ನವದೆಹಲಿ: ಚೀನಾದಲ್ಲಿದ್ದುಕೊಂಡು (China) ಕೆಲಸ ಮಾಡುವ ಮತ್ತು ಅಲ್ಲಿಂದ ವರದಿ ಮಾಡುವ ಭಾರತೀಯ ಪತ್ರಕರ್ತರ (Indian Journalists) ಕಾರ್ಯನಿರ್ವಹಣೆಗೆ ಪೂರಕವಾಗಿ ಚೀನಾದ ಅಧಿಕಾರಿಗಳು ಸ್ಪಂದಿಸುತ್ತಾರೆ ಎಂಬ ಭರವಸೆ ಇದೆ ಎಂದು ಭಾರತ (India) ಹೇಳಿದೆ. ಚೀನಾದಲ್ಲಿ ಭಾರತೀಯ ಪತ್ರಕರ್ತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಪತ್ರಕರ್ತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಉಭಯ ದೇಶಗಳ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ.
ಚೀನಾದ ಪತ್ರಕರ್ತರೂ ಸೇರಿದಂತೆ ಎಲ್ಲಾ ವಿದೇಶಿ ಪತ್ರಕರ್ತರು ಭಾರತದಲ್ಲಿ ಯಾವುದೇ ಮಿತಿಯಿಲ್ಲದೆ ಅಥವಾ ವರದಿ ಮಾಡುವಲ್ಲಿ ಅಥವಾ ಮಾಧ್ಯಮ ಪ್ರಸಾರದಲ್ಲಿ ತೊಂದರೆಗಳಿಲ್ಲದೆ ಪತ್ರಿಕೋದ್ಯಮ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: China vs India: ಇತ್ತ ಭಾರತದಲ್ಲಿ ಚಿನ್ನ ಮಾರಾಟ ಕಡಿಮೆ; ಅತ್ತ ಚೀನಾದಲ್ಲಿ ದಿಢೀರ್ ಗೋಲ್ಡ್ ಸೇಲ್ ಹೆಚ್ಚಿದ್ದು ಯಾಕೆ?
ಆದರೆ, ಚೀನಾದಲ್ಲಿ ಭಾರತೀಯ ಪತ್ರಕರ್ತರು ಕೆಲವು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಉದಾಹರಣೆಗೆ, ಭಾರತೀಯ ಪತ್ರಕರ್ತರಿಗೆ ಅಲ್ಲಿ ಸ್ಥಳೀಯರನ್ನು ವರದಿಗಾರಿಕೆಗೆ ಅಥವಾ ಪತ್ರಕರ್ತರಾಗಿ ನೇಮಿಸಿಕೊಳ್ಳಲು ಅನುಮತಿ ಇಲ್ಲ ಎಂದು ಬಾಗ್ಚಿ ಹೇಳಿದ್ದಾರೆ. ಭಾರತದಲ್ಲಿರುವ ವಿದೇಶಿ ಪತ್ರಕರ್ತರನ್ನು ಭಾರತವು ಬೆಂಬಲಿಸುತ್ತದೆ ಮತ್ತು ಅನುಕೂಲ ಮಾಡುತ್ತದೆ. ಅದೇ ರೀತಿ ಚೀನಾ ಸಹ ಅನುಕೂಲ ಮಾಡಿಕೊಡಬೇಕು ಎಂದು ಬಾಗ್ಚಿ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ