Coronavirus cases in India: ದೇಶದಲ್ಲಿ ಹೊಸ ಕೊವಿಡ್ ಪ್ರಕರಣ 2 ಲಕ್ಷಕ್ಕಿಂತ ಕಡಿಮೆ, 3511 ಮಂದಿ ಸಾವು

|

Updated on: May 25, 2021 | 10:39 AM

Covid 19: ಇದೇ ಅವಧಿಯಲ್ಲಿ 3,511 ಸಾವುಗಳು ದಾಖಲಾಗಿದ್ದು ದೇಶದಲ್ಲಿ ಈವರೆಗೆ ಸಾವಿಗೀಡಾದವರ ಸಂಖ್ಯೆ ಇದು 3,07,231 ಕ್ಕೆ ತಲುಪಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,33,934 ರಷ್ಟು ಕಡಿಮೆಯಾಗಿದ್ದು ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2,58,67,782 ಕ್ಕೆ ತಲುಪಿದೆ.

Coronavirus cases in India: ದೇಶದಲ್ಲಿ ಹೊಸ ಕೊವಿಡ್ ಪ್ರಕರಣ 2 ಲಕ್ಷಕ್ಕಿಂತ ಕಡಿಮೆ, 3511 ಮಂದಿ ಸಾವು
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1,96,427 ಹೊಸ ಕೊವಿಡ್ ಪ್ರಕರಣ ದಾಖಲಿಸಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 2,69,48,874 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇದೇ ಅವಧಿಯಲ್ಲಿ 3,511 ಸಾವುಗಳು ದಾಖಲಾಗಿದ್ದು ದೇಶದಲ್ಲಿ ಈವರೆಗೆ ಸಾವಿಗೀಡಾದವರ ಸಂಖ್ಯೆ ಇದು 3,07,231 ಕ್ಕೆ ತಲುಪಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 133,934 ರಷ್ಟು ಕಡಿಮೆಯಾಗಿದ್ದು ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2,58,67,782 ಕ್ಕೆ ತಲುಪಿದೆ.

ಕಳೆದ ಹಲವಾರು ದಿನಗಳಿಂದ ಸಾವಿನ ಸಂಖ್ಯೆ 4,000 ಸಮೀಪದಲ್ಲಿದ್ದು ,ಇದು ತಜ್ಞರು ಮತ್ತು ಸರ್ಕಾರಿ ಅಧಿಕಾರಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.  ನಿನ್ನೆ ಪರೀಕ್ಷಿಸಿದ 20,58,112 ಮಾದರಿಗಳನ್ನು ಒಳಗೊಂಡಂತೆ ಮೇ 24 ರವರೆಗೆ ಒಟ್ಟು 33,25,94,176 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.

ಆದಾಗ್ಯೂ, ಮಹಾರಾಷ್ಟ್ರ, ಉತ್ತರ ಪ್ರದೇಶ ದೆಹಲಿಯಂತಹ ಹೆಚ್ಚಿನ ಪ್ರಕರಣಗಳಿರುವ ರಾಜ್ಯಗಳಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆ ಕ್ಷೀಣಿಸುತ್ತಿದೆ. ಇದು ಕೊವಿಡ್ -19 ರ ಎರಡನೇ ಅಲೆಯ ತೀವ್ರತೆಯು ಭಾರತದಲ್ಲಿ ಕ್ಷೀಣಿಸುತ್ತಿದೆ ಎಂಬುದನ್ನು ತೋರಿಸುತ್ತದೆ.


ಕೊರೊನಾವೈರಸ್ ಸೋಂಕು ಹರಡದಂತೆ ತಡೆಯಲು ಹಲವಾರು ರಾಜ್ಯಗಳು ಲಾಕ್​ಡೌನ್ ಹೇರಿವೆ. ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಕರ್ನಾಟಕ, ತೆಲಂಗಾಣ, ಉತ್ತರ ಪ್ರದೇಶ, ನಾಗಾಲ್ಯಾಂಡ್, ಮಿಜೋರಾಂ, ಮೇಘಾಲಯ, ಅರುಣಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಗೋವಾ ಮತ್ತೆ ಕರ್ಫ್ಯೂ ತರಹದ ನಿರ್ಬಂಧಗಳನ್ನು ವಿಧಿಸಿದ ನಂತರ ಸಕ್ರಿಯ ಪ್ರಕರಣಗಳು ಇಳಿಮುಖವಾಗಿವೆ.


ಮಹಾರಾಷ್ಟ್ರದಲ್ಲಿ ಸೋಮವಾರ 22,122 ಹೊಸ ಕೊವಿಡ್ ಪ್ರಕರಣಗಳು ಮತ್ತು 592 ಸಾವು ವರದಿ ಆಗಿದೆ. ಸೋಂಕಿನ ಪ್ರಮಾಣವು 56.02 ಲಕ್ಷಕ್ಕೂ ಹೆಚ್ಚು ಮತ್ತು ಸಾವಿನ ಸಂಖ್ಯೆ 89,212 ಕ್ಕೆ ತಲುಪಿದೆ.

ಮಹಾರಾಷ್ಟ್ರದ ನಂತರ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಉತ್ತರ ಪ್ರದೇಶಗಳಲ್ಲಿ ಅತಿ ಹೆಚ್ಚು ಸೋಂಕುಗಳು ಕಂಡುಬಂದಿವೆ. ಎರಡನೇ ಅಲೆಯಲ್ಲಿ ಕೊರೊನಾವೈರಸ್‌ನಿಂದ ಹೆಚ್ಚು ಹಾನಿಗೊಳಗಾದ ಎರಡನೇ ರಾಜ್ಯ ಕರ್ನಾಟಕದಲ್ಲಿ 25,311 ಹೊಸ ಪ್ರಕರಣಗಳು ಕಂಡುಬಂದವು. ರಾಜಧಾನಿ ಬೆಂಗಳೂರಿನಲ್ಲಿ 5,701 ಸೋಂಕುಗಳನ್ನು ದಾಖಲಾಗಿದೆ.

ತಮಿಳುನಾಡಿನಲ್ಲಿ ದೈನಂದಿನ ಕೋವಿಡ್ ಪ್ರಕರಣಗಳಲ್ಲಿ ಸ್ವಲ್ಪ ಕುಸಿತ ಕಂಡಿದೆ. ಇಲ್ಲಿ 34,867 ಹೊಸ ಪ್ರಕರಣಗಳು ಮತ್ತು 404 ಸಾವುಗಳು ಸಂಭವಿಸಿವೆ. ರಾಜಧಾನಿ ಚೆನ್ನೈನಲ್ಲಿ 4,985 ಹೊಸ ಸೋಂಕುಗಳು ವರದಿ ಆಗಿದೆ.

ಕೇರಳದಲ್ಲಿ ಸೋಮವಾರ 17,821 ಹೊಸ ಕೊವಿಡ್ ಪ್ರಕರಣಗಳು ದಾಖಲಾಗಿವೆ. 196 ಕೊವಿಡ್ ರೋಗಿಗಳು ಸಾವುಗಳು ಸಾವಿಗೀಡಾಗಿದ್ದು ಇದು ಒಂದು ದಿನದಲ್ಲಿ ಸಂಭವಿಸಿದ ಅತೀ ಹೆಚ್ಚು ಮರಣ ಆಗಿದೆ
ದೆಹಲಿಯಲ್ಲಿ 1,550 ಹೊಸ ಪ್ರಕರಣಗಳು ದಾಖಲಾಗಿದ್ದು, 207 ಸಾವುಗಳು ವರದಿ ಆಗಿದೆ.

ಇದನ್ನೂ  ಓದಿ: 20 ದಿನದಲ್ಲಿ 700ಕ್ಕೂ ಹೆಚ್ಚು ಸಾವು.. ಗ್ರಾಮೀಣ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿದೆ ವಿವಿಧ ಕಾಯಿಲೆಗಳು

ನನಗೆ ಕೊರೊನಾ ಸೋಂಕು ತಗುಲಿಲ್ಲ, ಏಕೆಂದರೆ ನಾನು ನಿತ್ಯ ಗೋಮೂತ್ರ ಸೇವಿಸುತ್ತೇನೆ: ಬಿಜೆಪಿ ಸಂಸದೆ ಪ್ರಗ್ಯಾಸಿಂಗ್ ಠಾಕೂರ್

Published On - 10:26 am, Tue, 25 May 21