ಮೇಲ್ವರ್ಗದವರಿಗೇ ಸೀಮಿತವಾಗಿದ್ದ ಕಾಫಿ, ಜನಸಾಮಾನ್ಯರಿಗೆ ಅಮೃತವಾಗಿದ್ದು ಹೇಗೆ? ಇದಕ್ಕೆ ಇಂಡಿಯಾ ಕಾಫಿ ಹೌಸ್ ಕೊಡುಗೆ ಏನು? ಸಿಪ್​ ಬೈ ಸಿಪ್​​ ಕಹಾನಿ

|

Updated on: May 02, 2024 | 6:10 PM

ಬೆಂಗಳೂರಿನಲ್ಲಿ ವಿಂಟೇಜ್ ಫೀಲ್ ನೀಡುವ ಕಾಫಿ ಮಳಿಗೆಗಳು, ರೆಸ್ಟೋರೆಂಟ್​ಗಳು ಸಾವಿರಾರು ಸಂಖ್ಯೆಯಲ್ಲಿವೆ. ಆದರೆ ನಗರದ ಹೆಗ್ಗುರುತಾಗಿ ಕಂಗೊಳಿಸುವ ಅದ್ಭುತ ಕಲ್ಲುಕಟ್ಟಡವಾದ ಪ್ರಧಾನ ಅಂಚೆ ಕಚೇರಿಯ ಎದುರಿಗೆ ವಿಶಾಲ ಜಾಗದಲ್ಲಿ, ಹೊರಗಿನಿಂದ ಕಾಫಿ ತೋಟದಂತೆ ಭಾಸವಾಗುವ, ಹಳೆಯ ನೆನಪುಗಳನ್ನು ಮೆಲುಕುಹಾಕಲು ಪ್ರಶಸ್ತ ಸ್ಥಳವಾದ ಕಾಫಿ ಕೇಂದ್ರವೊಂದಿದೆ. ಅದುವೇ 60 ವರ್ಷ ಹಳೆಯ ಇಂಡಿಯಾ ಕಾಫಿ ಹೌಸ್. ಈ ಕಾಫಿ ಹೌಸ್ ಅನ್ನು ನೋಡಿಕೊಳ್ಳುತ್ತಿರುವುದು ಕೇಂದ್ರ ಸರ್ಕಾರಿ ಸ್ವಾಮ್ಯದ ಕಾಫಿ ಬೋರ್ಡ್.

ಮೇಲ್ವರ್ಗದವರಿಗೇ ಸೀಮಿತವಾಗಿದ್ದ ಕಾಫಿ, ಜನಸಾಮಾನ್ಯರಿಗೆ ಅಮೃತವಾಗಿದ್ದು ಹೇಗೆ? ಇದಕ್ಕೆ ಇಂಡಿಯಾ ಕಾಫಿ ಹೌಸ್ ಕೊಡುಗೆ ಏನು? ಸಿಪ್​ ಬೈ ಸಿಪ್​​ ಕಹಾನಿ
ಇಂಡಿಯಾ ಕಾಫಿ ಹೌಸ್
Follow us on

ಪಿಂಚಣಿದಾರರ ಸ್ವರ್ಗ ಬೆಂಗಳೂರಿನಲ್ಲಿ ಜನ ಬೆಳಗಿನ ವೇಳೆ ಕಾಫಿ ಹೀರುವುದನ್ನು ನೋಡುವುದೇ ಒಂದು ಸೊಬಗು. ಅಮೃತಕ್ಕೆ ಸಮಾನ ಎಂದು ಬಗೆದು ಯಾವುದೋ ಧ್ಯಾನ ಲೋಕದಲ್ಲಿ ವಿಹರಿಸುವಂತೆ ತನ್ಮಯತೆಯಿಂದ ಸಿಪ್​ ಬೈ ಸಿಪ್ ಕಾಫಿ ಹೀರುತ್ತಾರೆ ಬೆಂಗಳೂರಿಗರು. ಬೆಂಗಳೂರಿನಲ್ಲಿ ಹೀಗೆ ವಿಂಟೇಜ್ ಫೀಲ್ ನೀಡುವ ಕಾಫಿ ಮಳಿಗೆಗಳು, ರೆಸ್ಟೋರೆಂಟ್​ಗಳು ಸಾವಿರಾರು ಸಂಖ್ಯೆಯಲ್ಲಿವೆ. ಆದರೆ ನಗರದ ಹೆಗ್ಗುರುತಾಗಿ ಕಂಗೊಳಿಸುವ ಅದ್ಭುತ ಕಲ್ಲುಕಟ್ಟಡವಾದ ಪ್ರಧಾನ ಅಂಚೆ ಕಚೇರಿಯ ಎದುರಿಗೆ ವಿಶಾಲ ಜಾಗದಲ್ಲಿ, ಹೊರಗಿನಿಂದ ಕಾಫಿ ತೋಟದಂತೆ ಭಾಸವಾಗುವ, ಹಳೆಯ ನೆನಪುಗಳನ್ನು ಮೆಲುಕುಹಾಕಲು ಪ್ರಶಸ್ತ ಸ್ಥಳವಾದ ಕಾಫಿ ಕೇಂದ್ರವೊಂದಿದೆ. ಅದುವೇ 60 ವರ್ಷ ಹಳೆಯ ಇಂಡಿಯಾ ಕಾಫಿ ಹೌಸ್ (India Coffee House -ICH). ಆ ಜಾಗದಲ್ಲಿ ಬಿಸಿ ಬಿಸಿ ದೋಸೆ ತಿಂದು, ಘಮಘಮಿಸುವ ಕಾಫಿ ಸವಿಯುವ ಮಜವೇ ಬೇರೆ. ಇಲ್ಲಿ ಹಾಲಿನಂತಹ ಬಿಳಿ ಸೂಟ್​ನಲ್ಲಿ ತಿಂಡಿ ಸರ್ವ್ ಮಾಡುವ ಸ್ಟೈಲ್​ಗೆ ಕಾಫಿ ಪ್ರಿಯರು ಫಿದಾ ಆಗೋದು ಪಕ್ಕ. ಅಂದಹಾಗೆ ಈ ಕಾಫಿ ಹೌಸ್ ಅನ್ನು ನೋಡಿಕೊಳ್ಳುತ್ತಿರುವುದು ಕೇಂದ್ರ ಸರ್ಕಾರಿ ಸ್ವಾಮ್ಯದ ಕಾಫಿ ಬೋರ್ಡ್. ಅದು ಇಡೀ ಭಾರತ ಹಾಗೂ ವಿದೇಶಕ್ಕೂ ಸಹ ಉತ್ಕೃಷ್ಟ ಗುಣಮಟ್ಟದ ಕಾಫಿಯನ್ನು ಸರಬರಾಜು ಮಾಡುತ್ತಿದೆ. ತನ್ಮೂಲಕ ಕಾಫಿ ಉತ್ತೇಜನ ಕೆಲಸವನ್ನೂ ಮಾಡುತ್ತಿದೆ. ಈ ಬಗ್ಗೆ ಕಾಫಿ ಮಂಡಳಿ, ಇಂಡಿಯಾ ಕಾಫಿ ಹೌಸ್​ನ ಡೆಪ್ಯೂಟಿ ಸೆಕ್ರೆಟರಿ ಅಜಿತ್ ಕುಮಾರ್ ಅವರು ವಿಸ್ತೃತ ಮಾಹಿತಿ ನೀಡಿದ್ದಾರೆ. ಟಿವಿ9 ಕನ್ನಡದ ಪ್ರೀಮಿಯಂ ಓದುಗರಾದ ತಾವು ಒಂದೊಂದೇ ಗುಟುಕು ಕಾಫಿ ಹೀರುತ್ತಾ ಅವರು ಏನು ಹೇಳಿದ್ದಾರೆ… ಓದಿಕೊಳ್ಳಿ. ಮೊದಲಿಗೆ ಈ ಕಾಫಿ...

Published On - 5:19 pm, Thu, 2 May 24

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ