ರೋಮಾಂಚಕಾರಿ ‘ವರ್ಟಿಕಲ್ ಚಾರ್ಲಿ’ ಹಾಗೂ ‘ಏಕಲವ್ಯ’ ಪ್ರದರ್ಶನ ತೋರಿದ ರಫೇಲ್ ಜೆಟ್ ವಿಮಾನ
ಇಂದು ಮೊದಲ ಬಾರಿಗೆ ರಫೇಲ್ ಯುದ್ಧ ವಿಮಾನವು ನೀಡಿದ ವರ್ಟಿಕಲ್ ಚಾರ್ಲಿ ಹಾಗೂ ಏಕಲವ್ಯ ಪ್ರದರ್ಶನವು ಜನರ ಮನಸೂರೆಗೊಂಡಿತು. ಭಾರತದ ಸೇನೆಯ ಭಾಗವಾಗಿರುವ ಎಂಟು ರಫೇಲ್ ಜೆಟ್ ವಿಮಾನಗಳ ಪೈಕಿ ಒಂದು ವಿಮಾನವು 72ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿತು.
ದೆಹಲಿ: ವಾಯುಪಡೆಗೆ ಈಚೆಗೆ ಸೇರ್ಪಡೆಯಾದ ರಫೇಲ್ ಜೆಟ್ ವಿಮಾನವು ಇಂದು ನಡೆದ 72ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿತು. ಮೊತ್ತ ಮೊದಲ ಬಾರಿಗೆ ರೋಮಾಂಚಕಾರಿಯಾದ ‘ವರ್ಟಿಕಲ್ ಚಾರ್ಲಿ’ ಹಾಗೂ ‘ಏಕಲವ್ಯ’ ಕಸರತ್ತು ಪ್ರದರ್ಶನ ಮಾಡಿ ಜನರ ಮನಸೂರೆಗೊಂಡಿತು.
ಎರಡು ಜಾಗ್ವಾರ್ ವಿಮಾನಗಳೊಂದಿಗೆ, ರಫೇಲ್ ಜೆಟ್ ವಿಮಾನ ಹಾಗೂ ಎರಡು MiG-29 ವಿಮಾನಗಳು ‘ಏಕಲವ್ಯ’ ಪ್ರದರ್ಶನ ತೋರಿದವು. 300 ಮೀಟರ್ ಎತ್ತರದಲ್ಲಿ, ಗಂಟೆಗೆ 780 ಕಿಮೀ ವೇಗದಲ್ಲಿ ಐದು ಜೆಟ್ ವಿಮಾನಗಳು V ಆಕಾರ ರೂಪಿಸಿದವು. ರಫೇಲ್ ಯುದ್ಧ ವಿಮಾನ ಏಕಲವ್ಯ ಪ್ರದರ್ಶನದ, V ಆಕೃತಿಯಲ್ಲಿ ಮುಂಚೂಣಿಯಲ್ಲಿ ಹಾರಿ, ನೆರೆದ ಜನರನ್ನು ಚಕಿತಗೊಳಿಸಿತು.
One Rafale with 2 Jaguar Deep penetration strike aircraft & 2 MiG-29 Air Superiority Fighters, in 'Eklavya’ formation are the next to fly past, at a height of 300m & speed of 780 Km/h.
The formation is led by Gp Capt Rohit Kataria, Flight Commander of 17 Squadron. #RepublicDay pic.twitter.com/UCCcQMy0gR
— ANI (@ANI) January 26, 2021
ರಫೇಲ್ ಯುದ್ಧ ವಿಮಾನವನ್ನು ಹರ್ಕಿರತ್ ಸಿಂಗ್ ಮತ್ತು ಕಿಸ್ಲಾಯ್ಕಾಂತ್ ಗಂಟೆಗೆ 900 ಕಿಮೀ ವೇಗದಲ್ಲಿ ಹಾರಿಸಿ, ‘ವರ್ಟಿಕಲ್ ಚಾರ್ಲಿ’ ಪ್ರದರ್ಶನ ನೀಡಿದರು. ಒಂದು ಮಟ್ಟದಲ್ಲಿ ಹಾರುತ್ತಿರುವ ಯುದ್ಧ ವಿಮಾನವು ತಕ್ಷಣಕ್ಕೆ ಲಂಬವಾಗಿ ಮೇಲಕ್ಕೆ ಹಾರುತ್ತಾ, ಹಲವು ಬಾರಿ ರೋಲ್ ಆಗಿ, ಬಳಿಕ ಎತ್ತರದಲ್ಲಿ ಸ್ಥಿರವಾಗುವುದನ್ನು ‘ವರ್ಟಿಕಲ್ ಚಾರ್ಲಿ’ ಎಂದು ಕರೆಯುತ್ತಾರೆ.
#RepublicDay parade culminates with a single Rafale aircraft flying at a speed of 900km/hr carrying out a ‘Vertical Charlie’. The aircraft is piloted by Gp Capt Harkirat Singh, Shaurya Chakra, Commanding Officer of 17 Squadron with Sqn Ldr Kislaykant. pic.twitter.com/ochv25VhkT
— ANI (@ANI) January 26, 2021
ಫ್ರಾನ್ಸ್ನಲ್ಲಿ ತಯಾರಾಗಿರುವ ರಫೇಲ್ ಯುದ್ಧ ವಿಮಾನಗಳನ್ನು ಭಾರತೀಯ ವಾಯುಸೇನೆ ಖರೀದಿಸಿತ್ತು. ಕಳೆದ ವರ್ಷ ಸಪ್ಟೆಂಬರ್ 10ರಂದು ವಿಮಾನಗಳು ಅಂಬಾಲಾ ವಾಯುನೆಲೆಗೆ ಬಂದಿದ್ದವು. ಇಂದು ಮೊದಲ ಬಾರಿಗೆ ರಫೇಲ್ ಯುದ್ಧ ವಿಮಾನವು ನೀಡಿದ ವರ್ಟಿಕಲ್ ಚಾರ್ಲಿ ಪ್ರದರ್ಶನ ಜನರ ಕುತೂಹಲಕ್ಕೆ ಕಾರಣವಾಗಿತ್ತು.
In Depth Report | ದೆಹಲಿ ಕೆಂಪುಕೋಟೆಯಲ್ಲಿ ರೈತಧ್ವಜ, ಟ್ರ್ಯಾಕ್ಟರ್ ಪರೇಡ್ ಈವರೆಗೆ ಏನೆಲ್ಲಾ ನಡೆಯಿತು?
Published On - 8:37 pm, Tue, 26 January 21