[lazy-load-videos-and-sticky-control id=”amPp1tjhKJU”]
ದೆಹಲಿ: ಚೀನಾಕ್ಕೆ ಪರೋಕ್ಷವಾಗಿ ಮತ್ತಷ್ಟು ಹೊಡೆತ ನೀಡಲು ಭಾರತ ಮುಂದಾಗಿದೆ. ಇದೀಗ, ಚೀನಾ ಮೇಲೆ ತನ್ನ ಡಿಜಿಟಲ್ ಸ್ಟ್ರೈಕ್ನ ಮತ್ತೊಂದು ಭಾಗವಾಗಿ ಚೀನಾ ಮೂಲದ 47 ಌಪ್‌ಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಶೀಘ್ರವೇ ಹೊಸದಾಗಿ ಬ್ಯಾನ್ ಆದ ಌಪ್‌ಗಳ ಪಟ್ಟಿ ರಿಲೀಸ್ ಮಾಡಲಿರುವ ಕೇಂದ್ರ ಈ ಹಿಂದೆ 59 ಌಪ್‌ಗಳನ್ನು ಬ್ಯಾನ್ ಮಾಡಿತ್ತು. ಇದಲ್ಲದೆ, ಅಲಿಬಾಬಾ ಮತ್ತು PUBG ನಂಥ ಸುಮಾರು 250 ಚೀನಾ ಮೂಲದ ಌಪ್‌ಗಳ ಮೇಲೆ ಕೇಂದ್ರವು ಹದ್ದಿನ ಕಣ್ಣು ಇಟ್ಟಿದೆ. ಈ ಎಲ್ಲಾ ಌಪ್‌ಗಳು ಚೀನಾದ ಬೇಹುಗಾರಿಕಾ ಸಂಸ್ಥೆಗಳಿಗೆ ಮಾಹಿತಿ ಸೋರಿಕೆ ಮಾಡುತ್ತಿವೆ ಎಂಬ ಆರೋಪ ಕೇಳಿಬಂದಿದೆ.
ಚೀನಾದ ಬಹುತೇಕ ಌಪ್‌ಗಳು ಬ್ಯಾನ್
ಇದರೊಂದಿಗೆ, ಭಾರತ ಸರ್ಕಾರ ಒಟ್ಟು 106 ಚೀನಾ ಌಪ್‌ಗಳನ್ನು ಬ್ಯಾನ್ ಮಾಡಿದೆ. ಅಲ್ಲಿಗೆ ಭಾರತದಲ್ಲಿ ಚೀನಾದ ಬಹುತೇಕ ಌಪ್‌ಗಳು ಬ್ಯಾನ್ ಆದಂತಾಗಿವೆ.
Published On - 11:41 am, Mon, 27 July 20