ರಾಜಸ್ಥಾನದಲ್ಲಿ ಜನಸಂಘರ್ಷ್ ಯಾತ್ರೆ: ನಾವು ಕರ್ನಾಟಕದ ಕಾಂಗ್ರೆಸ್ ಪಕ್ಷದಿಂದ ಕಲಿಯಬೇಕು ಎಂದ ಸಚಿನ್ ಪೈಲಟ್
Jan Sangharsh Yatra: ನನಗೆ ಪ್ರತೀಕಾರದ ಭಾವನೆ ಇಲ್ಲ ಅಥವಾ ನಾನು ಯಾವುದೇ ವ್ಯಕ್ತಿಯ ವಿರುದ್ಧ ಇಲ್ಲ.ಈ ಯಾತ್ರೆಯು ಭ್ರಷ್ಟಾಚಾರದ ವಿರುದ್ಧ ಮತ್ತು ಯುವಕರ ಹಿತಾಸಕ್ತಿಗಾಗಿ ಮಾಡುತ್ತಿದ್ದೇನೆ. ಆರು ತಿಂಗಳಲ್ಲಿ ನಾವು ಮತದಾನ ಮಾಡಲು ಹೋದಾಗ, ನಾವು ಕಾರ್ಯನಿರ್ವಹಿಸಲು ವಿಫಲವಾದರೆ ನಾವು ಜನರಿಗೆ ಏನೆಂದು ಉತ್ತರಿಸುತ್ತೇವೆ ಎಂದು ಪೈಲಟ್ ಕೇಳಿದ್ದಾರೆ.
ವಸುಂಧರಾ ರಾಜೇ ನೇತೃತ್ವದ ಹಿಂದಿನ ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರದ ವಿಷಯವನ್ನು ಪ್ರಸ್ತಾಪಿಸಲು ‘ಜನಸಂಘರ್ಷ್ ಯಾತ್ರೆ’ (Jan Sangharsh Yatra) ಆರಂಭಿಸಿದ ಒಂದು ದಿನದ ನಂತರ ರಾಜಸ್ಥಾನದ (Rajasthan) ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ (Sachin Pilot), ಕರ್ನಾಟಕ ವಿಧಾನಸಭಾ ಚುನಾವಣೆಯಿಂದ ತಮ್ಮ ಪಕ್ಷ ಕಲಿಯಬೇಕು ಹೇಳಿದ್ದಾರೆ. ಬಸವರಾಜ ಬೊಮ್ಮಾಯಿ (Basavaraj Bommai) ಸರ್ಕಾರದ ವಿರುದ್ಧ ಭ್ರಷ್ಟಾಚಾರದ ವಿಚಾರಗಳನ್ನು ಎತ್ತಿದ್ದರಿಂದ ಕಾಂಗ್ರೆಸ್ ಅಲ್ಲಿ ಗೆಲ್ಲಲಿದೆ ಎಂದು ಸಚಿನ್ ಪೈಲಟ್ ಹೇಳಿದ್ದಾರೆ.
ರಾಜೇ ಸರ್ಕಾರದ ಅವಧಿಯಲ್ಲಿ ಆಪಾದಿತ ಭ್ರಷ್ಟಾಚಾರದ ವಿಷಯವನ್ನು ತನಿಖೆಗೊಳಪಡಿಸಲು ಅಶೋಕ್ ಗೆಹ್ಲೋಟ್ ನೇತೃತ್ವದ ತಮ್ಮದೇ ಕಾಂಗ್ರೆಸ್ ಸರ್ಕಾರವನ್ನು ಪೈಲಟ್ ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ. ನಾವು ಕರ್ನಾಟಕದಲ್ಲಿ ಸರ್ಕಾರ ರಚಿಸಲಿದ್ದೇವೆ. ನಮ್ಮ ಗೆಲುವಿನ ಹಿಂದಿನ ಕಾರಣವೆಂದರೆ ನಾವು 40 ಪರ್ಸೆಂಟ್ ಕಮಿಷನ್ ಸರ್ಕಾರದ ಆರೋಪಗಳನ್ನು ಮಾಡಿದ್ದೇವೆ. ಜನರು ನಮ್ಮನ್ನು ನಂಬಿದ್ದಾರೆ ಮತ್ತು ಅದಕ್ಕಾಗಿಯೇ ಕಾಂಗ್ರೆಸ್ ನಾಳೆ ಬಹುಮತವನ್ನು ಪಡೆಯುತ್ತದೆ. ನಾವು ರಾಜಸ್ಥಾನದಲ್ಲೂ ಅದನ್ನೇ ಹೇಳಿದ್ದೇವೆ. ಆದರೆ ನಮ್ಮ ಭರವಸೆಯ ಮೇಲೆ ಕಾರ್ಯನಿರ್ವಹಿಸಲು ನಾವು ವಿಫಲರಾದರೆ, ನಾವು ಸಾರ್ವಜನಿಕರ ವಿಶ್ವಾಸವನ್ನು ಹೇಗೆ ಗೆಲ್ಲುತ್ತೇವೆ? ಎಂದು ಪೈಲಟ್ ಕೇಳಿದ್ದಾರೆ.
ಅಜ್ಮೀರ್‌ನಿಂದ ಜೈಪುರದವರೆಗಿನ 125-ಕಿಮೀ ಉದ್ದದ ಪಾದಯಾತ್ರೆಯ ಎರಡನೇ ದಿನವಾದ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರವರು.
ತಮ್ಮ ಕಾರ್ಯಗಳನ್ನು ಸಮರ್ಥಿಸಿಕೊಂಡ ಪೈಲಟ್ ಈ ಯಾತ್ರೆ ಯುವಕರ ಹಿತಾಸಕ್ತಿಯಾಗಿದೆ ಮತ್ತು ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಕಾರ್ಯನಿರ್ವಹಿಸಲು ಸರ್ಕಾರದ ಮೇಲೆ ಒತ್ತಡ ಹೇರಲು ಮಾತ್ರ ಉದ್ದೇಶಿಸಲಾಗಿದೆ ಎಂದು ಹೇಳಿದರು.
#WATCH | Congress leader Sachin Pilot says, “We are winning in Karnataka because we levelled allegations of “40% commission Govt” against CM Bommai and people trusted us. We had done the same in Rajasthan. But if we don’t work on it within 4.5 years, how will we make ourselves… https://t.co/BSwMBaaWWF pic.twitter.com/ujuPQ3csEp
— ANI MP/CG/Rajasthan (@ANI_MP_CG_RJ) May 12, 2023
ನನಗೆ ಪ್ರತೀಕಾರದ ಭಾವನೆ ಇಲ್ಲ ಅಥವಾ ನಾನು ಯಾವುದೇ ವ್ಯಕ್ತಿಯ ವಿರುದ್ಧ ಇಲ್ಲ.ಈ ಯಾತ್ರೆಯು ಭ್ರಷ್ಟಾಚಾರದ ವಿರುದ್ಧ ಮತ್ತು ಯುವಕರ ಹಿತಾಸಕ್ತಿಗಾಗಿ ಮಾಡುತ್ತಿದ್ದೇನೆ. ಆರು ತಿಂಗಳಲ್ಲಿ ನಾವು ಮತದಾನ ಮಾಡಲು ಹೋದಾಗ, ನಾವು ಕಾರ್ಯನಿರ್ವಹಿಸಲು ವಿಫಲವಾದರೆ ನಾವು ಜನರಿಗೆ ಏನೆಂದು ಉತ್ತರಿಸುತ್ತೇವೆ ಎಂದು ಪೈಲಟ್ ಕೇಳಿದ್ದಾರೆ.
ಇದನ್ನೂ ಓದಿ: ಸಾಂವಿಧಾನಿಕ ಪೀಠದ ಆದೇಶವನ್ನು ಕೇಂದ್ರ ಸರ್ಕಾರ ಧಿಕ್ಕರಿಸುತ್ತಿದೆ ಎಂದು ಆರೋಪಿಸಿ ಸುಪ್ರೀಂ ಮೆಟ್ಟಿಲೇರಿದ ಅರವಿಂದ ಕೇಜ್ರಿವಾಲ್
ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಬಿಜೆಪಿ ಆಡಳಿತದಲ್ಲಿ ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ಪೇಪರ್ ಸೋರಿಕೆ ಪ್ರಕರಣಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ನಾನು ಗೆಹ್ಲೋಟ್‌ಗೆ ಪತ್ರ ಬರೆದಿದ್ದು, ಯಾವುದೇ ಕ್ರಮ ತೆಗೆದುಕೊಳ್ಳುವುದನ್ನು ನೋಡಿಲ್ಲ ಎಂದು ಪೈಲಟ್ ಹೇಳಿದ್ದಾರೆ. ರಾಜ್ಯ ಕಾಂಗ್ರೆಸ್ ಘಟಕದಲ್ಲಿನ ಆಂತರಿಕ ಕಚ್ಚಾಟದ ಇತ್ತೀಚಿನ ಬೆಳವಣಿಗೆಯಾಗಿದೆ ಸಚಿನ್ ಪೈಲಟ್ ಮುನ್ನಡೆಸುತ್ತಿರುವ ಈ ಯಾತ್ರೆ.
2018 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ರಚಿಸಿದಾಗಿನಿಂದ ಪೈಲಟ್ ಮತ್ತು ಗೆಹ್ಲೋಟ್ ಅಧಿಕಾರದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಪೈಲಟ್ ಅವರು 2020 ರಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಹುದ್ದೆಗಳನ್ನು ಕಳೆದುಕೊಂಡಾಗ ಸಚಿನ ಪೈಲಟ್ ಗೆಹ್ಲೋಟ್ ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:57 pm, Fri, 12 May 23