ಟ್ರ್ಯಾಕ್ಟರ್ ಪರೇಡ್: ದೆಹಲಿ ಐಟಿಒ ಪ್ರದೇಶದಲ್ಲಿ ಟ್ರ್ಯಾಕ್ಟರ್ ಉರುಳಿ ರೈತ ಸಾವು

|

Updated on: Jan 26, 2021 | 7:43 PM

ರೈತನ ಮೃತದೇಹಕ್ಕೆ ತ್ರಿವರ್ಣ ಧ್ವಜ ಹೊದಿಸಿ ಐಟಿಒ ಕ್ರಾಸಿಂಗ್​ನಲ್ಲಿರಿಸಿದ ಪ್ರತಿಭಟನಾಕಾರರು ಮರಣೋತ್ತರ ಪರೀಕ್ಷೆಗೆ ಕೊಂಡುಹೋಗದಂತೆ ಪೊಲೀಸರಿಗೆ ತಡೆಯೊಡ್ಡಿದ ಘಟನೆಯೂ ಇಲ್ಲಿ ನಡೆದಿದೆ.

ಟ್ರ್ಯಾಕ್ಟರ್ ಪರೇಡ್: ದೆಹಲಿ ಐಟಿಒ ಪ್ರದೇಶದಲ್ಲಿ ಟ್ರ್ಯಾಕ್ಟರ್ ಉರುಳಿ ರೈತ ಸಾವು
ರೈತನ ಮೃತದೇಹ
Follow us on

ದೆಹಲಿ: ಸೆಂಟ್ರಲ್ ದೆಹಲಿಯ ಐಟಿಒ ಪ್ರದೇಶದಲ್ಲಿ ರೈತರ ಮೆರವಣಿಗೆ ವೇಳೆ ಟ್ರ್ಯಾಕ್ಟರ್ ಉರುಳಿ ರೈತರೊಬ್ಬರು ಸಾವಿಗೀಡಾಗಿದ್ದಾರೆ. ಮೃತ ರೈತನ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಘಾಜಿಪುರ್ ಗಡಿಭಾಗದಿಂದ ರೈತರು ಟ್ರ್ಯಾಕ್ಟರ್ ಮೆರವಣಿಗೆ ಆರಂಭಿಸಿದ್ದರು. ಮೆರವಣಿಗೆ ಮಧ್ಯೆ ಐಟಿಒ ಪ್ರದೇಶದಲ್ಲಿ ಟ್ರ್ಯಾಕ್ಟರ್ ಉರುಳಿ ಬಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಟ್ರ್ಯಾಕ್ಟರ್ ಬ್ಯಾರಿಕೇಡ್​ಗೆ ಗುದ್ದಿ   ಟ್ರ್ಯಾಕ್ಟರ್ ಉರುಳಿದಾಗ  ಚಲಾಯಿಸುತ್ತಿದ್ದ ವ್ಯಕ್ತಿ ಅದರ ಚಕ್ರದೆಡೆಗೆ ಸಿಲುಕಿ ಸಾವಿಗೀಡಾಗಿದ್ದಾರೆ ಎಂದಿದ್ದಾರೆ ಪೊಲೀಸರು.

ರೈತನ ಮೃತದೇಹಕ್ಕೆ ತ್ರಿವರ್ಣ ಧ್ವಜ ಹೊದಿಸಿ ಐಟಿಒ ಕ್ರಾಸಿಂಗ್​ನಲ್ಲಿರಿಸಿದ ಪ್ರತಿಭಟನಾಕಾರರು ಮರಣೋತ್ತರ ಪರೀಕ್ಷೆಗೆ ಕೊಂಡುಹೋಗದಂತೆ ಪೊಲೀಸರಿಗೆ ತಡೆಯೊಡ್ಡಿದ ಘಟನೆಯೂ ಇಲ್ಲಿ ನಡೆದಿದೆ.

In Depth Report | ದೆಹಲಿ ಕೆಂಪುಕೋಟೆಯಲ್ಲಿ ರೈತಧ್ವಜ, ಟ್ರ್ಯಾಕ್ಟರ್ ಪರೇಡ್ ಈವರೆಗೆ ಏನೆಲ್ಲಾ ನಡೆಯಿತು?