ಪಂಬನ್ ರೈಲ್ವೆ ಬ್ರಿಡ್ಜ್ಗೆ ಹೊಸ ರೂಪ, ವರ್ಟಿಕಲ್ ಬ್ರಿಡ್ಜ್ ಕಾಮಗಾರಿ ಆರಂಭ
ಚೆನ್ನೈ: ತಮಿಳುನಾಡು ರಾಮೇಶ್ವರಂನಲ್ಲಿ ಒಂದೊಂದು ಸ್ಥಳವೂ ಒಂದೊಂದು ರಾಮಾಯಣದ ಕಥೆಯನ್ನು ವಿವರಿಸುತ್ತದೆ. ಇಲ್ಲಿಗೆ ತೆರಳಲು ರಸ್ತೆ ಹಾಗೂ ಸಮುದ್ರ ರೈಲ್ವೇ ಮಾರ್ಗಗಳಿವೆ. ಇದೀಗ ಭಾರತೀಯ ರೈಲ್ವೆ ಇಲಾಖೆಯು ಪಂಬನ್ ರೈಲ್ವೆ ಬ್ರಿಡ್ಜ್ಗೆ ಹೊಸ ರೂಪ ನೀಡುತ್ತಿದೆ. 250 ಕೋಟಿ ರೂ. ವೆಚ್ಚದಲ್ಲಿ ತಯಾರಾಗುತ್ತಿರುವ ಈ ಮಾರ್ಗವು ಸುಮಾರು 2.05 ಕಿಲೋ ಮೀಟರ್ ಉದ್ದ ಇರಲಿದೆ. ಮೊದಲ ಬಾರಿಗೆ ಭಾರತೀಯ ರೈಲ್ವೆಯು ವರ್ಟಿಕಲ್ ಸೇತುವೆಯ ಕಾಮಗಾರಿಯನ್ನು ಆರಂಭಿಸಿದೆ. ಬ್ರಿಡ್ಜ್ನ ಮೊದಲ ಪಿಲ್ಲರ್ ಕಾಮಗಾರಿ ಶುರುವಾಗಿದ್ದು, ಇನ್ನು 2 ವರ್ಷದಲ್ಲಿ […]
ಚೆನ್ನೈ: ತಮಿಳುನಾಡು ರಾಮೇಶ್ವರಂನಲ್ಲಿ ಒಂದೊಂದು ಸ್ಥಳವೂ ಒಂದೊಂದು ರಾಮಾಯಣದ ಕಥೆಯನ್ನು ವಿವರಿಸುತ್ತದೆ. ಇಲ್ಲಿಗೆ ತೆರಳಲು ರಸ್ತೆ ಹಾಗೂ ಸಮುದ್ರ ರೈಲ್ವೇ ಮಾರ್ಗಗಳಿವೆ. ಇದೀಗ ಭಾರತೀಯ ರೈಲ್ವೆ ಇಲಾಖೆಯು ಪಂಬನ್ ರೈಲ್ವೆ ಬ್ರಿಡ್ಜ್ಗೆ ಹೊಸ ರೂಪ ನೀಡುತ್ತಿದೆ. 250 ಕೋಟಿ ರೂ. ವೆಚ್ಚದಲ್ಲಿ ತಯಾರಾಗುತ್ತಿರುವ ಈ ಮಾರ್ಗವು ಸುಮಾರು 2.05 ಕಿಲೋ ಮೀಟರ್ ಉದ್ದ ಇರಲಿದೆ.
ಮೊದಲ ಬಾರಿಗೆ ಭಾರತೀಯ ರೈಲ್ವೆಯು ವರ್ಟಿಕಲ್ ಸೇತುವೆಯ ಕಾಮಗಾರಿಯನ್ನು ಆರಂಭಿಸಿದೆ. ಬ್ರಿಡ್ಜ್ನ ಮೊದಲ ಪಿಲ್ಲರ್ ಕಾಮಗಾರಿ ಶುರುವಾಗಿದ್ದು, ಇನ್ನು 2 ವರ್ಷದಲ್ಲಿ ಕಾಮಗಾರಿ ಪೂರ್ಣವಾಗಲಿದೆ. ಈ ಕಾಮಗಾರಿಗೆ 2019ರ ನವೆಂಬರ್ 8ರಂದು ಚಾಲನೆ ನೀಡಲಾಗಿತ್ತು.