ರಷ್ಯಾ- ಉಕ್ರೇನ್ ಸಂಘರ್ಷ ಬಗ್ಗೆ ಕಳವಳ, ರಾಜತಾಂತ್ರಿಕತೆಗೆ ಮರಳಲು ಕರೆ ನೀಡಿದ ಭಾರತ

"ಮೂಲಸೌಕರ್ಯ ಮತ್ತು ನಾಗರಿಕರ ಸಾವು ಸೇರಿದಂತೆ ಉಕ್ರೇನ್‌ನಲ್ಲಿ ಸಂಘರ್ಷದ ಉಲ್ಬಣಕ್ಕೆ ಭಾರತವು ತೀವ್ರ ಕಳವಳ ವ್ಯಕ್ತಪಡಿಸಿದೆ" ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ರಷ್ಯಾ- ಉಕ್ರೇನ್ ಸಂಘರ್ಷ ಬಗ್ಗೆ ಕಳವಳ, ರಾಜತಾಂತ್ರಿಕತೆಗೆ ಮರಳಲು ಕರೆ ನೀಡಿದ ಭಾರತ
Edited By:

Updated on: Oct 10, 2022 | 7:45 PM

ದೆಹಲಿ: ಉಕ್ರೇನ್‌ನಲ್ಲಿ (Ukraine) ಸಂಘರ್ಷ ಉಲ್ಬಣಗೊಳ್ಳುತ್ತಿರುವ ಬಗ್ಗೆ ಭಾರತವು ತೀವ್ರ ಕಳವಳ ವ್ಯಕ್ತಪಡಿಸಿದ್ದು ಮತ್ತು ರಾಜತಾಂತ್ರಿಕತೆಗೆ ಮರಳಲು ಕರೆ ನೀಡಿದೆ. ಅದೇ ವೇಳೆ ಸೇನೆಯನ್ನು ಹಿಂಪಡೆಯುವ ಪ್ರಯತ್ನಗಳನ್ನು ಬೆಂಬಲಿಸಲು ಸಿದ್ಧವಾಗಿದೆ ಎಂದು ಭಾರತ ಇಂದು ಹೇಳಿದೆ. “ಮೂಲಸೌಕರ್ಯ ಮತ್ತು ನಾಗರಿಕರ ಸಾವು ಸೇರಿದಂತೆ ಉಕ್ರೇನ್‌ನಲ್ಲಿ ಸಂಘರ್ಷದ ಉಲ್ಬಣಕ್ಕೆ ಭಾರತವು ತೀವ್ರ ಕಳವಳ ವ್ಯಕ್ತಪಡಿಸಿದೆ” ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಯುದ್ಧವನ್ನು ತಕ್ಷಣವೇ ನಿಲ್ಲಿಸಲು ಮತ್ತು ರಾಜತಾಂತ್ರಿಕತೆ ಮತ್ತು ಸಂವಾದದ ಹಾದಿಗೆ ತುರ್ತು ಮರಳಲು ನಾವು ಒತ್ತಾಯಿಸುತ್ತೇವೆ.ಸೇನೆ ಹಿಂಪಡೆಯುವ ಗುರಿಯನ್ನು ಹೊಂದಿರುವ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸಲು ಭಾರತ ಸಿದ್ಧವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

 

 

ಜಾಗತಿಕ ಕ್ರಮವು ಯುಎನ್ ಚಾರ್ಟರ್, ಅಂತರಾಷ್ಟ್ರೀಯ ಕಾನೂನು ಮತ್ತು ಎಲ್ಲಾ ರಾಜ್ಯಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವದ ತತ್ವಗಳಲ್ಲಿ ತಳವೂರಿದೆ ಎಂಬುದನ್ನು ಸಂಘರ್ಷದ ಆರಂಭದಿಂದಲೂ ಭಾರತವು ನಿರಂತರವಾಗಿ ಉಳಿಸಿಕೊಂಡಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಉಕ್ರೇನ್‌ನ ಸೇನೆಯು ಉಕ್ರೇನ್‌ನಲ್ಲಿ 84 ಕ್ರೂಸ್ ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ಹೇಳಿದೆ. ಎರಡು ದಿನಗಳ ಹಿಂದೆ ರಷ್ಯಾವನ್ನು ಕ್ರೈಮಿಯಾಕ್ಕೆ ಸಂಪರ್ಕಿಸುವ ಸೇತುವೆಯನ್ನು ಹಾನಿಗೊಳಿಸಿದ್ದು ಕೈವ್ ಎಂದು ಮಾಸ್ಕೋ ಆರೋಪಿಸಿದೆ.

ಉಕ್ರೇನ್ ರಾಜಧಾನಿ ಕೈವ್ ಮೇಲೆ  ರಷ್ಯಾ ದಾಳಿ ನಡೆಸಿದ್ದು , ಇದರಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದರು ಮತ್ತು 50 ಕ್ಕೂ ಹೆಚ್ಚು ಜನರು ಗಾಯಗೊಂಡರು.

ಎಂಟು ಪ್ರದೇಶಗಳು ಮತ್ತು ಕೈವ್‌ನಾದ್ಯಂತ 11 “ಪ್ರಮುಖ ಮೂಲಸೌಕರ್ಯ ಸೌಲಭ್ಯಗಳು” ಹಾನಿಗೊಳಗಾಗಿವೆ. ತಾತ್ಕಾಲಿಕ ವಿದ್ಯುತ್, ನೀರು ಮತ್ತು ಸಂವಹನ ಕಡಿತದ ಎಚ್ಚರಿಕೆಯನ್ನು ಉಕ್ರೇನ್‌ನ ಪ್ರಧಾನ ಮಂತ್ರಿ ಡೆನಿಸ್ ಶ್ಮಿಗಲ್ ಹೇಳಿದ್ದಾರೆ.

ಕಳೆದ ವಾರ, ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು ಕಾಳಜಿಯ ಮಾತುಗಳನ್ನಾಡಿದ್ದಾರೆ. “ಇಂದಿನ ಯುಗ ಯುದ್ಧದ್ದಲ್ಲ” ಎಂದು ಕಳೆದ ತಿಂಗಳು ಸಮರ್‌ಕಂಡ್‌ನಲ್ಲಿ ಪ್ರಧಾನಿ ಮೋದಿ ಪುಟಿನ್‌ಗೆ ಹೇಳಿದ್ದರು. ಈ ಮಾತುಗಳನ್ನು ಅನೇಕ ವಿಶ್ವ ನಾಯಕರು ಸಾರ್ವಜನಿಕ ಖಂಡನೆಯಾಗಿ ನೋಡಿದ್ದಾರೆ.

Published On - 6:30 pm, Mon, 10 October 22