ಕರ್ನಾಟಕದಲ್ಲಿ ಮತ್ತೆ ಕೊರೊನಾ ಭೀತಿ: ಹೊಸದಾಗಿ ಮಾರ್ಗಸೂಚಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

ಕರ್ನಾಟಕದಲ್ಲಿ ಕೊರೊನಾ ಭೀತಿ ಹಿನ್ನೆಲೆ ಮುಂಜಾಗೃತ ಕ್ರಮವಾಗಿ ರಾಜ್ಯ ಸರ್ಕಾರದಿಂದ ಹೊಸದಾಗಿ ಗೈಡ್‌ಲೈನ್ಸ್‌ ರಿಲೀಸ್‌ ಮಾಡಲಾಗಿದೆ.

ಕರ್ನಾಟಕದಲ್ಲಿ ಮತ್ತೆ ಕೊರೊನಾ ಭೀತಿ: ಹೊಸದಾಗಿ ಮಾರ್ಗಸೂಚಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ
ವಿಧಾನಸೌಧ (ಸಂಗ್ರಹ ಚಿತ್ರ)
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Dec 22, 2022 | 10:28 PM

ಬೆಂಗಳೂರು: ನೆರೆಯ ಚೀನಾದಲ್ಲಿ ಮಹಾಮಾರಿ ಕೊರೊನಾ ಸೋಂಕಿನ (Coron virus) ಹವಾಳಿ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ಸೋಂಕಿನ ಪ್ರಮಾಣ ಏರುತ್ತಲೇ ಇದೆ. ಹಾಗಾಗಿ ರಾಜ್ಯದಲ್ಲಿಯೂ ಕಟ್ಟುನಿಟ್ಟಿನ ಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಮುಂದಾಗಿದ್ದು, ರಾಜ್ಯ ಸರ್ಕಾರದಿಂದ ಹೊಸದಾಗಿ ಗೈಡ್‌ಲೈನ್ಸ್‌ ರಿಲೀಸ್‌ ಮಾಡಲಾಗಿದೆ. ILI/SARI ಪ್ರಕರಣಗಳಿಗೆ ಕೊವಿಡ್‌ ಟೆಸ್ಟ್‌ ಮಾಡಿಸುವುದು ಕಡ್ಡಾಯ. ಸೋಂಕಿನ ಲಕ್ಷಣ ಹೊಂದಿರುವವರು, ಖಚಿತ ಪ್ರಕರಣಗಳ ಸಂಪರ್ಕಿತರು ಇನ್ಮುಂದೆ ಕೋವಿಡ್​ ಪರೀಕ್ಷೆಗೆ ಒಳಪಡುವುದು ಕಡ್ಡಾಯ ಮಾಡಲಾಗಿದೆ. ಸೋಂಕಿತರನ್ನು ಆಸ್ಪತ್ರೆಗೆ ಕರೆತರುವ ತಂಡ ಕಾರ್ಯೋನ್ಮುಖವಾಗಬೇಕು. ಬಿಬಿಎಂಪಿ, ಜಿಲ್ಲಾ ವ್ಯಾಪ್ತಿಯಲ್ಲಿ ತಂಡ ಕಾರ್ಯೋನ್ಮುಖವಾಗಬೇಕು. ಬೆಂಗಳೂರು, ಮಂಗಳೂರು ಏರ್‌ಪೋರ್ಟ್‌ನಲ್ಲಿ ಕೋವಿಡ್‌ ಹೈಅಲರ್ಟ್‌ ಘೋಷಣೆ ಮಾಡಲಾಗಿದೆ.

ಕೇಂದ್ರದ ನಿಯಮದಂತೆ 2% ಪ್ರಯಾಣಿಕರಿಗೆ ಟೆಸ್ಟ್‌ ಮುಂದುವರಿಸಬೇಕು. ಪಾಸಿಟಿವ್ ಬಂದ್ರೆ ಜಿನೋಮಿಕ್ ಸೀಕ್ವೆನ್ಸ್‌ ಕಡ್ಡಾಯ ಮಾಡಲಾಗಿದೆ. ಜಿಲ್ಲಾಸ್ಪತ್ರೆ, ಖಾಸಗಿ ಮತ್ತು ವೈದ್ಯ ಕಾಲೇಜು ಆಸ್ಪತ್ರೆಗಳಲ್ಲಿ ಐಸೋಲೇಷನ್ ಬೆಡ್‌ ಮೀಸಲಿಡಬೇಕು. ಸೋಂಕು ಹೆಚ್ಚಾದಲ್ಲಿ ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಸನ್ನದ್ಧವಾಗಿರಬೇಕು. ಆಕ್ಸಿಜನ್, ಬೆಡ್‌, ಔಷಧ ದಾಸ್ತಾನು ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಆಕ್ಸಿಜನ್ ಪೂರೈಕೆ ಖಚಿತಪಡಿಸಲು 15 ದಿನಕ್ಕೊಮ್ಮೆ ಡ್ರೈರನ್‌ ಕಡ್ಡಾಯವಾಗಿದೆ. ಆಸ್ಪತ್ರೆ ವೈದ್ಯ ಸಿಬ್ಬಂದಿ, ರೋಗಿಗಳು, ಸಂಬಂಧಿಕರಿಗೆ ಮಾಸ್ಕ್‌ ಕಡ್ಡಾಯ ಮಾಡಲಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೆ ಕೊರೋನಾ ಭೀತಿ, ಎಸಿ ಹಾಲ್, ಒಳಾಂಗಣ ಪ್ರದೇಶದಲ್ಲಿ ಮಾಸ್ಕ್ ಕಡಾಯ: ಸುಧಾಕರ್

ಕೊರೊನಾ ಭೀತಿ: ಕ್ರಮಕೈಗೊಳ್ಳಲು ಸಿಎಂ ಬೊಮ್ಮಾಯಿ ಸೂಚನೆ 

ಮತ್ತೆ ಮಹಾಮಾರಿ ಕೊರೊನಾ ಎಂಟ್ರಿ ಹಿನ್ನೆಲೆ ಬೆಳಗಾವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಇಂದು ಕೊವಿಡ್ ಸಭೆ ಮಾಡಿ ಹಲವಾರು ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದೇನೆ. ಇಂಟ್ರನಲ್​ನಲ್ಲಿ ಮಾಸ್ಕ್ ಹಾಕುವುದರಿಂದ ಹಿಡಿದು, ಟೆಸ್ಟ್​ಗಳನ್ನು ಜಾಸ್ತಿ ಮಾಡಬೇಕು. ವಿಶೇಷವಾಗಿ ಏರ್ ಪೋರ್ಟ್​ನಲ್ಲಿ ಟೆಸ್ಟ್​ಗಳನ್ನು ಹೆಚ್ಚಿಗೆ ಮಾಡಬೇಕು. ಬೂಸ್ಟರ್ ಡೋಸ್ ಹೆಚ್ಚಳ‌ ಮಾಡುವ ಸಲುವಾಗಿ ಸ್ಪೆಷಲ್ ಕ್ಯಾಂಪ್ ಮಾಡಬೇಕು. ಜೊತೆಗೆ ಕೋವಿಡ್ ಬಂದರೆ ಆಸ್ಪತ್ರೆಯನ್ನು ತಯಾರಿ ಮಾಡಿಕೊಳ್ಳುವ ಬಗ್ಗೆ ಸೂಚನೆ ಕೊಟ್ಟಿದ್ದೇನೆ ಎಂದು ತಿಳಿಸಿದರು.

ಮಾಸ್ಕ್ ಕಡಾಯ: ಡಾ. ಕೆ.ಸುಧಾಕರ್ 

ಇನ್ನು ಈ ಕುರಿತಾಗಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಎಸಿ ಹಾಲ್, ಒಳಾಂಗಣ ಪ್ರದೇಶದಲ್ಲಿ ಮಾಸ್ಕ್ ಧರಿಸಬೇಕು. ತಕ್ಷಣಕ್ಕೆ ಎಲ್ಲಾ ಕಡೆ ಸ್ಕ್ರೀನಿಂಗ್ ಮಾಡಲ್ಲ. ದೇಶದಿಂದ ಬರುವ ಶೇ.3ರಷ್ಟು ಜನರಿಗೆ ವಿಮಾನ ನಿಲ್ದಾಣದಲ್ಲಿ ರ್‍ಯಾಂಡಮ್ ಸ್ಯಾಂಪಲ್ ಪರೀಕ್ಷೆ ಮಾಡಲಾಗುವುದು ರಾಜ್ಯದಲ್ಲಿ ಸದ್ಯ 4 ಸಾವಿರ ಕೋವಿಡ್ ಟೆಸ್ಟ್ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಕೋವಿಡ್ ಟೆಸ್ಟ್​ ಪ್ರಮಾಣ ಹೆಚ್ಚಿಸುತ್ತೇವೆ. ಕೊರೊನಾ ರೂಪಾಂತರಿ ತಳಿ ವೇಗವಾಗಿ ಹರಡುವ ಮಾಹಿತಿಯಿದೆ. ಮತ್ತಷ್ಟು ವರದಿ ಬಂದ ನಂತರ ಅಧ್ಯಯನ ಮಾಡಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೆ ಕೊರೋನಾ ಭೀತಿ: ಕೊವಿಡ್ ನಿಯಮ ಜಾರಿಗೆ ಹೋಟೆಲ್ ಮಾಲೀಕರ ಸಂಘ ವಿರೋಧ

ಆದಷ್ಟು ಬೇಗ ಎಲ್ಲರೂ ಬೂಸ್ಟರ್​ ಡೋಸ್ ತೆಗೆದುಕೊಳ್ಳಬೇಕು

ಆದಷ್ಟು ಬೇಗ ಎಲ್ಲರೂ ಬೂಸ್ಟರ್​ ಡೋಸ್ ತೆಗೆದುಕೊಳ್ಳಬೇಕು. ಜಿಲ್ಲಾಸ್ಪತ್ರೆಗಳಲ್ಲಿ ಕೊವಿಡ್​ ಚಿಕಿತ್ಸೆಗೆ ಹಾಸಿಗೆ ಮೀಸಲಿಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್ ಚಿಕಿತ್ಸೆಗೆ ಹಾಸಿಗೆ ಮೀಸಲಿಡಲಾಗಿದೆ. ಕೋವಿಡ್ ಕಡಿಮೆಯಾದ ಹಿನ್ನೆಲೆ ಲಸಿಕೆ ಪಡೆಯಲು ಮೀನಮೇಷ ಮಾಡಬಾರದು. ಎಲ್ಲರೂ ಬೂಸ್ಟರ್​ ಡೋಸ್​​​ ಪಡೆಯಬೇಕು. ಶೇಕಡಾ 20ರಷ್ಟು ಜನರು ಮಾತ್ರ ಬೂಸ್ಟರ್​ ಡೋಸ್ ಪಡೆದಿದ್ದಾರೆ. ಎಲ್ಲಾ ಕಡೆ ಕ್ಯಾಂಪ್​ ಮಾಡಿ ಬೂಸ್ಟರ್​ ಡೋಸ್ ನೀಡಲು ನಿರ್ಧಾರ ಮಾಡಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 10:26 pm, Thu, 22 December 22