
ಕದನ ವಿರಾಮ ಘೋಷಿಸಿದ್ದರೂ ಕೂಡ ಅಮೃತಸರದಲ್ಲಿ ಸೈರನ್ ಕೇಳುತ್ತಿದೆ. ರೆಡ್ ಅಲರ್ಟ್ ಇದ್ದು ಎಲ್ಲರಿಗೂ ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿದೆ.
ಭಾರತ ಪಾಕಿಸ್ತಾನ ಕದನ ವಿರಾಮ: ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮದ ನಂತರ, ಗಡಿಯಲ್ಲಿ ಮಾತ್ರವಲ್ಲದೆ ಕಣಿವೆಯಲ್ಲೂ ಪರಿಸ್ಥಿತಿ ಸಾಮಾನ್ಯವಾಗಲು ಪ್ರಾರಂಭಿಸಿದೆ. ನಿನ್ನೆ ರಾತ್ರಿ ಪೂಂಚ್‌ನಲ್ಲಿ ಯಾವುದೇ ಡ್ರೋನ್ ದಾಳಿ, ಗುಂಡು ಹಾರಾಟ ಅಥವಾ ಶೆಲ್ ದಾಳಿ ಕಂಡುಬಂದಿಲ್ಲ.
ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೆ ವಿದೇಶಾಂಗ ಸಚಿವ ಜೈಶಂಕರ್ ಅವರು ಟ್ವೀಟ್ ಮಾಡಿ, ತಕ್ಷಣದಿಂದ ಭಾರತ ಮತ್ತು ಪಾಕಿಸ್ತಾನ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವ ಬಗ್ಗೆ ಒಪ್ಪಂದ ಮಾಡಿಕೊಂಡಿವೆ ಎಂದು ಹೇಳಿದ್ದಾರೆ.
ಕಾಶ್ಮೀರ ವಿಭಾಗದ ಕುಪ್ವಾರದಲ್ಲಿ ಗಡಿಯುದ್ದಕ್ಕೂ ಶನಿವಾರ ಬೆಳಗ್ಗೆ ಪಾಕಿಸ್ತಾನ ಭಾರೀ ಶೆಲ್ ದಾಳಿ ಆರಂಭಿಸಿದೆ.
Live: ಪೂಂಚ್‌ನಲ್ಲಿ ಶಾಲೆಗಳನ್ನು ಗುರಿಯಾಗಿಸಿ ಪಾಕ್ ಸೇನೆ ದಾಳಿ ನಡೆಸಿತ್ತು. ಪೂಂಚ್‌ನಲ್ಲಿ ಪಾಕ್ ಸೇನೆ ದಾಳಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಬಲಿಯಾಗಿದ್ದಾರೆ. ಇದಕ್ಕೆ ಭಾರತವು ಪಾಕ್‌ನ 4 ಸ್ಥಳಗಳ ಮೇಲೆ ದಾಳಿ ನಡೆಸಿ ಪ್ರತೀಕಾರ ತೀರಿಸಿಕೊಂಡಿದೆ. ಪಾಕಿಸ್ತಾನದ ಸೇನೆಯ ಕ್ರಮ ಹೇಡಿತನದ್ದು. ಭಾರತ ಸಂಯಮದಿಂದ ವರ್ತಿಸಿದೆ, ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಿದೆ. ಭಾರತದ ವಾಯುನೆಲೆಯನ್ನು ಗುರಿಯಾಗಿಸಲು ಪಾಕ್ ಪ್ರಯತ್ನಿಸಿದೆ ಎಂದು ಹೇಳಿದರು.
ದೆಹಲಿಯಲ್ಲಿ ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಮ್ ಮಾತನಾಡಿ, ನಿನ್ನೆ ರಾತ್ರಿ ಭಾರತದ ಹಲವು ನಗರಗಳ ಮೇಲೆ ಡ್ರೋನ್ ದಾಳಿಗೆ ಯತ್ನ ನಡೆದಿತ್ತು. ಡ್ರೋನ್ ದಾಳಿ ನಡೆಸಿಲ್ಲ ಎಂದು ಎಂದಿನಂತೆ ಪಾಕಿಸ್ತಾನ ಸುಳ್ಳು ಹೇಳಿದೆ. ಡ್ರೋನ್ ದಾಳಿ ವೇಳೆ ನಾಗರಿಕ ವಿಮಾನಗಳ ಹಾರಾಟ ಸ್ಥಗಿತಗೊಳಿಸಿರಲಿಲ್ಲ ಲಾಹೋರ್, ಕರಾಚಿಯಲ್ಲಿ ವಿಮಾನಗಳ ಹಾರಾಟ ಎಂದಿನಂತೆ ಇತ್ತು. ಭಾರತದ ಪ್ರತೀಕಾರದ ದಾಳಿಯಲ್ಲಿ ಪಾಕ್ ಸಾಕಷ್ಟು ನಷ್ಟ ಅನುಭವಿಸಿದೆ ಎಂದು ತಿಳಿಸಿದರು.
📡LIVE Now📡
Press Briefing by @MEAIndia on #OperationSindoor
Watch on #PIB‘s 📺
➡️Facebook: https://t.co/ykJcYlNrjj
➡️YouTube: https://t.co/RNDiVfoDIwhttps://t.co/Qtld62D3OT— PIB India (@PIB_India) May 9, 2025
ಸುದ್ದಿಗೋಷ್ಠಿಯಲ್ಲಿ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮಾತನಾಡಿ, ಬತಿಂಡಾ ಸೇನಾನೆಲೆ ಗುರಿಯಾಗಿಸಿ ನಿನ್ನೆ ಪಾಕ್ ಸೇನೆ ದಾಳಿ ಯತ್ನ ನಡೆಸಿದ್ದು, ಏರ್ ಡಿಫೆನ್ಸ್ ಸಿಸ್ಟಮ್ ಬಗ್ಗೆ ಟೆಸ್ಟ್ ಮಾಡಲು ನಿನ್ನೆ ದಾಳಿ ನಡೆಸಿದೆ. ಟರ್ಕಿ ನಿರ್ಮಿತ ಡ್ರೋನ್‌ಗಳಿಂದ ನಿನ್ನೆ ಪಾಕ್ ಸೇನೆ ದಾಳಿ ನಡೆಸಿದೆ. ಆದ್ರೆ, ಅದನ್ನು ವಿಫಲಗೊಳಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.
ನಿನ್ನೆ(ಮೇ 08) ರಾತ್ರಿ ಭಾರತದ ಹಲವು ನಗರಗಳ ಮೇಲೆ ಪಾಕಿಸ್ತಾನ ಸೇನೆ ಡ್ರೋನ್ ದಾಳಿಗೆ ಯತ್ನಿಸಿತ್ತು. ಆದ್ರೆ, ಪಾಕ್‌ನ ಡ್ರೋನ್ ದಾಳಿ ಯತ್ನ ವಿಫಲಗೊಳಿಸಿದ್ದೇವೆ. ಬಳಿಕ ಲಾಹೋರ್ ಸೇರಿ ಹಲವು ನಗರಗಳ ಮೇಲೆ ಭಾರತ ಡ್ರೋನ್ ದಾಳಿ ನಡೆಸಿದ್ದೇವೆ ಎಂದು ವಿಂಗ್ ಕಮಾಂಡರ್ ಸೋಫಿಯಾ ಖುರೇಷಿ ಮಾಹಿತಿ ನೀಡಿದರು.
ಸಿಎಂ ಒಮರ್ ಒಬ್ದುಲ್ಲಾ ಪಾಕ್ ದಾಳಿಯ ಸಂತ್ರಸ್ತರ ಮಕ್ಕಳೊಂದಿಗೆ ಕ್ರಿಕೆಟ್ ಆಟವಾಡಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.
#WATCH | Jammu & Kashmir CM Omar Abdullah plays cricket with a young boy at the camp set up for locals affected by Pakistan shelling in Samba pic.twitter.com/L3QuvAFonT
— ANI (@ANI) May 9, 2025
ಎಲ್ಲಾ ಆರೋಗ್ಯ ರಕ್ಷಣಾ ಸಿಬ್ಬಂದಿಗಳು ತಮ್ಮ ರಜೆ ರದ್ದುಗೊಳಿಸಿ ಕೆಲಸಕ್ಕೆ ಮರಳಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಸಭೆಯಲ್ಲಿ ತಿಳಿಸಿದ್ದಾರೆ. ಭಾರತ-ಪಾಕಿಸ್ತಾನ ಗಡಿಯ ಬಳಿ ಇರುವ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ
ಇಂದು ಎಲ್ಲಾ ಪ್ರಮುಖ ಸಚಿವಾಲಯಗಳ ಸಭೆಗಳು ನಡೆಯುತ್ತಿವೆ. ರಕ್ಷಣಾ, ಗೃಹ, ಹಣಕಾಸು ಮತ್ತು ಆರೋಗ್ಯ ಸಚಿವಾಲಯಗಳ ಸಭೆಗಳು ನಡೆಯುತ್ತಿವೆ. ರಕ್ಷಣಾ ಸಚಿವರು, ಗೃಹ ಸಚಿವರು, ಹಣಕಾಸು ಸಚಿವರು ಮತ್ತು ಆರೋಗ್ಯ ಸಚಿವರು ಪ್ರತ್ಯೇಕ ಸಭೆಗಳನ್ನು ನಡೆಸಿದ್ದಾರೆ.
ಪಠಾಣ್‌ಕೋಟ್‌ನ ಕರೋಲಿ ಗ್ರಾಮದ ಬಳಿ ಡ್ರೋನ್ ಪತ್ತೆಯಾಗಿದೆ. ಸೇನೆಯು ಆತನನ್ನು ವಶಕ್ಕೆ ತೆಗೆದುಕೊಂಡಿದೆ. ಇಡೀ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಪೂಂಚ್‌ನಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಭಾರತ ಹಾಗೂ ಪಾಕ್ ನಡುವೆ ಯುದ್ಧ ಭೀತಿ ಇರುವುದರಿಂದ 2025ನೇ ಸಾಲಿನ ಐಪಿಎಲ್ನ ಅರ್ಧಕ್ಕೆ ನಿಲ್ಲಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿ ಆಗಿದೆ.
ಪಾಕಿಸ್ತಾನ ಹಾರಿಸಿದ ಹಲವು ಕ್ಷಿಪಣಿಗಳಲ್ಲಿ ಒಂದು ಹೋಶಿಯಾರ್‌ಪುರದ ಮುಕೇರಿಯನ್ ಕ್ಷೇತ್ರದ ಬಹ್ ಫಟ್ಟಾ ಗ್ರಾಮದ ಹೊಲಗಳಲ್ಲಿ ಪತ್ತೆಯಾಗಿ ಆತಂಕ ಸೃಷ್ಟಿಸಿದೆ. ಪಾಕಿಸ್ತಾನವು ದಾಸುಹಾ ಪ್ರದೇಶದಲ್ಲಿ ಹಲವು ಬಾರಿ ಕ್ಷಿಪಣಿ ದಾಳಿ ನಡೆಸಿದೆ.
ರಾತ್ರಿಯನ್ನು ಒಂದು ಕೋಣೆಯಲ್ಲಿ ಕುಳಿತು ಕಳೆದೆ ಎಂದು ಜಮ್ಮು ಕಾಶ್ಮೀರದ ಮೇಲೆ ಪಾಕಿಸ್ತಾನ ನಡೆಸಿದ ದಾಳಿ ಕುರಿತು ವ್ಯಕ್ತಿಯೊಬ್ಬರು ಮಾತನಾಡಿದ್ದಾರೆ.
#WATCH | Houses in a village along the LoC in Jammu & Kashmir are severely damaged after shelling by Pakistan last night pic.twitter.com/lAegKDL4I2
— ANI (@ANI) May 9, 2025
ಆಕಾಶ್ ರಕ್ಷಣಾ ಕ್ಷಿಪಣಿ ಪಾಕಿಸ್ತಾನದ ದಾಳಿಗಳನ್ನು ವಿಫಲಗೊಳಿಸಿತು. ಪಾಕಿಸ್ತಾನ ಗಡಿಯಲ್ಲಿ ಭಾರತೀಯ ಸೇನೆ ಮತ್ತು ವಾಯುಪಡೆ ಎರಡೂ ಕ್ಷಿಪಣಿ ವ್ಯವಸ್ಥೆಗಳನ್ನು ಹೊಂದಿವೆ.
ಸಾಂಬಾದಲ್ಲಿ 7 ಒಳನುಸುಳುಕೋರರನ್ನು ಕೊಂದ ಭಾರತ, ಪಾಕ್ ಪೋಸ್ಟ್ಗೂ ಹಾನಿ
ನವದೆಹಲಿ, ಮೇ 09:ಭಾರತ((India) ಹಾಗೂ ಪಾಕಿಸ್ತಾನ(Pakistan)ದ ನಡುವೆ ಉದ್ವಿಗ್ನತೆ ಮತ್ತಷ್ಟು ಹೆಚ್ಚಿದೆ. ಭಾರತವು ಆಪರೇಷನ್ ಸಿಂಧೂರ್(Operation Sindoor) ಅಡಿಯಲ್ಲಿ ಪಾಕಿಸ್ತಾನದ ಮೇಲೆ ದಾಳಿ ನಡೆಸುತ್ತಿದೆ. ಪಾಕಿಸ್ತಾನವೂ ಕೂಡ ಪ್ರತಿ ದಾಳಿ ನಡೆಸಿದ್ದರೂ ಎಲ್ಲವೂ ವಿಫಲಗೊಂಡಿದೆ. ಸಧ್ಯಕ್ಕೆ ಪಾಕಿಸ್ತಾನ ಹಾಗೂ ಭಾರತದ ನಡುವೆ ಯುದ್ಧ ಸ್ಥಿತಿ ನಿರ್ಮಾಣವಾಗಿದೆ.
ಏಪ್ರಿಲ್ 22ರಂದು ಉಗ್ರರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಅಮಾಯಕರ ಮೇಲೆ ದಾಳಿ ನಡೆಸಿ 26 ಮಂದಿಯನ್ನು ಹತ್ಯೆಗೈದಿದ್ದರು. ಇದಕ್ಕೆ ಪ್ರತಿಯಾಗಿ ಭಾರತ ಆಪರೇಷನ್ ಸಿಂಧೂರ್ ಅಡಿಯಲ್ಲಿ ಪಾಕಿಸ್ತಾನದ 9 ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿ 100 ಉಗ್ರರನ್ನು ಹತ್ಯೆ ಮಾಡಿತ್ತು. ಇದಾದ ಬಳಿಕ ಪಾಕಿಸ್ತಾನವು ಭಾರತದ ಮೇಲೆ ಪ್ರತಿ ದಾಳಿ ಶುರು ಮಾಡಿತ್ತು, ಗಡಿಗಳ ಉದ್ದಕ್ಕೂ ಗುಂಡಿನ ದಾಳಿ ನಡೆಸಿದ್ದು, ಅನೇಕ ನಾಗರಿಕರನ್ನು ಹತ್ಯೆ ಮಾಡಿತ್ತು, ಹೀಗಾಗಿ ಕೋಪಗೊಂಡ ಭಾರತ ಮತ್ತೆ ಪಾಕ್ ವಿರುದ್ಧ ದಾಳಿಗೆ ನಿಂತಿದೆ.
ಭಾರತದ ಪ್ರತೀಕಾರದ ಕ್ರಮದಿಂದಾಗಿ ಪಾಕಿಸ್ತಾನ ದಲ್ಲಿ ಭೀತಿ ಉಂಟಾಗಿದೆ. ಅದರ ಹಲವು ನಗರಗಳಲ್ಲಿ ಅವ್ಯವಸ್ಥೆಯ ವಾತಾವರಣವಿದೆ. ಸೇನಾ ಶಿಬಿರಗಳಿಂದ ಜನರನ್ನು ಸ್ಥಳಾಂತರಿಸುವ ಕೆಲಸವೂ ನಡೆಯುತ್ತಿದೆ. ವಾಸ್ತವವಾಗಿ, ಪಾಕಿಸ್ತಾನದ ದಾಳಿಯನ್ನು ವಿಫಲಗೊಳಿಸಿದ ನಂತರ, ಭಾರತವು ಲಾಹೋರ್, ಇಸ್ಲಾಮಾಬಾದ್, ಕರಾಚಿ, ಸಿಯಾಲ್‌ಕೋಟ್, ಬಹವಾಲ್ಪುರ್ ಮತ್ತು ಪೇಶಾವರ್ ಸೇರಿದಂತೆ ಪಾಕಿಸ್ತಾನದ ಹಲವು ನಗರಗಳ ಮೇಲೆ ಪ್ರತೀಕಾರ ತೀರಿಸಿಕೊಂಡಿದೆ. ಸ್ಥಳೀಯ ಆಕಾಶ್ ರಕ್ಷಣಾ ಕ್ಷಿಪಣಿ ಪಾಕಿಸ್ತಾನದ ದಾಳಿಗಳನ್ನು ವಿಫಲಗೊಳಿಸಿತು.
ಪಾಕಿಸ್ತಾನ ಗಡಿಯಲ್ಲಿ ಭಾರತೀಯ ಸೇನೆ ಮತ್ತು ವಾಯುಪಡೆ ಎರಡೂ ಕ್ಷಿಪಣಿ ವ್ಯವಸ್ಥೆಗಳನ್ನು ಹೊಂದಿವೆ. ಆಕಾಶ್ ಒಂದು ನೆಲದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ ವಾಯು ರಕ್ಷಣಾ ವ್ಯವಸ್ಥೆಯಾಗಿದೆ. ಪಾಕಿಸ್ತಾನದ ವಿಮಾನ ನಿಲ್ದಾಣಗಳಲ್ಲಿ ಅವ್ಯವಸ್ಥೆಯ ಸ್ಥಿತಿ ಇದೆ. ಕರಾಚಿ, ಲಾಹೋರ್ ಮತ್ತು ಇಸ್ಲಾಮಾಬಾದ್ ಸೇರಿದಂತೆ ದೇಶಾದ್ಯಂತದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಸಾಕಷ್ಟು ಅಡಚಣೆ ಉಂಟಾಗಿದೆ. ಇಂದು ವಿವಿಧ ವಿಮಾನ ನಿಲ್ದಾಣಗಳಿಂದ ಒಟ್ಟು 149 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಇಸ್ಲಾಮಾಬಾದ್‌ನಲ್ಲಿ 42, ಲಾಹೋರ್‌ನಲ್ಲಿ 36 ಮತ್ತು ಕರಾಚಿಯಲ್ಲಿ 34 ವಿಮಾನಗಳ ಹಾರಾಟ ರದ್ದುಗೊಂಡಿದೆ. ಭಾರತ-ಪಾಕ್ ಉದ್ವಿಗ್ನತೆಯ ಕ್ಷಣ ಕ್ಷಣದ ಮಾಹಿತಿಗಳು ಇಲ್ಲಿ ಲಭ್ಯವಾಗಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:48 am, Fri, 9 May 25