Fact Check: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ವಿಐಪಿಗಳಿಗೆ ವಸತಿ ಕಲ್ಪಿಸಲು ಮರ ಕಡಿಯಲಾಗಿತ್ತೇ?
ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ರಾಜ್ಯ ಇಲಾಖೆಯ ಅಧಿಕಾರಿಯೊಬ್ಬರು, ಕುನೋದಲ್ಲಿ ಹೆಲಿಪ್ಯಾಡ್‌ಗಳನ್ನು ನಿರ್ಮಿಸಲು ಯಾವುದೇ ಮರವನ್ನು ಕಡಿಯಲಾಗಿಲ್ಲ, ಹಾಗೆ ಆಯ್ಕೆ ಮಾಡಿದ ಜಾಗದಲ್ಲಿ ಮರಗಳಿಲ್ಲ..
ದೆಹಲಿ: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದಿಂದ ತಂದ ಚೀತಾಗಳನ್ನು ಬಿಡುಗಡೆ ಮಾಡುವುದಕ್ಕಾಗಿ 300 ಅತಿಥಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಬರುವ ಮುನ್ನ ಇಲ್ಲಿ ಮರಗಳನ್ನು ಕಡಿಯಲಾಗಿದೆ ಎಂದು ಹೇಳುವ ಸುದ್ದಿ ಸತ್ಯಕ್ಕೆ ದೂರವಾದುದು ಎಂದು ಪಿಬಿಐ ಫ್ಯಾಕ್ಟ್ ಚೆಕ್ ಮಾಡಿ ಟ್ವೀಟ್ ಮಾಡಿದೆ. ‘ದಿ ಏಷ್ಯನ್ ಏಜ್’ ಪತ್ರಿಕೆಯಲ್ಲಿ ಪ್ರಕಟವಾದ ಲೇಖನದ ಪ್ರಕಾರ, ರಾಷ್ಟ್ರೀಯ ಉದ್ಯಾನವನವು ಕೇವಲ ಒಂದು ಅತಿಥಿಗೃಹವನ್ನು ಹೊಂದಿತ್ತು, ಆದ್ದರಿಂದ ವಿಐಪಿಗಳಿಗೆ ವಸತಿ ಕಲ್ಪಿಸಲು ಟೆಂಟ್‌ಗಳನ್ನು ಸ್ಥಾಪಿಸಲಾಯಿತು. ಇದಕ್ಕಾಗಿ ಸಾಕಷ್ಟು ಸಂಖ್ಯೆಯ ಮರಗಳನ್ನು ಕಡಿಯಲಾಗಿದೆ ಎಂದು ಹೇಳಿತ್ತು. ಆದಾಗ್ಯೂ, ಮಧ್ಯಪ್ರದೇಶದ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ರಾಷ್ಟ್ರೀಯ ಉದ್ಯಾನದಲ್ಲಿ ಒಂದೇ ಒಂದು ಮರವನ್ನು ಕಡಿಯಲಾಗಿಲ್ಲ ಮತ್ತು ಮಾಧ್ಯಮದ ವರದಿ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.
ಟೆಂಟ್ ನಿರ್ಮಿಸಲು ಕಡಿಯಲಾದ ಮರಗಳ ಹೊರತಾಗಿ ಮೋದಿಯವರ ಹೆಲಿಕಾಪ್ಟರ್ ಇಳಿಯಲು ಹೆಲಿಪ್ಯಾಡ್ ಮಾಡಲು ಕತ್ತರಿಸಲಾಗಿದೆ ಎಂದು ಪತ್ರಿಕೆಯ ವರದಿಯ ಕೂಡಾ ಸುಳ್ಳು ಎಂದು ಹೇಳಲಾಗಿದೆ.
A media report in ‘The Asian Age’ claims that a large no of trees were cut in Kuno Wildlife Sanctuary to make arrangements for PM’s visit for the release of 8 Cheetahs #PIBFactcheck
▶️No trees were cut ▶️Lodging arrangements were made at Sesaipura FRH & Tourism Jungle Lodge pic.twitter.com/rNkBhXEkTo
— PIB Fact Check (@PIBFactCheck) September 23, 2022
ಇದಲ್ಲದೆ, ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ರಾಜ್ಯ ಇಲಾಖೆಯ ಅಧಿಕಾರಿಯೊಬ್ಬರು, ಕುನೋದಲ್ಲಿ ಹೆಲಿಪ್ಯಾಡ್‌ಗಳನ್ನು ನಿರ್ಮಿಸಲು ಯಾವುದೇ ಮರವನ್ನು ಕಡಿಯಲಾಗಿಲ್ಲ, ಹಾಗೆ ಆಯ್ಕೆ ಮಾಡಿದ ಜಾಗದಲ್ಲಿ ಮರಗಳಿಲ್ಲ, ಮರಗಳನ್ನು ಕಡಿಯಲಾಗಿದೆ ಎಂಬ ಸುದ್ದಿ ಸಂಪೂರ್ಣ ಸುಳ್ಳು” ಎಂದು ಹೇಳಿದರು. ”300 ಮಂದಿ ಅತಿಥಿಗಳಿಗೆ ಟೆಂಟ್ ಹಾಕಿದ ವಸತಿ ವ್ಯವಸ್ಥೆಯಾಗಲಿ ಮಾಡಿಲ್ಲ, ಗಣ್ಯರು, ಅಧಿಕಾರಿಗಳು ಇದ್ದ ಸಸೈಪುರ ರೆಸಾರ್ಟ್‌ನಲ್ಲಿ ಟೆಂಟ್ ಹಾಕಲಾಗಿತ್ತು. ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಟೆಂಟ್ ನಿರ್ಮಿಸಲಾಗಿದೆ ಎಂಬ ಸುದ್ದಿ ಆಧಾರ ರಹಿತ ಎಂದಿದ್ದಾರೆ.