ಭಾರತದಲ್ಲಿ ಕೊರೊನಾ 2ನೇ ಅಲೆ ಇನ್ನೂ ಮುಗಿದಿಲ್ಲ: ಕೇಂದ್ರ ಕೊರೊನಾ ಕಾರ್ಯಪಡೆ ಅಧ್ಯಕ್ಷ ವಿ.ಕೆ.ಪೌಲ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 02, 2021 | 7:40 PM

ಇಡೀ ದೇಶ ಸುರಕ್ಷಿತ ಆಗುವವರೆಗೂ ನಾವು ಸುರಕ್ಷಿತ ಅಲ್ಲ ಎಂಬುದನ್ನು ಗಮನದಲ್ಲಿಡಬೇಕು. ಒಂದೆಡೆಯಿಂದ ಕೊರೊನಾ ಇನ್ನೊಂದೆಡೆಗೆ ಹರಡುತ್ತದೆ ಎಂದು ಕೇಂದ್ರ ಕೊರೊನಾ ಕಾರ್ಯಪಡೆ ಅಧ್ಯಕ್ಷ ವಿ.ಕೆ.ಪೌಲ್ ತಿಳಿಸಿದರು.

ಭಾರತದಲ್ಲಿ ಕೊರೊನಾ 2ನೇ ಅಲೆ ಇನ್ನೂ ಮುಗಿದಿಲ್ಲ: ಕೇಂದ್ರ ಕೊರೊನಾ ಕಾರ್ಯಪಡೆ ಅಧ್ಯಕ್ಷ ವಿ.ಕೆ.ಪೌಲ್
ಡಾ. ವಿ.ಕೆ.ಪೌಲ್​
Follow us on

ಬೆಂಗಳೂರು: ಭಾರತದಲ್ಲಿ ಕೊರೊನಾ 2ನೇ ಅಲೆ ಇನ್ನೂ ಮುಗಿದಿಲ್ಲ. ಕೊರೊನಾ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿರುವ 7 ರಾಜ್ಯಗಳಿಗೆ ಕೇಂದ್ರ ತಂಡಗಳನ್ನು ಕಳಿಸಿಕೊಡಲಾಗಿದೆ. ಇಡೀ ದೇಶ ಸುರಕ್ಷಿತ ಆಗುವವರೆಗೂ ನಾವು ಸುರಕ್ಷಿತ ಅಲ್ಲ ಎಂಬುದನ್ನು ಗಮನದಲ್ಲಿಡಬೇಕು. ಒಂದೆಡೆಯಿಂದ ಕೊರೊನಾ ಇನ್ನೊಂದೆಡೆಗೆ ಹರಡುತ್ತದೆ ಎಂದು ಕೇಂದ್ರ ಕೊರೊನಾ ಕಾರ್ಯಪಡೆ ಅಧ್ಯಕ್ಷ ವಿ.ಕೆ.ಪೌಲ್ ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಯೂರೋಪ್​ನಲ್ಲಿ ಮತ್ತೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪಂಜಾಬ್ ರಾಜ್ಯದ ಪೊಲೀಸ್ ಇಲಾಖೆಯಲ್ಲಿ 4868 ಜನರಿಗೆ ಲಸಿಕೆ ಸಿಕ್ಕಿರಲಿಲ್ಲ. ಇವರ ಪೈಕಿ 15 ಜನರು ಸಾವನ್ನಪ್ಪಿದ್ದಾರೆ. ಅಂದರೆ ಸಾವಿರಕ್ಕೆ ಮೂವರ ಸಾವು. 35,856 ಜನರಿಗೆ ಸಿಂಗಲ್ ಡೋಸ್ ಲಸಿಕೆ ಸಿಕ್ಕಿತ್ತು. ಇವರ ಪೈಕಿ 9 ಜನರು ಸಾವನ್ನಪ್ಪಿದ್ದರು. ಅಂದರೆ ಸಾವಿರಕ್ಕೆ 0.25 ಸಾವು. ಡಬಲ್ ಡೋಸ್ ಪಡೆದ 42 ಸಾವಿರ ಪೊಲೀಸರ ಪೈಕಿ ಕೇವಲ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಚಂಡೀಗಢ ಪಿಜಿಐಎಂಆರ್ ನಡೆಸಿದ ಅಧ್ಯಯನವು ಹೇಳಿದೆ.

ಲಸಿಕೆ ಪಡೆದವರಿಗೆ ಕೊರೊನಾ ಸಾವಿನಿಂದ ರಕ್ಷಣೆ ಸಿಗುತ್ತದೆ ಎಂಬುದನ್ನು ಈ ಅಧ್ಯಯನವು ಸಾಬೀತುಪಡಿಸಿದೆ. ದೇಶಕ್ಕೆ 3ನೇ ಅಲೆ ಬಾಧಿಸುವುದು ಬೇಡ. ನಾವೆಲ್ಲವೂ ವೈಜ್ಞಾನಿಕ ದೃಷ್ಟಿಕೋನ ಅಳವಡಿಸಿಕೊಂಡರೆ 3ನೇ ಅಲೆಯನ್ನು ಖಂಡಿತ ತಡೆಯಬಹುದು. ನಮ್ಮ ದೇಶದಲ್ಲಿಯೂ ಮಾಡೆರ್ನಾ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. ಲಸಿಕೆ ಉತ್ಪಾದಕರು ನೀಡಿದ ಭರವಸೆಯಂತೆ 216 ಕೋಟಿ ಡೋಸ್ ಲಸಿಕೆ ಲಭ್ಯ ಎಂದಿದ್ದೇವೆ. ಜೈಡಸ್ ಕ್ಯಾಡಿಲಾ ಹೆಲ್ತ್ ಕೇರ್ ಕಂಪನಿಯು ಆಗಸ್ಟ್ ತಿಂಗಳಿಂದ ಡಿಸೆಂಬರ್​ವರೆಗೆ 5 ಕೋಟಿ ಡೋಸ್ ಪೂರೈಕೆ ಮಾಡಲಿದೆ. ಮೊದಲು 216 ಕೋಟಿ ಡೋಸ್ ಸಿಗುತ್ತೆ ಎಂಬ ನಿರೀಕ್ಷೆ ಇರಿಸಿಕೊಂಡಿದ್ದೆವು ಎಂದು ವಿವರಿಸಿದರು.

ಜೂನ್ 21ರ ಬಳಿಕ ದೇಶದಲ್ಲಿ ಲಸಿಕೆ ನೀಡಿಕೆಗೆ ವೇಗ ಸಿಕ್ಕಿದೆ. ದೇಶದಲ್ಲಿ ಕೊರೊನಾ ಎರಡನೇ ಅಲೆ ಮುಗಿದಿಲ್ಲ. ಹೀಗಾಗಿ ನಾವು ಎಚ್ಚರಿಕೆ ವಹಿಸುವುದರಲ್ಲಿ ನಿರ್ಲಕ್ಷ್ಯ ತೋರುವಂತಿಲ್ಲ. ಯುರೋಪ್​ನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂಗ್ಲೆಂಡ್ ಹಾಗೂ ರಷ್ಯಾದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿವೆ ಎಂದು ವಿವರಿಸಿದರು.

(India is Still Facing Covid 2nd Wave Threat Says Central Corona Task Force Leader VK Paul)

ಇದನ್ನೂ ಓದಿ: ಗರ್ಭಿಣಿಯರು ಕೊರೊನಾ ಲಸಿಕೆ ಪಡೆಯಬಹುದು: ಕೇಂದ್ರ ಆರೋಗ್ಯ ಇಲಾಖೆ ನಿರ್ಧಾರ

ಇದನ್ನೂ ಓದಿ: ಮನುಷ್ಯರಿಂದ ನಾಯಿ, ಬೆಕ್ಕುಗಳಿಗೆ ಕೊರೊನಾ ಹರಡುವ ಸಾಧ್ಯತೆ! ಆದರೆ, ಅವುಗಳಿಂದ ಬೇರೆಯವರಿಗೆ ದಾಟುವುದು ಅನುಮಾನ: ಡಚ್ ಅಧ್ಯಯನ

Published On - 7:35 pm, Fri, 2 July 21