ನವದೆಹಲಿ: ಜಾಗತಿಕ ಕಲ್ಲಿದ್ದಲು ಬೇಡಿಕೆ ಹೆಚ್ಚಿಸುವ, ಪೂರೈಸುವ ನಿಟ್ಟಿನಲ್ಲಿ ಭಾರತ ಸಮರ್ಥವಾಗಿ ಸಜ್ಜಾಗಿದೆ ಎಂಬುದರ ಸ್ಪಷ್ಟ ಚಿತ್ರಣವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ನೀಡಿದ್ದಾರೆ.
ನವದೆಹಲಿಯಲ್ಲಿಂದು ನಡೆದ ಪ್ರಥಮ ಕಲ್ಲಿದ್ದಲು ರಾಷ್ಟ್ರೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಲ್ಹಾದ್ ಜೋಶಿ, ಭಾರತದಲ್ಲಿ ಕಲ್ಲಿದ್ದಲು ಕ್ಷೇತ್ರದ ಭವಿಷ್ಯದ ಹಾದಿಯನ್ನು ನಿರ್ಧರಿಸಲು ಇಂಥಹ ಸಮಾವೇಶಗಳು ಮುಖ್ಯ ಪಾತ್ರ ವಹಿಸಲಿವೆ ಎಂದರು. ಜಾಗತಿಕ ಕಲ್ಲಿದ್ದಲು ಬೇಡಿಕೆಯನ್ನು ಹೆಚ್ಚಿಸುವ ಮತ್ತು ಬಳಕೆಯಲ್ಲಿನ ಬೇಡಿಕೆ ಪೂರೈಸಲು ಭಾರತ ಹೇಗೆ ಸಜ್ಜಾಗಿದೆ ಎಂಬುದರ ಕುರಿತು ಸ್ಪಷ್ಟತೆ ನೀಡಿದ ಪ್ರಲ್ಹಾದ್ ಜೋಶಿ, ನೀತಿ ನಿರೂಪಣೆ, ಉದ್ಯಮಿಗಳ ಒಗ್ಗೂಡವಿಕೆಗೆ ಸಮಾವೇಶಗಳು ಸಹಕಾರಿ ಎಂದರು.
ವಿಶೇಷವಾಗಿ ವಿದ್ಯುತ್ ವಲಯಕ್ಕೆ ಕಲ್ಲಿದ್ದಲು ರವಾನೆಯು ಕಳೆದ ವರ್ಷಕ್ಕಿಂತ (ಏಪ್ರಿಲ್-ಸೆಪ್ಟೆಂಬರ್) 16.7% ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಕಲ್ಲಿದ್ದಲು ಉತ್ಪಾದನೆ 356 MT ತಲುಪಿದ್ದನ್ನ ಗಮನಿಸಿದಾಗ ಸಂತೋಷವೆನಿಸುತ್ತದೆ ಎಂದು ಇದೇ ವೇಳೆ ಪ್ರಲ್ಜಾದ್ ಜೋಶಿ ಹೇಳಿದರು.
ಇಂದಿನ ರಾಷ್ಟ್ರೀಯ ಕಲ್ಲಿದ್ದಲು ಸಮಾವೇಶದಲ್ಲಿ ಕಲ್ಲಿದ್ದಲು ಬ್ಲಾಕ್‌ಗಳ ಅಭಿವೃದ್ಧಿ ಮತ್ತು ಉತ್ಪಾದನೆ ಒಪ್ಪಂದಕ್ಕೆ ಸಹಿ ಹಾಕುವ ಸಮಾರಂಭ ಕೂಡಾ ನಡೆಯಿತು. ಹಿಂದಿನ ಅವಧಿಗಳಲ್ಲಿ ಹರಾಜಾಗಿದ್ದ ಒಟ್ಟು 10 ಕಲ್ಲಿದ್ದಲು ಗಣಿಗಳಲ್ಲಿ ಕಲ್ಲಿದ್ದಲು ಉತ್ಪಾದನೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಶಿಘ್ರದಲ್ಲಿಯೇ ಈ ಗಣಿಗಳಲ್ಲಿ ಕಲ್ಲಿದ್ದಲು ಉತ್ಪಾದನೆ ಆರಂಭವಾಗಲಿದೆ ಎಂದರು. ಮೊದಲನೇ ಕಲ್ಲಿದ್ದಲು ರಾಷ್ಟ್ರೀಯ ಸಮಾವೇಶ ಇದಾಗಿದ್ದು, ಕಲ್ಲಿದ್ದಲು ಉತ್ಪಾದನಾ ಪ್ರದರ್ಶನ ಕೂಡ ಇದರೊಂದಿಗೆ ನಡೆಯುತ್ತಿರುವುದು ವಿಶೇಷ.
LIVE : Watch my address at the 1st National Coal Conclave & Exhibition from New Delhi https://t.co/kvyQnE4SQ0
— Pralhad Joshi (@JoshiPralhad) October 17, 2022
Published On - 2:42 pm, Mon, 17 October 22