ಕೇರಳದಲ್ಲಿ ಅ.25ರವರೆಗೂ ಮಳೆಯ ಎಚ್ಚರಿಕೆ; 8 ಜಿಲ್ಲೆಗಳಲ್ಲಿ ಐಎಂಡಿಯಿಂದ ಆರೆಂಜ್​ ಅಲರ್ಟ್​​

| Updated By: Lakshmi Hegde

Updated on: Oct 21, 2021 | 4:15 PM

Kerala Rain: ಕೇರಳದಲ್ಲಿ ನೈಋತ್ಯ ಮಾನ್ಸೂನ್​ ಸಕ್ರಿಯವಾಗಿದೆ. ಹೀಗಾಗಿ ಕೇರಳದ ಬಹುತೇಕ ಪ್ರದೇಶಗಳಲ್ಲಿ ಮತ್ತು ಲಕ್ಷದ್ವೀಪದ ವಿವಿಧ ಕಡೆಗಳಲ್ಲಿ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಕೇರಳದಲ್ಲಿ ಅ.25ರವರೆಗೂ ಮಳೆಯ ಎಚ್ಚರಿಕೆ; 8 ಜಿಲ್ಲೆಗಳಲ್ಲಿ ಐಎಂಡಿಯಿಂದ  ಆರೆಂಜ್​ ಅಲರ್ಟ್​​
ಮಳೆ
Follow us on

ಕೇರಳದಲ್ಲಿ ಮಳೆ (Kerala Rain)ಯಿಂದಾದ ಅವಾಂತರಗಳಿಂದ ಈಗಾಗಲೇ ಸುಮಾರು 42 ಮಂದಿ ಮೃತಪಟ್ಟಿದ್ದು, 6 ಜನ ಕಾಣೆಯಾಗಿದ್ದಾರೆ. ಜನ ಮೃತರಾಗಿದ್ದಾರೆ. ಆದರೆ ಸದ್ಯಕ್ಕಂತೂ ಅಲ್ಲಿ ಮಳೆ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ. ಭಾರತೀಯ ಹವಾಮಾನ ಇಲಾಖೆ(India Meteorological Department) ಅಕ್ಟೋಬರ್​ 25ರವರೆಗೂ ಕೇರಳದ ಹಲವು ಜಿಲ್ಲೆಗಳಲ್ಲಿ ಆರೆಂಜ್​ ಮತ್ತು ಯೆಲ್ಲೋ ಅಲರ್ಟ್​​ ಘೋಷಿಸಿದೆ. ಅದರಲ್ಲಿ ಕೊಟ್ಟಾಯಂ, ಇಡುಕ್ಕಿ, ಪಲಕ್ಕಾಡ್​​, ಮಲಪ್ಪುರಂ, ಕೊಯಿಕ್ಕೊಡ್​, ವಯಾನಾಡ್​ ಮತ್ತು ಕಣ್ಣೂರು, ಪಥನಂತಿಟ್ಟ ಜಿಲ್ಲೆಗಳಲ್ಲಿ ಆರೆಂಜ್​ ಅಲರ್ಟ್​ ಹೇರಲಾಗಿದ್ದು, ತಿರುವನಂತಪುರಂ, ಕೊಲ್ಲಂ, ಆಲಪ್ಪುಳ, ಎರ್ನಾಕುಲಂ, ತ್ರಿಶೂರ್ ಮತ್ತು ಕಾಸರಗೋಡು ಜಿಲ್ಲೆಗಳಿಗೆ  ಹಳದಿ ಎಚ್ಚರಿಕೆ ನೀಡಲಾಗಿದೆ. ಆರೆಂಜ್​ ಅಲರ್ಟ್​ ಎಂದರೆ 6 ಸಿಎಂನಿಂದ 20 ಸಿಎಂನವರೆಗೆ ಮಳೆಯಾಗಬಹುದು ಎಂಬ ಎಚ್ಚರಿಕೆಯಾಗಿದೆ. ಹಾಗೇ ಹಳದಿ ಅಲರ್ಟ್​ ಎಂದರೆ 6ಸಿಎಂನಿಂದ 11 ಸಿಎಂವರೆಗೆ ಮಳೆಯಾಗಬಹುದು ಎಂಬ ಮುನ್ಸೂಚನೆಯಾಗಿದೆ.

ಸದ್ಯ ಕೇರಳದಲ್ಲಿ ನೈಋತ್ಯ ಮಾನ್ಸೂನ್​ ಸಕ್ರಿಯವಾಗಿದೆ. ಹೀಗಾಗಿ ಕೇರಳದ ಬಹುತೇಕ ಪ್ರದೇಶಗಳಲ್ಲಿ ಮತ್ತು ಲಕ್ಷದ್ವೀಪದ ವಿವಿಧ ಕಡೆಗಳಲ್ಲಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಾಗೇ, ಇಂದು ಕೇರಳದ ಕರಾವಳಿ ತೀರದಲ್ಲಿ ಗಾಳಿಯ ವೇಗ ಗಂಟೆಗೆ 40-50 ಕಿಮೀ ಇರಬಹುದಾದ ಹಿನ್ನೆಲೆಯಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯಬಾರದೆಂದು ಸೂಚಿಸಲಾಗಿದೆ.  ಇಂದಿನಿಂದ ಅಕ್ಟೋಬರ್​ 25ರವರೆಗೂ ಕೂಡ ಕೇರಳ, ಮಾಹೆ, ತಮಿಳುನಾಡು, ಪುದುಚೇರಿ ಮತ್ತು ಕರೈಕಲ್​​ಗಳಲ್ಲಿ ಗುಡುಗು-ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ.  ಇದರೊಂದಿಗೆ ಅಕ್ಟೋಬರ್​ 22-24ರ ಅವಧಿಯಲ್ಲಿ ಜಮ್ಮು-ಕಾಶ್ಮೀರ, ಲಡಾಖ್​, ಗಿಲ್ಗಿಟ್​-ಬಲ್ಚಿಸ್ತಾನ್​, ಮುಜಾಫರಾಬಾದ್​, ಹಿಮಾಚಲಪ್ರದೇಶ ಮತ್ತು ಪಂಜಾಬ್​ಗಳಲ್ಲಿ ಗುಡುಗು-ಮಿಂಚು-ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ ಎಂದೂ ವರದಿ ನೀಡಿದೆ.

ಇದನ್ನೂ ಓದಿ: ಬಾಲಿವುಡ್​ಗೆ ವಿಲನ್​ ಆಗಿ ಎಂಟ್ರಿ ಕೊಡೋಕೆ ರೆಡಿ ಆದ ಜಗಪತಿ ಬಾಬು; ಯಾರು ಹೀರೋ?

Tesla: ಎಲೆಕ್ಟ್ರಿಕ್​ ವಾಹನಗಳ ಆಮದು ಸುಂಕ ಇಳಿಸುವಂತೆ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಟೆಸ್ಲಾ ಒತ್ತಾಯ

Published On - 4:14 pm, Thu, 21 October 21