ಉಚಿತ ಆಹಾರ ಧಾನ್ಯಗಳ ವಿತರಣೆ ಯೋಜನೆ ಮೂರು ತಿಂಗಳಿಗೆ ವಿಸ್ತರಿಸುವ ಸಾಧ್ಯತೆ: ವರದಿ

| Updated By: ರಶ್ಮಿ ಕಲ್ಲಕಟ್ಟ

Updated on: Sep 27, 2022 | 8:06 PM

ಏಪ್ರಿಲ್ 2020ರಲ್ಲಿ ಆರಂಭವಾದ ಈ ಯೋಜನೆ ಕೋವಿಡ್ 19 ಲಾಕ್​​ಡೌನ್ ಹೊತ್ತಲ್ಲಿ ಬಡವರಿಗೆ ಸಹಾಯ ಮಾಡಿತ್ತು. ಈ ಯೋಜನೆ ಅಂಗವಾಗಿ ಪ್ರತೀ ತಿಂಗಳು ಒಬ್ಬ ವ್ಯಕ್ತಿಗೆ 5 ಕೆಜಿ ಉಚಿತ ಧಾನ್ಯ ನೀಡುತ್ತದೆ.

ಉಚಿತ ಆಹಾರ ಧಾನ್ಯಗಳ ವಿತರಣೆ ಯೋಜನೆ ಮೂರು ತಿಂಗಳಿಗೆ ವಿಸ್ತರಿಸುವ ಸಾಧ್ಯತೆ: ವರದಿ
ಪ್ರಾತಿನಿಧಿಕ ಚಿತ್ರ
Follow us on

ಭಾರತ ಸರ್ಕಾರ ತನ್ನ ಉಚಿತ ಆಹಾರ ಧಾನ್ಯಗಳ ವಿತರಣೆ (food grains program) ಯೋಜನೆ ಮೂರು ತಿಂಗಳವರೆಗೆ ವಿಸ್ತರಿಸುವ ಸಾಧ್ಯತೆಯಿದೆ. ಇದು ರಾಷ್ಟ್ರದ ಬಹುಪಾಲು ಜನಸಂಖ್ಯೆಯನ್ನು ತಲುಪಲಿದ್ದು ವಾರ್ಷಿಕವಾಗಿ  18 ಶತಕೋಟಿ  ಡಾಲರ್​​ಗಿಂತ ಹೆಚ್ಚು ವೆಚ್ಚವಾಗುತ್ತದೆ ಎಂದು ಈ ವಿಷಯದ ಬಗ್ಗೆ ತಿಳಿದಿರುವ ಜನರು ಹೇಳಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದೆ. ಆಹಾರ ಸಚಿವಾಲಯವು ವಿಸ್ತರಣೆಯನ್ನು ಕೋರಿರುವುದರಿಂದ ಸರ್ಕಾರವು ಡಿಸೆಂಬರ್‌ವರೆಗೆ ಸುಮಾರು 800 ಮಿಲಿಯನ್ ಜನರಿಗೆ ಉಚಿತ ಅಕ್ಕಿ ಅಥವಾ ಗೋಧಿ ನೀಡುವುದನ್ನು ಮುಂದುವರಿಸಬಹುದು. ಈ ಯೋಜನೆ ಸೆಪ್ಟೆಂಬರ್ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದೆ ಎಂದು ಹೆಸರು ಹೇಳಲಿಚ್ಛಿಸದ ಮೂಲಗಳು ತಿಳಿಸಿವೆ. ರಾಷ್ಟ್ರದ ಹಣಕಾಸು ಸಚಿವಾಲಯದ ಅಸಮ್ಮತಿ ಹೊರತಾಗಿಯೂ ಆಹಾರ ಸಚಿವಾಲಯವು ಈ ಯೋಜನೆಯನ್ನು ಅನ್ನು ವಿಸ್ತರಿಸಲು ಒತ್ತಾಯಿಸುತ್ತದೆ ಎಂದು ಬ್ಲೂಮ್‌ಬರ್ಗ್ ಈ ಹಿಂದೆ ವರದಿ ಮಾಡಿದೆ. ಯೋಜನೆ ವಿಸ್ತರಿಸುವ ಪರ  ವಹಿಸದ ಹಣಕಾಸು ಸಚಿವಾಲಯವು ಹಣಕಾಸಿನ ಒತ್ತಡ ಮತ್ತು ಜಾಗತಿಕವಾಗಿ ಬಿಗಿಯಾದ ಪೂರೈಕೆಗಳಿಂದ ನೀಡಲಾಗುವ ಧಾನ್ಯಗಳ ಪ್ರಮಾಣವನ್ನು ಕಡಿಮೆ ಮಾಡಲು ಸೂಚಿಸಿದೆ ಎಂದು ಮೂಲಗಳು ಹೇಳಿವೆ. ಶೀಘ್ರದಲ್ಲೇ ಅಂತಿಮ ನಿರ್ಧಾರವನ್ನು ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು.

ಏಪ್ರಿಲ್ 2020ರಲ್ಲಿ ಆರಂಭವಾದ ಈ ಯೋಜನೆ ಕೋವಿಡ್ 19 ಲಾಕ್​​ಡೌನ್ ಹೊತ್ತಲ್ಲಿ ಬಡವರಿಗೆ ಸಹಾಯ ಮಾಡಿತ್ತು. ಈ ಯೋಜನೆ ಅಂಗವಾಗಿ ಪ್ರತೀ ತಿಂಗಳು ಒಬ್ಬ ವ್ಯಕ್ತಿಗೆ 5 ಕೆಜಿ ಉಚಿತ ಧಾನ್ಯ ನೀಡುತ್ತದೆ.ಅಲ್ಲಿಂದ ಇಲ್ಲಿಯವರಗೆ ಇದರ ವೆಚ್ಚ 44 ಬಿಲಿಯನ್ ಡಾಲರ್ ಆಗಿದ್ದು,ಸರ್ಕಾರದ ಮೇಲೆ ಹೊರೆಯಾಗಿದೆ.

ಈ ಬಗ್ಗೆ ಆಹಾರ ಮತ್ತು ಹಣಕಾಸು ಸಚಿವಾಲಯಗಳ ವಕ್ತಾರರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಅಕ್ಟೋಬರ್‌ನಿಂದ ಪ್ರಾರಂಭವಾಗುವ ಭಾರತದ ಹಬ್ಬದ ಋತುವಿನಲ್ಲಿ ಈ ಪ್ರಸ್ತಾಪವು ಆರ್ಥಿಕ ಚಟುವಟಿಕೆಗಳಲ್ಲಿ ಮುಖ್ಯವಾಗಿದ್ದು, ಕೆಲವು ರಾಜ್ಯಗಳಲ್ಲಿ ಚುನಾವಣೆಯೂ ನಡೆಯಲಿದೆ.

ಈ ಯೋಜನೆ ಬಹಳ ಜನಪ್ರಿಯವಾಗಿದ್ದರೂ, ಇದು ಅಗ್ಗದ ಧಾನ್ಯಗಳ ಸಮೃದ್ಧ ಪೂರೈಕೆಯ ಅಗತ್ಯವನ್ನು ಹೆಚ್ಚಿಸುತ್ತದೆ. ಈ ವರ್ಷ, ಅನಿಯಮಿತ ಹವಾಮಾನದಿಂದಾಗಿ ಕೃಷಿಗೆ ಹಾನಿಯಾದ ಕಾರಣ ಭಾರತ ಗೋಧಿ ಮತ್ತು ಅಕ್ಕಿಯ ರಫ್ತುಗಳನ್ನು ನಿರ್ಬಂಧಿಸಬೇಕಾಗಿ ಬಂದಿತ್ತು. ಇದು ಆಹಾರದ ಬೆಲೆಗಳ ಏರಿಕೆಗೂ ಕಾರಣವಾಗಿದೆ.

Published On - 8:04 pm, Tue, 27 September 22