AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cold Wave Alert: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಶೀತಮಾರುತ ಬೀಸುವ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

Karnataka weather: ಶೀತಮಾರುತಗಳ ಪ್ರಭಾವದಿಂದ ಬೆಂಗಳೂರಿನಲ್ಲಿಯೂ ಉಷ್ಣಾಂಶ ತೀವ್ರವಾಗಿ ಕುಸಿದಿದೆ.

Cold Wave Alert: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಶೀತಮಾರುತ ಬೀಸುವ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
ಪ್ರಾತಿನಿಧಿಕ ಚಿತ್ರImage Credit source: PTI
TV9 Web
| Edited By: |

Updated on:Jan 11, 2023 | 6:56 PM

Share

ಬೆಂಗಳೂರು: ಉತ್ತರ ಭಾರತದಲ್ಲಿ ವ್ಯಾಪಕವಾಗಿ ಬೀಸುತ್ತಿರುವ ಶೀತಗಾಳಿಯ (Cold Wave) ಪ್ರಭಾವವು ಕರ್ನಾಟಕಕ್ಕೂ ವಿಸ್ತರಿಸುವ ಸಾಧ್ಯತೆಯಿದೆ. ಈ ಋತುಮಾನದ ಚಳಿಗಾಲದಲ್ಲಿ ಇದೇ ಮೊದಲ ಬಾರಿಗೆ ಹವಾಮಾನ ಇಲಾಖೆಯು (The India Meteorological Department – IMD) ಶಿತಮಾರುತದ ಎಚ್ಚರಿಕೆ ನೀಡಿದೆ. ರಾಜ್ಯದಲ್ಲಿ ಮೈಕೊರೆಯುವ ಚಳಿ ಜನರನ್ನು ಆತಂಕಕ್ಕೀಡು ಮಾಡಿದೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಂಗಳೂರಿನಲ್ಲಿ ಬುಧವಾರ ಕನಿಷ್ಠ ತಾಪಮಾನ 13 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಇದು ಬೆಂಗಳೂರಿನಲ್ಲಿ ಅತ್ಯಂತ ಕನಿಷ್ಠ ತಾಪಮಾನ ದಾಖಲಾದ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಉತ್ತರ ಒಳನಾಡಿನಲ್ಲಿ ಶಿತಗಾಳಿ ಬೀಸುವ ಸಾಧ್ಯತೆಯಿದ್ದು, ಉಷ್ಣಾಂಶವು 5.5 ಡಿಗ್ರಿ ಸೆಲ್ಷಿಯಸ್​ಗೆ ಕುಸಿಯಬಹುದು ಎಂದು ತಿಳಿಸಿದೆ. ಯಾವುದೇ ಎರಡು ಹವಾಮಾನ ಮಾಪಕ ಕೇಂದ್ರಗಳಲ್ಲಿ ಉಷ್ಣಾಂಶವು 4.5ರಿಂದ 6.5 ಡಿಗ್ರಿ ಸೆಲ್ಷಿಯಸ್​ನಷ್ಟು ಕುಸಿಯುವುದು ದೃಢಪಟ್ಟಾಗ ಅಥವಾ ಉಷ್ಣಾಂಶವು ಕುಸಿದಾಗ ಶೀತ ಮಾರುತದ ಎಚ್ಚರಿಕೆಯನ್ನು ನೀಡಲಾಗುವುದು ಎಂದು ಹವಾಮಾನ ಇಲಾಖೆಯ ವಿಜ್ಞಾನಿಗಳು ಹೇಳಿದ್ದಾರೆ.

‘ಪ್ರಸ್ತುತ ಬೀದರ್​ನಲ್ಲಿ ಉಷ್ಣಾಂಶವು 5.5 ಡಿಗ್ರಿ ಸೆಲ್ಷಿಯಸ್​ಗೆ ಕುಸಿದಿದೆ. ಬಾಗಲಕೋಟೆ ಮತ್ತು ವಿಜಯಪುರದಲ್ಲಿ 6 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗಿದೆ. ಈ ಜಿಲ್ಲೆಗಳ ವಾಡಿಕೆಯ ಕನಿಷ್ಠ ತಾಪಮಾನಕ್ಕಿಂತಲೂ ಈಗ ದಾಖಲಾಗಿರುವ ತಾಪಮಾನವು 5 ಡಿಗ್ರಿಗಳಷ್ಟು ಕಡಿಮೆಯಿದೆ. ಹೀಗಾಗಿಯೇ ಉತ್ತರ ಒಳನಾಡಿನ ಎಲ್ಲ ಜಿಲ್ಲೆಗಳಿಗೂ ಶೀತಮಾರುತದ ಮುನ್ನೆಚ್ಚರಿಕೆ ನೀಡಿದ್ದೇವೆ ಎಂಬ ಹವಾಮಾನ ಇಲಾಖೆಯ ವಿಜ್ಞಾನಿ ರಮೇಶ್ ಅವರ ಹೇಳಿಕೆಯನ್ನು ‘ಟೈಮ್ಸ್​ ಆಫ್ ಇಂಡಿಯಾ’ ವರದಿ ಮಾಡಿದೆ. ಇದೇ ಪರಿಸ್ಥಿತಿ ಮುಂದುವರಿದರೆ ‘ತೀವ್ರ ಶೀತಮಾರುತ’ದ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಲಿದೆ.

ಬೀದರ್ ಕನಿಷ್ಠ ತಾಪಮಾನ

ಬೀದರ್ ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದ ಕನಿಷ್ಠ ಉಷ್ಣಾಂಶವು 12 ಡಿಗ್ರಿ ದಾಖಲಾಗುತ್ತಿತ್ತು. ಭಾನುವಾರ ಏಕಾಏಕಿ 5.5 ಡಿಗ್ರಿ ಸೆಲ್ಷಿಯಸ್​ಗೆ ಕುಸಿದಿದ್ದು, 2015ರ ನಂತರ ದಾಖಲಾದ ಅತ್ಯಂತ ಕನಿಷ್ಠ ತಾಪಮಾನ ಎಂದು ದಾಖಲೆ ಬರೆಯಿತು. 2022ರಲ್ಲಿ 5.7, 2021ರಲ್ಲಿ 8.6 ಡಿಗ್ರಿ ಸೆಲ್ಷಿಯಸ್ ಕನಿಷ್ಠ ಉಷ್ಠಾಂಶ ದಾಖಲಾಗಿತ್ತು. 2015ರ ಜನವರಿ 10ರಂದು ದಾಖಲಾಗಿದ್ದ 5.8 ಡಿಗ್ರಿ ಸೆಲ್ಷಿಯಸ್ ಇತ್ತೀಚಿನ ದಿನಗಳಲ್ಲಿ ದಾಖಲಾದ ಅತ್ಯಂತ ಕನಿಷ್ಠ ತಾಪಮಾನ ಎನಿಸಿತ್ತು.

‘ಬೀದರ್ ಜಿಲ್ಲೆಯಲ್ಲಿ ಜನವರಿ 25ರವರೆಗೂ ಕನಿಷ್ಠ ಉಷ್ಠಾಂಶ 12ರಿಂದ 14 ಡಿಗ್ರಿ ಆಸುಪಾಸಿನಲ್ಲಿಯೇ ಇರಬಹುದು. ಚಳಿ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ’ ಎಂದು ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ವಿಭಾಗದ ತಾಂತ್ರಿಕ ಅಧಿಕಾರಿ ಬಸವರಾಜ ಬಿರಾದಾರ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಚಳಿಯೋ ಚಳಿ

ಶೀತಮಾರುತಗಳ ಪ್ರಭಾವದಿಂದ ಬೆಂಗಳೂರಿನಲ್ಲಿಯೂ ಉಷ್ಣಾಂಶ ತೀವ್ರವಾಗಿ ಕುಸಿದಿದೆ. ಮಂಗಳವಾರ (ಡಿ 10) ಕನಿಷ್ಠ ತಾಪಮಾನವು 12 ಡಿಗ್ರಿ ಸೆಲ್ಷಿಯಸ್​ ದಾಖಲಾಗಿದೆ. ಇತ್ತೀಚಿನ ದಿನಗಳಲ್ಲಿ ಇದು ದಾಖಲೆ ಪ್ರಮಾಣದ ಕುಸಿತ ಎನಿಸಿದೆ.

ಬೆಚ್ಚಗಿನ ಉಡುಪು ಧರಿಸಿ

ಶೀತಮಾರುತದ ವಾತಾವರಣವಿದ್ದಾಗ ಮನೆಯಲ್ಲಿಯೇ ಇರುವುದು ಕ್ಷೇಮ. ಹೊರಗಿನ ಸಂಚಾರವನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ವೈದ್ಯರು ಎಚ್ಚರಿಸಿದ್ದಾರೆ. ಮೂರ್ನಾಲ್ಕು ಪದರಗಳಿರುವಂತೆ ಉಡುಗೆಗಳನ್ನು ಧರಿಸಬೇಕು ಎಂದು ಸಲಹೆ ಮಾಡಿದ್ದಾರೆ.

‘ಬಹುಕಾಲ ಶೀತಮಾರುತದ ವಾತಾವರಣದಲ್ಲಿದ್ದರೆ ಮೂಗಿನಿಂದ ರಕ್ತ ಸುರಿಯುವುದು, ಅಸ್ತಮಾ ಉಲ್ಬಣಗೊಳ್ಳುವುದು, ಜ್ವರದ ಲಕ್ಷಣಗಳು ಹಾಗೂ ಚರ್ಮದ ತುರಿಕೆಯಂಥ ಸಮಸ್ಯೆ ಕಾಣಿಸಿಕೊಳ್ಳಬಹುದು. ಕಿವಿ ಮುಚ್ಚುವಂತೆ ಟೋಪಿ ಧರಿಸುವುದು, ಮನೆಗಳಲ್ಲಿಯೂ ಪಾದರಕ್ಷೆ-ಕಾಲುಚೀಲ ಬಳಸುವುದು ಒಳ್ಳೆಯದು. ಬಿಸಿನೀರು, ಬಿಸಿ ಪಾನೀಯಗಳ ಸೇವನೆ ಒಳ್ಳೆಯದು’ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Heart Attack: ಚಳಿಗಾಲದ ಶೀತದಿಂದ ಹೃದಯಾಘಾತವಾಗಬಹುದು? ಇದರ ಆರಂಭಿಕ ಲಕ್ಷಣ ಇಲ್ಲಿದೆ

ಹವಾಮಾನಕ್ಕೆ ಸಂಬಂಧಿಸಿದ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:09 am, Tue, 10 January 23

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?