ದೇಶದಲ್ಲಿ ಒಂದೇ ದಿನ 1,220 ಹೊಸ ಕೋವಿಡ್ ಪ್ರಕರಣ ಪತ್ತೆ; ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಮುಖ

|

Updated on: May 13, 2023 | 10:48 AM

Covid cases in India:ದೆಹಲಿ ಮತ್ತು ರಾಜಸ್ಥಾನದಲ್ಲಿ ತಲಾ ಎರಡು ಸಾವುಗಳು ದಾಖಲಾಗಿದ್ದರೆ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ ಮತ್ತು ಮಿಜೋರಾಂನಲ್ಲಿ ತಲಾ ಒಂದು ಸಾವು ಸಂಭವಿಸಿದೆ. ಸಾವಿನ ಪ್ರಮಾಣವು 1.19 ಪ್ರತಿಶತದಷ್ಟಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ದೇಶದಲ್ಲಿ ಒಂದೇ ದಿನ 1,220 ಹೊಸ ಕೋವಿಡ್ ಪ್ರಕರಣ ಪತ್ತೆ; ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಮುಖ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಭಾರತದಲ್ಲಿ ಶನಿವಾರ (ಮೇ 13) ಕಳೆದ 24 ಗಂಟೆಗಳಲ್ಲಿ 1,220 ಕೋವಿಡ್ -19 (Covid 19) ಪ್ರಕರಣಗಳು ದಾಖಲಾಗಿವೆ. ಅದೇ ವೇಳೆ ಸೋಂಕುಗಳು ಈಗ ವೇಗವಾಗಿ ಕಡಿಮೆಯಾಗುತ್ತಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ(Union Ministry of Health and Family Welfare) ತಿಳಿಸಿದೆ.ಸಕ್ರಿಯ ಪ್ರಕರಣಗಳ ಸಂಖ್ಯೆ 16,498 ಕ್ಕೆ ಗಣನೀಯವಾಗಿ ಕಡಿಮೆಯಾಗಿದೆ. ಅದೇ ವೆಳೆ ಚೇತರಿಕೆ ದರ ಶೇ 98.97 ಆಗಿದೆ ಎಂದು ಸಚಿವಾಲಯದ ಅಂಕಿಅಂಶಗಳು ಹೇಳಿವೆ.

ಮಾಹಿತಿಯ ಪ್ರಕಾರ, ಹರ್ಯಾಣದಲ್ಲಿ ಮೂರು ಸಾವು ಸಂಭವಿಸಿದ್ದು ಒಂದು ದಿನದಲ್ಲಿ 11 ಹೊಸ ಸಾವುಗಳು ದಾಖಲಾಗುವುದರೊಂದಿಗೆ ಸಾವಿನ ಸಂಖ್ಯೆ 5,31,767 ಕ್ಕೆ ತಲುಪಿದೆ.


ದೆಹಲಿ ಮತ್ತು ರಾಜಸ್ಥಾನದಲ್ಲಿ ತಲಾ ಎರಡು ಸಾವುಗಳು ದಾಖಲಾಗಿದ್ದರೆ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ ಮತ್ತು ಮಿಜೋರಾಂನಲ್ಲಿ ತಲಾ ಒಂದು ಸಾವು ಸಂಭವಿಸಿದೆ. ಸಾವಿನ ಪ್ರಮಾಣವು 1.19 ಪ್ರತಿಶತದಷ್ಟಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಸಚಿವಾಲಯದ ಅಂಕಿಅಂಶಗಳ ಪ್ರಕಾರ ದೈನಂದಿನ ಸಕಾರಾತ್ಮಕತೆಯ ದರ ಶೇ 3.52 ಪ್ರತಿಶತ ಮತ್ತು ಸಾಪ್ತಾಹಿಕ ಸಕಾರಾತ್ಮಕತೆಯ ದರ ಶೇಕಡಾ 5.42 ಆಗಿದೆ.ರೋಗದಿಂದ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 44,431,137 ತಲುಪಿದೆ. ದೇಶದಾದ್ಯಂತ ಲಸಿಕೆ ನೀಡಿಕೆ ಅಭಿಯಾನದಡಿಯಲ್ಲಿಯಲ್ಲಿ ಇದುವರೆಗೆ ಕನಿಷ್ಠ 2,20,66,89,993 ಡೋಸ್ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. ಒಂದೇ ದಿನದಲ್ಲಿ 1,636 ಚುಚ್ಚುಮದ್ದುಗಳನ್ನು ನೀಡಲಾಗಿದೆ ಎಂದು ಸಚಿವಾಲಯದ ಡೇಟಾ ಹೇಳುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ