ಚೀನಾದಿಂದ ಸಂಭಾವ್ಯ ದಾಳಿ, ಗಡಿಯಲ್ಲಿ ಭಾರಿ ಸೇನೆ ಜಮಾವಣೆ

|

Updated on: Jul 01, 2020 | 9:46 AM

ದೆಹಲಿ: ಭಾರತ-ಚೀನಾ ನಡುವೆ ಗಡಿ ವಿವಾದ ಹಿನ್ನೆಲೆಯಲ್ಲಿ ಭಾರತದ 30 ಸಾವಿರ ಹೆಚ್ಚುವರಿ ಸೈನಿಕರನ್ನು ಗಡಿಗೆ ರವಾನಿಸಲಾಗಿದೆ. ಸೇನೆಯ ಮೀಸಲು ಪಡೆಯ ಸೈನಿಕರು ರಸ್ತೆ, ವಿಮಾನದ ಮೂಲಕ‌ ಲಡಾಖ್ ಗಡಿಗೆ ತೆರಳಿದ್ದಾರೆ. ಭಾರತ ಶಸ್ತ್ರಾಸ್ತ್ರ, ಯುದ್ಧ ಟ್ಯಾಂಕರ್‌ಗಳನ್ನು ಗಡಿಗೆ ರವಾನಿಸಿದೆ. ಈಗಾಗಲೇ ಫೈಟರ್ ಜೆಟ್, ಹೆಲಿಕಾಪ್ಟರ್, ಟ್ಯಾಂಕ್, ಶಸ್ತ್ರಾಸ್ತ್ರ, ಮಿಸೈಲ್ ಭಾರತ-ಚೀನಾ ಗಡಿಯಲ್ಲಿ ನಿಯೋಜನೆಗೊಂಡಿವೆ. ಸಂಭಾವ್ಯ ಚೀನಾ ದಾಳಿ ಎದುರಿಸಲು ಭಾರತದಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೆಪ್ಟೆಂಬರ್‌ವರೆಗೂ ಗಡಿಯಲ್ಲಿ ಭಾರಿ ಸಂಖ್ಯೆಯಲ್ಲಿ ಸೈನಿಕರ ನಿಯೋಜನೆಯಾಗುತ್ತೆ. ಸೆಪ್ಟೆಂಬರ್ ಬಳಿಕ ಲಡಾಖ್‌ನಲ್ಲಿ […]

ಚೀನಾದಿಂದ ಸಂಭಾವ್ಯ ದಾಳಿ, ಗಡಿಯಲ್ಲಿ ಭಾರಿ ಸೇನೆ ಜಮಾವಣೆ
Follow us on

ದೆಹಲಿ: ಭಾರತ-ಚೀನಾ ನಡುವೆ ಗಡಿ ವಿವಾದ ಹಿನ್ನೆಲೆಯಲ್ಲಿ ಭಾರತದ 30 ಸಾವಿರ ಹೆಚ್ಚುವರಿ ಸೈನಿಕರನ್ನು ಗಡಿಗೆ ರವಾನಿಸಲಾಗಿದೆ. ಸೇನೆಯ ಮೀಸಲು ಪಡೆಯ ಸೈನಿಕರು ರಸ್ತೆ, ವಿಮಾನದ ಮೂಲಕ‌ ಲಡಾಖ್ ಗಡಿಗೆ ತೆರಳಿದ್ದಾರೆ.

ಭಾರತ ಶಸ್ತ್ರಾಸ್ತ್ರ, ಯುದ್ಧ ಟ್ಯಾಂಕರ್‌ಗಳನ್ನು ಗಡಿಗೆ ರವಾನಿಸಿದೆ. ಈಗಾಗಲೇ ಫೈಟರ್ ಜೆಟ್, ಹೆಲಿಕಾಪ್ಟರ್, ಟ್ಯಾಂಕ್, ಶಸ್ತ್ರಾಸ್ತ್ರ, ಮಿಸೈಲ್ ಭಾರತ-ಚೀನಾ ಗಡಿಯಲ್ಲಿ ನಿಯೋಜನೆಗೊಂಡಿವೆ. ಸಂಭಾವ್ಯ ಚೀನಾ ದಾಳಿ ಎದುರಿಸಲು ಭಾರತದಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೆಪ್ಟೆಂಬರ್‌ವರೆಗೂ ಗಡಿಯಲ್ಲಿ ಭಾರಿ ಸಂಖ್ಯೆಯಲ್ಲಿ ಸೈನಿಕರ ನಿಯೋಜನೆಯಾಗುತ್ತೆ. ಸೆಪ್ಟೆಂಬರ್ ಬಳಿಕ ಲಡಾಖ್‌ನಲ್ಲಿ ಚಳಿಗಾಲ ಆರಂಭವಾಗುತ್ತೆ. ಆಗ ಮುಂಚೂಣಿ ಸೇನಾ ನೆಲೆಯಲ್ಲಿ ಸೈನಿಕರ ನಿಯೋಜನೆ ‌ಕಷ್ಟ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಈಗಲೇ ಎಲ್ಲಾ ತಯಾರಿ ಮಾಡಿಕೊಳ್ಳಲಾಗುತ್ತಿದೆ.

ಗಡಿಯಲ್ಲಿ ನರಿ ಬುದ್ಧಿ ತೋರಿಸಿದ ಚೀನಾ ವಿರುದ್ಧ ಸಮರ ಸಾರಲು ಭಾರತದಲ್ಲಿ ಚೀನೀಯ 59 ಆ್ಯಪ್​ಗಳನ್ನು ರದ್ದು ಮಾಡಲಾಗಿದೆ. ಹೀಗಾಗಿ ರೊಚ್ಚಿಗೆದ್ದ ಚೀನಾ ಸಂಭಾವ್ಯ ದಾಳಿ ನಡೆಸಬಹುದು. ಭಾರತ ಕೂಡ ಪ್ರತಿ ಉತ್ತರ ಕೊಡಲು ಗಡಿಯಲ್ಲಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಭಾರಿ ಸೇನೆ ಜಮಾವಣೆಗೊಂಡಿದೆ.