ಜನವರಿ 24 ರಿಂದ ದೆಹಲಿ ಸೇರಿದಂತೆ ಉತ್ತರ ಭಾರತದಾದ್ಯಂತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪರ್ವತಗಳಲ್ಲಿ ಹಿಮಪಾತವಾಗಬಹುದು ಎಂದು ಹೇಳಲಾಗಿದೆ.ಪಶ್ಚಿಮ ಹಿಮಾಲಯದಲ್ಲಿ ಶೀತ ಹವಾಮಾನವನ್ನು ಹವಾಮಾನ ಇಲಾಖೆ ನಿರೀಕ್ಷಿಸುತ್ತಿದೆ. ಮೋಡಕವಿದ ವಾತಾವರಣವಿರಲಿದ್ದು, ಲಘು ಮಳೆಯಾಗಬಹುದು ಎಂದು ಹೇಳಲಾಗಿದೆ. ಜಮ್ಮು ಮತ್ತು ಕಾಶ್ಮೀರ, ಹಿಮಾಚಲಪ್ರದೇಶ ಮತ್ತು ಉತ್ತರಾಖಂಡದಲ್ಲಿ ಭಾರಿ ಮಲೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ವಿಜ್ಞಾನಿ ಸೋಮ ಸೇನ್ ರಾಯ್ ತಿಳಿಸಿದ್ದಾರೆ.
ಚಂಬಾ, ಕಂಗ್ರಾ, ಮಂಡಿ, ಕುಲು, ಶಿಮ್ಲಾ, ಲಾಹೌಲ್-ಸ್ಪಿತಿ ಮತ್ತು ಕಿನ್ನೌರ್ ಜಿಲ್ಲೆಗಳಲ್ಲಿ ಭಾರಿ ಮಳೆ ಮತ್ತು ಹಿಮಪಾತವಾಗುವ ನಿರೀಕ್ಷೆ ಇದೆ.
ಜನವರಿ 25ರವರೆಗೆ ಬೆಟ್ಟ ಪ್ರದೇಶಗಳಲ್ಲಿ ಲಘುವಾಗಿ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ. ಮನಾಲಿಯಲ್ಲಿ 12 ಸೆಂ.ಮೀ, ಗೊಂಡ್ಲಾದಲ್ಲಿ 11 ಸೆಂ.ಮೀ, ಡಾಲ್ಹೌಸಿಯಲ್ಲಿ 8 ಸೆಂ.ಮೀ, ಕಲ್ಪಾದಲ್ಲಿ 7 ಸೆಂ.ಮೀ, ತಿಸ್ಸಾ, ಪೂಹ್ ಹಾಗೂ ಹಂಸಾದಲ್ಲಿ ತಲಾ ಐದು ಸೆಂ.ಮೀ ಹಿಮಪಾತವಾಗಿದೆ.
ಹಿಮಪಾತದಿಂದಾಗಿ ಹಿಮಾಚಲದಲ್ಲಿ ಕನಿಷ್ಠ 328 ರಸ್ತೆಗಳನ್ನು ಮುಚ್ಚಲಾಗಿದ್ದು, ಲಾಹೌಲ್-ಸ್ಪಿತಿ ಜಿಲ್ಲೆಯಲ್ಲಿ 182, ಕಲುವಿನಲ್ಲಿ 55, ಶಿಮ್ಲಾದಲ್ಲಿ 32, ಕಿನ್ನೌರ್ನಲ್ಲಿ 29, ಮಂಡಿಯಲ್ಲಿ 17, ಚಂಬಾ ಮತ್ತು ಕಾಂಗ್ರಾ ಜಿಲ್ಲೆಗಳಲ್ಲಿ 11 ಸೇರಿದಂತೆ ಎರಡು ರಸ್ತೆಗಳನ್ನು ಒಳಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು ಓದಿ: Cold Wave: ಉತ್ತರ ಭಾರತದಲ್ಲಿ ತೀವ್ರಗೊಂಡ ಶೀತ ಮಾರುತ; ದಟ್ಟ ಮಂಜಿನಿಂದಾಗಿ ವಿಮಾನ ಸಂಚಾರ ಅಸ್ತವ್ಯಸ್ತ
ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕವು ಇನ್ನೂ ಕಳಪೆಯಾಗಿಯೇ ಉಳಿದಿದೆ, ಮುಂದಿನ ಕೆಲವು ದಿನಗಳವರೆಗೆ ರಾಷ್ಟ್ರ ರಾಜಧಾನಿಯಲ್ಲಿ ಮಂಜು ಕವಿದ ವಾತಾವರಣ ಇರಲಿದೆ.
23 ರಂದು ಪಂಜಾಬ್, ಹರ್ಯಾಣ ಮತ್ತು ಚಂಡೀಗಢ ಮತ್ತು ಉತ್ತರ ಪ್ರದೇಶದಲ್ಲಿ ಲಘುವಾಗಿ ಮಳೆಯಾಗುವ ಸಾಧ್ಯತೆಯಿದೆ ಮತ್ತು ನಂತರ 24-27 ರ ಅವಧಿಯಲ್ಲಿ ದೆಹಲಿಯಲ್ಲಿ ಮೇಲೆ ಗುಡುಗು ಸಹಿತ ಚದುರಿದ ಮಳೆಯಾಗಲಿದೆ ಎಂದು ಹೇಳಲಾಗಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 13 ಮತ್ತು 08 ಡಿಗ್ರಿ ಸೆಲ್ಸಿಯಸ್ ಇರಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ