಿಯನ್ನು ಘೋಷಿಸಿದ್ದೆ. ಕಳೆದ ದಶಕದಲ್ಲಿ ಈ ನೀತಿಯು ಭಾರತ ಮತ್ತು ಆಸಿಯಾನ್ ದೇಶಗಳ ನಡುವಿನ ಐತಿಹಾಸಿಕ ಸಂಬಂಧಗಳಿಗೆ ಹೊಸ ಶಕ್ತಿ, ನಿರ್ದೇಶನ ಮತ್ತು ವೇಗವನ್ನು ನೀಡಿದೆ. ASEANಗೆ ಪ್ರಾಮುಖ್ಯತೆಯನ್ನು ನೀಡಿ, 1991ರಲ್ಲಿ ನಾವು ಇಂಡೋ-ಪೆಸಿಫಿಕ್ ಸಾಗರ ಉಪಕ್ರಮವನ್ನು ಪ್ರಾರಂಭಿಸಿದ್ದೇವೆ.” ಎಂದು ಇಂದು 21ನೇ ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಪಿಎಂ ನರೇಂದ್ರ ಮೋದಿ ಹೇಳಿದ್ದಾರೆ.


ಇದನ್ನೂ ಓದಿ: ‘ನಾನು ಭಾರತದ ದೊಡ್ಡ ಅಭಿಮಾನಿ’; ಲಾವೋಸ್‌ನಲ್ಲಿ ಮೋದಿ ಭೇಟಿಗೆ ನ್ಯೂಜಿಲೆಂಡ್ ಪ್ರಧಾನಿ ಸಂತಸ

“ನಾವು ಶಾಂತಿಪ್ರಿಯ ದೇಶಗಳು ಪರಸ್ಪರರ ರಾಷ್ಟ್ರೀಯ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಗೌರವಿಸುತ್ತೇವೆ. ನಮ್ಮ ಯುವಜನತೆಯ ಉಜ್ವಲ ಭವಿಷ್ಯಕ್ಕಾಗಿ ನಾವು ಬದ್ಧರಾಗಿದ್ದೇವೆ. 21ನೇ ಶತಮಾನವು ಭಾರತ ಮತ್ತು ಆಸಿಯಾನ್ ದೇಶಗಳ ಶತಮಾನ ಎಂದು ನಾನು ನಂಬುತ್ತೇನೆ. ಪ್ರಪಂಚದ ಅನೇಕ ಭಾಗಗಳಲ್ಲಿನ ಸಂಘರ್ಷ ಮತ್ತು ಉದ್ವಿಗ್ನತೆ ಇರುವಾಗ ಭಾರತ ಮತ್ತು ಆಸಿಯಾನ್‌ನ ಸ್ನೇಹ, ಸಹಕಾರ, ಮಾತುಕತೆ ಬಹಳ ಮುಖ್ಯ” ಎಂದು ಮೋದಿ ಹೇಳಿದ್ದಾರೆ.


ಆಸಿಯಾನ್ ವಲಯದ ದೇಶಗಳೊಂದಿಗೆ ಬಹುಪಕ್ಷೀಯ ಸಹಕಾರವನ್ನು ಹೆಚ್ಚಿಸಲು ಭಾರತ ಕೈಗೊಂಡ ಇತರ ಉಪಕ್ರಮಗಳನ್ನೂ ಮೋದಿ ಪಟ್ಟಿ ಮಾಡಿದರು. “ಕಳೆದ 10 ವರ್ಷಗಳಲ್ಲಿ ಆಸಿಯಾನ್ ಪ್ರದೇಶದೊಂದಿಗಿನ ನಮ್ಮ ವ್ಯಾಪಾರವು ಸುಮಾರು 130 ಶತಕೋಟಿ ಡಾಲರ್‌ಗಳಿಗೆ ದ್ವಿಗುಣಗೊಂಡಿದೆ. ಇಂದು ಭಾರತವು 7 ಆಸಿಯಾನ್ ದೇಶಗಳೊಂದಿಗೆ ನೇರ ವಿಮಾನ ಸಂಪರ್ಕವನ್ನು ಹೊಂದಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಜಮ್ಮು ಕಾಶ್ಮೀರದ ನಾಯಕ ಒಮರ್ ಅಬ್ದುಲ್ಲಾ ಪ್ರಧಾನಿ ಮೋದಿಯತ್ತ ವಾಲುತ್ತಿರುವುದೇಕೆ?

“ನಾವು ಟಿಮೋರ್ ಲೆಸ್ಟೆಯಲ್ಲಿ ಹೊಸ ಕಾನ್ಸುಲೇಟ್‌ಗಳನ್ನು ತೆರೆದಿದ್ದೇವೆ. ಸಿಂಗಾಪುರ ದೇಶವು ಆಸಿಯಾನ್ ಪ್ರದೇಶದಲ್ಲಿ ನಾವು ಫಿನ್‌ಟೆಕ್ ಸಂಪರ್ಕವನ್ನು ಸ್ಥಾಪಿಸಿದ ಮೊದಲ ದೇಶವಾಗಿದೆ. ಈಗ ಇದನ್ನು ಇತರ ದೇಶಗಳಲ್ಲಿಯೂ ಪುನರಾವರ್ತಿಸಲಾಗುತ್ತಿದೆ” ಎಂದು ಮೋದಿ ಹೇಳಿದರು. ಭಾರತವು ಸುಮಾರು ಏಳು ಆಸಿಯಾನ್ ದೇಶಗಳೊಂದಿಗೆ ನೇರ ವಿಮಾನ ಸಂಪರ್ಕವನ್ನು ಹೊಂದಿದೆ. ಅದೇ ಬ್ರೂನಿಯಿಂದ ಕೂಡ ಪ್ರಾರಂಭವಾಗಲಿದೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ