ಈ ವರ್ಷ ಭಾರತದ ಬೆಳವಣಿಗೆ ದರ ಶೇ 11.5 ನಿರೀಕ್ಷೆ: ಅಂತಾರಾಷ್ಟ್ರೀಯ ಹಣಕಾಸು ನಿಧಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 26, 2021 | 9:29 PM

ಕೊರೊನಾ ಮಧ್ಯೆಯೂ ಭಾರತದ ಆರ್ಥಿಕತೆ ಹಾಗೂ ಅಭಿವೃದ್ಧಿ ಕಾರ್ಯ ಪುಟಿದೇಳುತ್ತಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಅಭಿಪ್ರಾಯಪಟ್ಟಿದೆ.

ಈ ವರ್ಷ ಭಾರತದ ಬೆಳವಣಿಗೆ ದರ ಶೇ 11.5 ನಿರೀಕ್ಷೆ: ಅಂತಾರಾಷ್ಟ್ರೀಯ ಹಣಕಾಸು ನಿಧಿ
ಸಾಂದರ್ಭಿಕ ಚಿತ್ರ
Follow us on

ದೆಹಲಿ: 2021ರ ಹಣಕಾಸು ವರ್ಷದಲ್ಲಿ ಭಾರತ ಶೇ 11.5 ಬೆಳವಣಿಗೆ ದರ ದಾಖಲಿಸುವ ನಿರೀಕ್ಷೆ ಇದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮಂಗಳವಾರ ಹೇಳಿದೆ. ಕೊರೊನಾ ಸೋಂಕಿನ ಮಧ್ಯೆಯೂ ಈ ವರ್ಷ ಎರಡಂಕಿ ಬೆಳವಣಿಗೆ ದಾಖಲಿಸಲಿರುವ ವಿಶ್ವದ ಏಕೈಕ ರಾಷ್ಟ್ರ ಭಾರತ ಆಗಿದೆ ಎಂದು ಐಎಂಎಫ್ ಹೇಳಿದೆ.

ಕೊರೊನಾ ವೈರಸ್​ನಿಂದಾಗಿ 2020ರಲ್ಲಿ ದೇಶದ ಅಭಿವೃದ್ಧಿ ಕುಂಟಿತವಾಗಿತ್ತು. ಲಾಕ್​ಡೌನ್​ನಿಂದ ದೇಶದ ಆರ್ಥಿಕತೆ ಸಂಪೂರ್ಣವಾಗಿ ನೆಲಕಚ್ಚಿತ್ತು. ಆದರೆ, ಕೊರೊನಾ ಮಧ್ಯೆಯೂ ಭಾರತದ ಆರ್ಥಿಕತೆ ಹಾಗೂ ಅಭಿವೃದ್ಧಿ ಕಾರ್ಯ ಪುಟಿದೇಳುತ್ತಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಅಭಿಪ್ರಾಯಪಟ್ಟಿದೆ.

ಭಾರತದ ನಂತರ ಚೀನಾ ಇದೆ. ಈ ದೇಶ 2021ರಲ್ಲಿ ಶೇ. 8.1 ಬೆಳವಣಿಗೆ ದರ ದಾಖಲಿಸುವ ನಿರೀಕ್ಷೆ ಇದೆ. ಉಳಿದಂತೆ ಸ್ಪೇನ್​ (ಶೇ 5.9), ಫ್ರಾನ್ಸ್​ (ಶೇ 5.5) ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.

ಕೊರೊನಾ ವೈರಸ್​ ಕಾಣಿಸಿಕೊಂಡ ನಂತರ ಆರ್ಥಿಕತೆಗೆ ಚೇತರಿಕೆ ನೀಡಲು ಭಾರತ ಸಾಕಷ್ಟು ಕ್ರಮ ಕೈಗೊಂಡಿದೆ. ಇದರಿಂದ ದೇಶದ ಆರ್ಥಿಕತೆ ಚೇತರಿಕೆ ಕಾಣುತ್ತಿದೆ ಎಂದು ಐಎಂಎಫ್​ ಹೇಳಿದೆ.

ಕೇಂದ್ರ ಬಜೆಟ್ 2021-22: ಚೇತರಿಸಿಕೊಳ್ಳುತ್ತಾ ಆರ್ಥಿಕತೆ? ದೇಶದ ಜನರ ನಿರೀಕ್ಷೆಗಳೇನು?