Mamata Banerjee ಚುನಾವಣಾ ಟೆನ್ಷನ್​ ಮರೆತು ನೃತ್ಯ ಮಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಅಲಿಪುರ್ದುರ್​ನಲ್ಲಿ ನಿನ್ನೆ ಸಾಮೂಹಿಕ ವಿವಾಹ ಆಯೋಜಿಸಲಾಗಿತ್ತು. ಅಲ್ಲಿ ವಾದ್ಯಗೋಷ್ಠಿಗಳೊಂದಿಗೆ ಬುಡಕಟ್ಟು ಜನಾಂಗದವರ ನೃತ್ಯವನ್ನೂ ಆಯೋಜಿಸಿದ್ದರು.

Mamata Banerjee ಚುನಾವಣಾ ಟೆನ್ಷನ್​ ಮರೆತು ನೃತ್ಯ ಮಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ನೃತ್ಯ ಮಾಡುತ್ತಿರುವ ಮಮತಾ ಬ್ಯಾನರ್ಜಿ
Edited By:

Updated on: Feb 03, 2021 | 7:05 PM

ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದೆ. ಆದರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಂತೂ ಸದ್ಯ ರಿಲ್ಯಾಕ್ಸ್ ಮೂಡ್​​ನಲ್ಲಿ ಇದ್ದಂತೆ ಕಾಣುತ್ತಿದೆ. ಮೊನ್ನೆ ಕೇಂದ್ರ ಸರ್ಕಾರ ಬಜೆಟ್ ಮಂಡನೆ ಮಾಡುತ್ತಿದ್ದಂತೆ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಮಮತಾ ಬ್ಯಾನರ್ಜಿ ನಿನ್ನೆ ಸಾಮೂಹಿಕ ವಿವಾಹ ಸಮಾರಂಭದಲ್ಲಿ ನೃತ್ಯ ಮಾಡಿದ್ದಾರೆ.

ಪಶ್ಚಿಮ ಬಂಗಾಳದ ಅಲಿಪುರ್ದುರ್​ ಜಿಲ್ಲೆಯ ಫಲಕತಾ ಎಂಬಲ್ಲಿ ನಿನ್ನೆ ಸಾಮೂಹಿಕ ವಿವಾಹ ಆಯೋಜಿಸಲಾಗಿತ್ತು. ಅಲ್ಲಿ ವಾದ್ಯಗೋಷ್ಠಿಗಳೊಂದಿಗೆ ಬುಡಕಟ್ಟು ಜನಾಂಗದವರ ನೃತ್ಯವನ್ನೂ ಆಯೋಜಿಸಿದ್ದರು. ಈ ವೇಳೆ ಮಮತಾ ಬ್ಯಾನರ್ಜಿ ಬುಡಕಟ್ಟು ಮಹಿಳೆಯರ ಕೈಹಿಡಿದು ಹೆಜ್ಜೆಹಾಕಿದ್ದಾರೆ. ಒಂದು ಗುಂಪಿನೊಂದಿಗೆ ಡ್ಯಾನ್ಸ್ ಮಾಡಿ, ಅಲ್ಲಿಂದ ಇನ್ನೊಂದು ಗುಂಪಿನತ್ತ ಸಾಗಿ ಫುಲ್ ಖುಷಿಯಿಂದ ನೃತ್ಯ ಮಾಡಿದ್ದಾರೆ. ಕಳೆದ ವರ್ಷವೂ ಸಾಮೂಹಿಕ ವಿವಾಹದ ವೇಳೆ ಮಮತಾ ಬ್ಯಾನರ್ಜಿ ನೃತ್ಯ ಮಾಡಿದ್ದರು.

ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್​-ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಸದ್ಯ ಮಮತಾ ಬ್ಯಾನರ್ಜಿ ಕೂಡ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈ ಮಧ್ಯೆ  ಟಿಎಂಸಿಯ ಹಲವು ಮುಖಂಡರು ಪಕ್ಷ ತೊರೆದು ಬಿಜೆಪಿ ಸೇರುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿಯೇ ಅಚ್ಚರಿ ಎನ್ನಿಸುವಷ್ಟು ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿ, ಈ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು, ಪಶ್ಚಿಮ ಬಂಗಾಳವನ್ನೂ ತೆಕ್ಕೆಗೆ ತೆಗೆದುಕೊಂಡು ಇತಿಹಾಸ ಸೃಷ್ಟಿಸುವ ಹುಮ್ಮಸ್ಸಿನಲ್ಲಿದೆ. ಒಟ್ಟಿನಲ್ಲಿ ದೀದೀಗೆ ಹಲವು ಟೆನ್ಷನ್​ಗಳಿದ್ದರೂ, ಅದನ್ನೆಲ್ಲ ಮರೆತು ಖುಷಿಯಾಗಿ ಡ್ಯಾನ್ಸ್​ ಮಾಡಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆ ಹೊತ್ತಿಗೆ ಮಮತಾ ಬ್ಯಾನರ್ಜಿ ಒಬ್ಬಂಟಿಯಾಗುತ್ತಾರೆ..: ಗೃಹ ಸಚಿವ ಅಮಿತ್​ ಶಾ

ಪಶ್ಚಿಮ ಬಂಗಾಳ ಅಸೆಂಬ್ಲಿ ಚುನಾವಣೆ ಕಾಲೇ.. ಕವಿ ರವೀಂದ್ರನಾಥ್​ ಟ್ಯಾಗೂರ್​​ರನ್ನು ಸ್ಮರಿಸಿದ ವಿತ್ತ ಸಚಿವೆ ನಿರ್ಮಲಾ!