ಟ್ರ್ಯಾಕ್ಟರ್ ಪರೇಡ್: ದೆಹಲಿ ಐಟಿಒ ಪ್ರದೇಶದಲ್ಲಿ ಟ್ರ್ಯಾಕ್ಟರ್ ಉರುಳಿ ರೈತ ಸಾವು
ರೈತನ ಮೃತದೇಹಕ್ಕೆ ತ್ರಿವರ್ಣ ಧ್ವಜ ಹೊದಿಸಿ ಐಟಿಒ ಕ್ರಾಸಿಂಗ್ನಲ್ಲಿರಿಸಿದ ಪ್ರತಿಭಟನಾಕಾರರು ಮರಣೋತ್ತರ ಪರೀಕ್ಷೆಗೆ ಕೊಂಡುಹೋಗದಂತೆ ಪೊಲೀಸರಿಗೆ ತಡೆಯೊಡ್ಡಿದ ಘಟನೆಯೂ ಇಲ್ಲಿ ನಡೆದಿದೆ.
ದೆಹಲಿ: ಸೆಂಟ್ರಲ್ ದೆಹಲಿಯ ಐಟಿಒ ಪ್ರದೇಶದಲ್ಲಿ ರೈತರ ಮೆರವಣಿಗೆ ವೇಳೆ ಟ್ರ್ಯಾಕ್ಟರ್ ಉರುಳಿ ರೈತರೊಬ್ಬರು ಸಾವಿಗೀಡಾಗಿದ್ದಾರೆ. ಮೃತ ರೈತನ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಘಾಜಿಪುರ್ ಗಡಿಭಾಗದಿಂದ ರೈತರು ಟ್ರ್ಯಾಕ್ಟರ್ ಮೆರವಣಿಗೆ ಆರಂಭಿಸಿದ್ದರು. ಮೆರವಣಿಗೆ ಮಧ್ಯೆ ಐಟಿಒ ಪ್ರದೇಶದಲ್ಲಿ ಟ್ರ್ಯಾಕ್ಟರ್ ಉರುಳಿ ಬಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಟ್ರ್ಯಾಕ್ಟರ್ ಬ್ಯಾರಿಕೇಡ್ಗೆ ಗುದ್ದಿ ಟ್ರ್ಯಾಕ್ಟರ್ ಉರುಳಿದಾಗ ಚಲಾಯಿಸುತ್ತಿದ್ದ ವ್ಯಕ್ತಿ ಅದರ ಚಕ್ರದೆಡೆಗೆ ಸಿಲುಕಿ ಸಾವಿಗೀಡಾಗಿದ್ದಾರೆ ಎಂದಿದ್ದಾರೆ ಪೊಲೀಸರು.
#WATCH | A protesting farmer died after a tractor rammed into barricades and overturned at ITO today: Delhi Police
CCTV Visuals: Delhi Police pic.twitter.com/nANX9USk8V
— ANI (@ANI) January 26, 2021
ರೈತನ ಮೃತದೇಹಕ್ಕೆ ತ್ರಿವರ್ಣ ಧ್ವಜ ಹೊದಿಸಿ ಐಟಿಒ ಕ್ರಾಸಿಂಗ್ನಲ್ಲಿರಿಸಿದ ಪ್ರತಿಭಟನಾಕಾರರು ಮರಣೋತ್ತರ ಪರೀಕ್ಷೆಗೆ ಕೊಂಡುಹೋಗದಂತೆ ಪೊಲೀಸರಿಗೆ ತಡೆಯೊಡ್ಡಿದ ಘಟನೆಯೂ ಇಲ್ಲಿ ನಡೆದಿದೆ.
In Depth Report | ದೆಹಲಿ ಕೆಂಪುಕೋಟೆಯಲ್ಲಿ ರೈತಧ್ವಜ, ಟ್ರ್ಯಾಕ್ಟರ್ ಪರೇಡ್ ಈವರೆಗೆ ಏನೆಲ್ಲಾ ನಡೆಯಿತು?