ಅನ್ಲಾಕ್ 2.0 ಎಂಡ್ಗೆ ನಾಲ್ಕೇ ದಿನ ಬಾಕಿ, ಆಗಸ್ಟ್ 1ರಿಂದ ಆರಂಭವಾಗಲಿದೆ 3.0
ದೆಹಲಿ: 2ನೇ ಹಂತದ ಅನ್ಲಾಕ್ ಅಂತ್ಯವಾಗಲು ಇನ್ನು 4 ದಿನ ಬಾಕಿ ಇದೆ. ಆಗಸ್ಟ್ ಒಂದ ರಿಂದ 3ನೇ ಹಂತದ ಅನ್ಲಾಕ್ ರೂಲ್ಸ್ ಜಾರಿ ಬರಬೇಕಿದೆ. ಒಂದ್ಕಡೆ ಸೋಂಕು ಹೆಚ್ಚಾಗುತ್ತಿದ್ರು ಮತ್ತೊಂದ್ಕಡೆ ಸರ್ಕಾರ ಮಾತ್ರ ಮತ್ತಷ್ಟು ವಿನಾಯಿತಿ ನೀಡುವ ಬಗ್ಗೆ ಚಿಂತಿಸುತ್ತಿದೆ. ಹಾಗಿದ್ರೆ 3ನೇ ಹಂತದ ಅನ್ಲಾಕ್ನಲ್ಲಿ ಏನೆಲ್ಲಾ ರಿಲೀಫ್ ಸಿಗಲಿದೆ? ಇಲ್ಲಿದೆ ಡೀಟೇಲ್ಸ್. ಆಗಸ್ಟ್ ಒಂದರಿಂದ 3ನೇ ಹಂತದಲ್ಲಿ ಅನ್ಲಾಕ್ ನಿಯಮಗಳು ಜಾರಿಗೆ ಬರಬೇಕಿದೆ. ಇದಕ್ಕಾಗಿ ಪಿಎಂ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸಭೆ […]
ದೆಹಲಿ: 2ನೇ ಹಂತದ ಅನ್ಲಾಕ್ ಅಂತ್ಯವಾಗಲು ಇನ್ನು 4 ದಿನ ಬಾಕಿ ಇದೆ. ಆಗಸ್ಟ್ ಒಂದ ರಿಂದ 3ನೇ ಹಂತದ ಅನ್ಲಾಕ್ ರೂಲ್ಸ್ ಜಾರಿ ಬರಬೇಕಿದೆ. ಒಂದ್ಕಡೆ ಸೋಂಕು ಹೆಚ್ಚಾಗುತ್ತಿದ್ರು ಮತ್ತೊಂದ್ಕಡೆ ಸರ್ಕಾರ ಮಾತ್ರ ಮತ್ತಷ್ಟು ವಿನಾಯಿತಿ ನೀಡುವ ಬಗ್ಗೆ ಚಿಂತಿಸುತ್ತಿದೆ. ಹಾಗಿದ್ರೆ 3ನೇ ಹಂತದ ಅನ್ಲಾಕ್ನಲ್ಲಿ ಏನೆಲ್ಲಾ ರಿಲೀಫ್ ಸಿಗಲಿದೆ? ಇಲ್ಲಿದೆ ಡೀಟೇಲ್ಸ್.
ಆಗಸ್ಟ್ ಒಂದರಿಂದ 3ನೇ ಹಂತದಲ್ಲಿ ಅನ್ಲಾಕ್ ನಿಯಮಗಳು ಜಾರಿಗೆ ಬರಬೇಕಿದೆ. ಇದಕ್ಕಾಗಿ ಪಿಎಂ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸಭೆ ನಡೆಸುವ ಸಾಧ್ಯತೆಯಿದೆ. ಕಳೆದ ವಾರ ಬಿಹಾರ, ಅಸ್ಸಾಂ, ಆಂಧ್ರ, ತೆಲಂಗಾಣ, ತಮಿಳುನಾಡು, ಹಿಮಾಚಲ ಪ್ರದೇಶ, ಉತ್ತಾರಖಂಡ ಸಿಎಂಗಳ ಜೊತೆ ಫೋನ್ನಲ್ಲಿ ಪ್ರಧಾನಿ ಮಾತನಾಡಿದ್ದರು. ಪ್ರವಾಹದ ಜೊತೆಗೆ 3ನೇ ಹಂತದ ಅನ್ಲಾಕ್ ಮತ್ತು ಸೋಂಕು ನಿಯಂತ್ರಣ ಬಗ್ಗೆ ಚರ್ಚಿಸಿದ್ದರು. ಆಗಸ್ಟ್ 1ರಿಂದ ಮತ್ತಷ್ಟು ವಿನಾಯಿತಿ ನೀಡುವ ಸಾಧ್ಯಗಳಿದ್ದು, ಹಲವು ನಿರ್ಬಂಧಗಳನ್ನು ಮುಂದುವರಿಸುವ ಸಾಧ್ಯತೆಗಳಿದೆ. ಯಾವುದು ಲಾಕ್, ಯಾವುದು ಅನ್ಲಾಕ್ ಆಗುವ ಸಾಧ್ಯತೆಗಳಿದೆ ಅಂತಾ ನೋಡೋದಾದ್ರೆ.
ಜಿಮ್ ಓಪನ್ ಆಗುತ್ತಾ? ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸದ್ಯ ದೇಶಾದ್ಯಂತ ಶಾಲೆಗಳು ತೆರೆಯೋದಕ್ಕೆ ಅನುಮತಿ ನೀಡೋದು ಡೌಟ್. ಆದರೆ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಪರೀಕ್ಷೆಗೆ ಅವಕಾಶ ನೀಡುವ ಸಾಧ್ಯತೆಯಿದೆ. ಖಾಸಗಿ ಕೋಚಿಂಗ್ ಸಂಸ್ಥೆಗಳಿಗೆ ಕಾರ್ಯಾರಂಭ ಮಾಡಲು ಷರತ್ತು ಬದ್ಧ ಅವಕಾಶ ನೀಡುವ ಬಗ್ಗೆ ಚಿಂತನೆ ನಡೆದಿದೆ. ಈಗ ಜಾರಿಯಲ್ಲಿರುವ ಮೆಟ್ರೋ ಸಂಚಾರ, ಸ್ವಿಮ್ಮಿಂಗ್ ಪೂಲ್ ಮೇಲಿನ ನಿಷೇಧ ಮುಂದುವರಿಯುವ ಸಾಧ್ಯತೆ ಇದೆ.
ದೇಶಾದ್ಯಂತ ಪೂರ್ಣ ಪ್ರಮಾಣದಲ್ಲಿ ಪ್ರಯಾಣಿಕರ ರೈಲುಗಳ ಸಂಚಾರ ಆರಂಭವಾಗುವುದು ಅನುಮಾನ. ಹಾಗೇ ಜಿಮ್ಗಳನ್ನ ತೆರೆಯಲು ಕೇಂದ್ರ ಸರ್ಕಾರದಿಂದ ಷರತ್ತು ಬದ್ಧ ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಮತ್ತೊಂದ್ಕಡೆ ಶೇಕಡಾ 25ರಷ್ಟು ಪ್ರೇಕ್ಷಕರೊಂದಿಗೆ ಸಿನಿಮಾ ಮಂದಿರ ಓಪನ್ ಮಾಡಿಸಲು ಚಿಂತನೆಯೂ ನಡೆದಿದೆ. ಏರ್ಇಂಡಿಯಾ ಅಂತಾರಾಷ್ಟ್ರೀಯ ವಿಮಾನಹಾರಾಟ ಆರಂಭಿಸಿದ್ದು ಇನ್ನುಳಿದ ಸಂಸ್ಥೆಗಳಿಗೂ ಅವಕಾಶ ಸಿಗಬಹುದು. ಕಂಟೇನ್ಮೆಂಟ್ ಜೋನ್ಗಳನ್ನ ಬಿಟ್ಟು ಉಳಿದ ಭಾಗಗಳಲ್ಲಿ ಮತ್ತಷ್ಟು ವಿನಾಯಿತಿ ಸಿಗುವ ನಿರೀಕ್ಷೆ ದಟ್ಟವಾಗಿದೆ.
ದಕ್ಷಿಣ ಭಾರತದ ಮೇಲೆ ಕೇಂದ್ರದ ಕಣ್ಣು! ಕೇಂದ್ರ ಸರಕಾರದ ಕಣ್ಣು ಈಗ ದಕ್ಷಿಣ ಭಾರತದ ಮೇಲೆ ಬಿದ್ದಿದೆ. ಅದ್ರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಸೋಂಕು ಏರಿಕೆಯಾಗ್ತಿರೋದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ. ದೆಹಲಿ, ಅಹ್ಮದಾಬಾದ್, ಜೈಪುರ, ಭೋಪಾಲ್, ಲಖನೌನಲ್ಲಿ ಪರಿಸ್ಥಿತಿ ಸುಧಾರಿಸಿದ್ದು, ಆಯಾ ರಾಜ್ಯಗಳು ಪ್ರತ್ಯೇಕ ಲಾಕ್ಡೌನ್ ವ್ಯವಸ್ಥೆ ಮಾಡಿವೆ. ಇನ್ನುಳಿದಂತೆ 13 ಲಕ್ಷದ ಗಡಿ ದಾಟಿದ್ರು. ಗುಣಮುಖವಾಗುವವರ ಪ್ರಮಾಣ ಶೇಕಡಾ 64ರಷ್ಟು ಇರುವ ಹಿನ್ನೆಲೆಯಲ್ಲಿ ಮತ್ತಷ್ಟು ವಿನಾಯಿತಿಗೆ ಕೇಂದ್ರ ಮನಸ್ಸು ಮಾಡಿದೆ. ಜುಲೈ 30 ಅಥವಾ 31 ಕ್ಕೆ 3ನೇ ಹಂತದ ಅನ್ಲಾಕ್ ಮಾರ್ಗಸೂಚಿ ರಿಲೀಸ್ ಆಗುವ ಸಾಧ್ಯತೆ ಇದೆ.
ಒಟ್ನಲ್ಲಿ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಈ ಸಂದರ್ಭದಲ್ಲೇ 3ನೇ ಹಂತದಲ್ಲಿ ಅನ್ಲಾಕ್ ಮಾಡಲು ಕೇಂದ್ರ ಮುಂದಾಗಿದೆ. ಈ ಕುರಿತು ಶೀಘ್ರವೇ ಮಾರ್ಗಸೂಚಿ ಪ್ರಕಟಿಸಲಿದ್ದು ಏನೆಲ್ಲಾ ಚೇಂಜ್ ಆಗಲಿದೆ ಅನ್ನೋದನ್ನ ಕಾದು ನೋಡಬೇಕು.
Published On - 7:06 am, Mon, 27 July 20