ಧ್ವಜಾರೋಹಣ ಮಾಡಿ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಕಾರ್ಯಕ್ಕೆ ಚಾಲನೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 26, 2021 | 8:19 PM

ಈಗ ಮಣ್ಣು ಪರೀಕ್ಷೆ ಕಾರ್ಯ ಆರಂಭಗೊಂಡಿದೆ. ಇದು ಪೂರ್ಣಗೊಂಡ ನಂತರ ನಾವು ಮಸೀದಿ ನಿರ್ಮಾಣ ಕಾರ್ಯ ಆರಂಭಿಸುತ್ತೇವೆ ಎಂದು ಟ್ರಸ್ಟ್​ ಮುಖ್ಯಸ್ಥ ಜಾಫರ್ ಅಹ್ಮದ್ ಫಾರೂಕಿ ಹೇಳಿದ್ದಾರೆ.

ಧ್ವಜಾರೋಹಣ ಮಾಡಿ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಕಾರ್ಯಕ್ಕೆ ಚಾಲನೆ
ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಚಾಲನೆ ನೀಡುವ ಮುನ್ನ ಧ್ವಜಾರೋಹಣ ಮಾಡಲಾಯಿತು
Follow us on

ಲಖನೌ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಧ್ವಜಾರೋಹಣ ಹಾಗೂ ಗಿಡ ನೆಡುವ ಆಂದೋಲನ ಹಮ್ಮಿಕೊಳ್ಳುವ ಮೂಲಕ ಮಸೀದಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಟ್ರಸ್ಟ್ ಸದಸ್ಯರು ಅಯೋಧ್ಯೆಯ ಧನ್ನಿಪುರ್​ ಗ್ರಾಮದ ಐದು ಎಕರೆ ಜಾಗದಲ್ಲಿ ಬೆಳಗ್ಗೆ 8:15ಕ್ಕೆ ಧ್ವಜಾರೋಹಣ ಮಾಡಿದರು. ಐಐಸಿಎಫ್ ಮಸೀದಿ ನಿರ್ಮಾಣದ ಜವಾಬ್ದಾರಿ ತೆಗೆದುಕೊಂಡಿದೆ. ಈ ಜಾಗ ರಾಮ ಜನ್ಮಭೂಮಿಯಿಂದ 25 ಕಿ.ಮೀ ದೂರದಲ್ಲಿದೆ.

ಈಗ ಮಣ್ಣು ಪರೀಕ್ಷೆ ಕಾರ್ಯ ಆರಂಭಗೊಂಡಿದೆ. ಇದು ಪೂರ್ಣಗೊಂಡ ನಂತರ ನಾವು ಮಸೀದಿ ನಿರ್ಮಾಣ ಕಾರ್ಯ ಆರಂಭಿಸುತ್ತೇವೆ. ಇದಕ್ಕಾಗಿ ದೇಣಿಗೆ ಸಂಗ್ರಹ ಮಾಡುತ್ತೇವೆ ಎಂದು ಟ್ರಸ್ಟ್​ ಮುಖ್ಯಸ್ಥ ಜಾಫರ್ ಅಹ್ಮದ್ ಫಾರೂಕಿ ಹೇಳಿದ್ದಾರೆ.

ಕಳೆದ ತಿಂಗಳು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಮಸೀದಿಯ ನೀಲ ನಕ್ಷೆಯನ್ನು ಬಿಡುಗಡೆ ಮಾಡಿತ್ತು. ಈ ಮಸೀದಿಗೆ ಏನು ಹೆಸರಿಡಬೇಕು ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಮಸೀದಿಗೆ ಯಾವುದೇ ರಾಜನ ಹೆಸರು ಇಡುವುದಿಲ್ಲ ಎಂಬದಷ್ಟೇ ನಾವು ನಿರ್ಧರಿಸಿದ್ದೇವೆ ಎಂದು ಟ್ರಸ್ಟ್​ನವರು ಹೇಳಿದ್ದರು.

2019ರಲ್ಲಿ ರಾಮ ಜನ್ಮಭೂಮಿ ತೀರ್ಪನ್ನು ಸುಪ್ರೀಂಕೋರ್ಟ್​ ನೀಡಿತ್ತು. ಈ ತೀರ್ಪಿನಲ್ಲಿ ವಿವಾದಿತ ಜಾಗವನ್ನು ರಾಮ ಮಂದಿರಕ್ಕೆ ನೀಡಿದರೆ, ಮಸೀದಿ ಕಟ್ಟಲು ಐದು ಎಕರೆ ಜಾಗವನ್ನು ಅಯೋಧ್ಯೆಯಲ್ಲೇ ಪ್ರತ್ಯೇಕವಾಗಿ ನೀಡಲಾಗಿದೆ.

ಅಯೋಧ್ಯೆಯಲ್ಲಿ ದಿವ್ಯ-ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಟಿವಿ 9 ಪ್ರಮೋಟರ್ಸ್​ ದೇಣಿಗೆ, 11 ಕೋಟಿ ರೂ ಚೆಕ್​ ಕಾಣಿಕೆ

Published On - 8:19 pm, Tue, 26 January 21