ನವದೆಹಲಿ: ಪ್ರಪಂಚದ ಕೆಲವು ಭಾಗಗಳಲ್ಲಿ ಕೋವಿಡ್ ಪ್ರಕರಣಗಳು (Covid-19) ಉಲ್ಬಣಗೊಂಡಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉನ್ನತ ಮಟ್ಟದ ಸಭೆ ನಡೆಸಿದರು. ಸಭೆಯಲ್ಲಿ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದು, ಇದೀಗ ಕೇಂದ್ರ ಸರ್ಕಾರ ವಿದೇಶದಿಂದ ಆಗಮಿಸುವವರಿಗೆ ಹೊಸ ಮಾರ್ಗಸೂಚಿ (guidelines) ಪ್ರಕಟಿಸಿದೆ.
ಮೋದಿ ಸಭೆ ನಂತರ ಕೇಂದ್ರ ಆರೋಗ್ಯ ಇಲಾಖೆ ವಿದೇಶದಿಂದ ಆಗಮಿಸುವವರಿಗೆ ಹೊಸ ಗೈಡ್‌ಲೈನ್ಸ್ ರಿಲೀಸ್ ಮಾಡಿದ್ದು, ಡಿಸೆಂಬರ್ 24ರಿಂದ ಅನ್ವಯವಾಗಲಿದೆ.
ವಿದೇಶದಿಂದ ಆಗಮಿಸುವವರಿಗೆ ಹೊಸ ಗೈಡ್‌ಲೈನ್ಸ್
* ವಿದೇಶದಿಂದ ಬರುವವರು ವ್ಯಾಕ್ಸಿನ್ ಕಡ್ಡಾಯವಾಗಿ ಪಡೆದಿರಬೇಕು
* ಏರ್‌ಪೋರ್ಟ್‌ಗಳಲ್ಲಿ ಮಾಸ್ಕ್ ಹಾಗೂ ದೈಹಿಕ ಅಂತರ ಪಾಲಿಸಬೇಕು
* ಏರ್‌ಪೋರ್ಟ್‌ಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ
*ಕೊವಿಡ್ ಗುಣಲಕ್ಷಣ ಕಂಡುಬಂದ್ರೆ ಐಸೋಲೇಷನ್ ಕಡ್ಡಾಯ
* ಇನ್ಮುಂದೆ ಏರ್‌ಪೋರ್ಟ್‌ಗಳಲ್ಲಿ ಱಂಡಮ್ ಟೆಸ್ಟ್ ಕಡ್ಡಾಯ
* ಪಾಸಿಟಿವ್ ಬಂದ್ರೆ ಜಿನೋಮಿಕ್ ಸೀಕ್ವೆನ್ಸ್ ಕಡ್ಡಾಯ
* 12 ವರ್ಷದೊಳಗಿನ ಮಕ್ಕಳಿಗೆ ರ್ಯಾಂಡಮ್ ಟೆಸ್ಟ್ ಅಗತ್ಯವಿಲ್ಲ
* 12 ವರ್ಷದೊಳಗಿನವರಿಗೆ ಸೋಂಕಾದ್ರೆ ಮನೆಯಲ್ಲೇ ಐಸೋಲೇಷನ್
ಸಭೆಯಲ್ಲಿ ಮೋದಿ ಸಲಹೆ
ಸೋಂಕು ನಿರ್ವಹಣೆಗೆ ಕಟ್ಟುನಿಟ್ಟಾದ ನಿಗಾ ವಹಿಸುವಂತೆ ಸಭೆಯಲ್ಲಿ ಮೋದಿ ಸಲಹೆ ನೀಡಿದ್ದಾರೆ. ಜನದಟ್ಟಣೆಯ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಬಳಕೆಗೆ ಜನರನ್ನು ಒತ್ತಾಯಿಸಬೇಕು, ಕೋವಿಡ್-19 ಪರೀಕ್ಷೆ ಮತ್ತು ಜಿನೋಮಿಕ್ ಸಿಕ್ವೆನ್ಸಿಂಗ್ ಹೆಚ್ಚಿಸಬೇಕು, ವೃದ್ಧರು ಹಾಗೂ ದುರ್ಬಲ ಜನರು ಮುನ್ನೆಚ್ಚರಿಕೆ ಡೋಸ್ ಪಡೆಯುವಂತೆ ಪ್ರೋತ್ಸಾಹಿಸಬೇಕು ಎಂದಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೆ ಕೊರೊನಾ ಭೀತಿ: ಹೊಸದಾಗಿ ಮಾರ್ಗಸೂಚಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ
ಆಕ್ಸಿಜನ್ ಸಿಲಿಂಡರ್‌ಗಳು, ಪಿಎಸ್‌ಎ ಪ್ಲಾಂಟ್‌ಗಳು, ವೆಂಟಿಲೇಟರ್‌ಗಳು ಮತ್ತು ಮಾನವ ಸಂಪನ್ಮೂಲ ಸೇರಿದಂತೆ ಆಸ್ಪತ್ರೆಯ ಮೂಲಸೌಕರ್ಯಗಳ ಕಾರ್ಯಾಚರಣೆಯ ಸಿದ್ಧತೆ ಖಚಿತಪಡಿಸಿಕೊಳ್ಳಲು ಕೋವಿಡ್ ನಿರ್ದಿಷ್ಟ ಸೌಲಭ್ಯಗಳನ್ನು ಲೆಕ್ಕಪರಿಶೋಧಿಸಲು ರಾಜ್ಯಗಳಿಗೆ ಪ್ರಧಾನಿ ಮೋದಿ ಸಲಹೆ ನೀಡಿದರು ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ತಿಳಿಸಿದೆ.