ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,81,386 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ದೇಶದಲ್ಲೀಗ 24,965,463 ಕೊವಿಡ್ ರೋಗಿಗಳು ಇದ್ದಾರೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರ 25 ದಿನಗಳಲ್ಲಿ ಇದೇ ಮೊದಲ ಬಾರಿ ಸೋಂಕು ಪ್ರಕರಣಗಳ ಸಂಖ್ಯೆ 3 ಲಕ್ಷಕ್ಕಿಂತ ಕಡಿಮೆ ವರದಿಯಾಗಿದೆ. ಆದಾಗ್ಯೂ, ಒಂದೇ ದಿನ 4,106 ಮಂದಿಮೃತಪಟ್ಟಿದ್ದು ದೇಶದಲ್ಲಿ ಕೊವಿಡ್ನಿಂದ ಮೃತಪಟ್ಟವರ ಸಂಖ್ಯೆ 274,390ಕ್ಕೇರಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,618,458ರಿಂದ 3,516,997ಕ್ಕೆ ಇಳಿದಿದೆ.
ಉತ್ತರ ಪ್ರದೇಶದ ಸಾಂಕ್ರಾಮಿಕ ಪರಿಸ್ಥಿತಿ ಆತಂಕಕಾರಿ ಅಥವಾ ನಿಯಂತ್ರಣಾತೀತ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭಾನುವಾರ ಹೇಳಿದ್ದಾರೆ. ಕೊವಿಡ್ -19 ರ ಮೂರನೇ ಅಲೆಗೆ ಉತ್ತರ ಪ್ರದೇಶ ಸಹ ಸಿದ್ಧವಾಗಿದೆ ಎಂದಿದ್ದಾರೆ ಯೋಗಿ. ನಾವು ಏನನ್ನೂ ಮರೆಮಾಚುತ್ತಿಲ್ಲ. ಎಲ್ಲವೂ ಪಾರದರ್ಶಕವಾಗಿದೆ… ಪರೀಕ್ಷೆ, ಚೇತರಿಕೆ ಮತ್ತು ಸಾವಿನ ಪ್ರತಿಯೊಂದು ವಿವರವನ್ನು (ಸರ್ಕಾರದ ಕೋವಿಡ್) ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ ಎಂದು ನೋಯ್ಡಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಯೋಗಿ ಆದಿತ್ಯನಾಥ ಹೇಳಿದ್ದಾರೆ.
India reports 2,81,386 new #COVID19 cases, 3,78,741 discharges and 4,106 deaths in the last 24 hours, as per Union Health Ministry
Total cases: 2,49,65,463
Total discharges: 2,11,74,076
Death toll: 2,74,390
Active cases: 35,16,997Total vaccination: 18,29,26,460 pic.twitter.com/RJCDwbzyha
— ANI (@ANI) May 17, 2021
ಭಾನುವಾರ 15.5 ಲಕ್ಷಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಲಾಗಿದೆ: ಐಸಿಎಂಆರ್
ಭಾರತದಲ್ಲಿ ಭಾನುವಾರ ಕೊವಿಡ್ ಪರೀಕ್ಷೆಗಾಗಿ 15,73,515 ಮಾದರಿಗಳನ್ನು ಪರೀಕ್ಷಿಸಿದೆ. ಇಲ್ಲಿಯವರೆಗೆ, 31,64,23,658 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.
31,64,23,658 samples tested for #COVID19 up to 16th May 2021. Of these, 15,73,515 samples were tested yesterday: Indian Council of Medical Research (ICMR) pic.twitter.com/Bpfj24S5D9
— ANI (@ANI) May 17, 2021
ಕಳೆದ ಕೆಲವು ದಿನಗಳಿಂದ ಸಕ್ರಿಯ ಪ್ರಕರಣಗಳು ಕಡಿಮೆಯಾಗುತ್ತಿದ್ದರೂ, 10 ರಾಜ್ಯಗಳಲ್ಲಿ 74.69 ರಷ್ಟು ಪ್ರಕರಣಗಳು ವರದಿಆಗಿದೆ ಎಂದು ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ. ಕರ್ನಾಟಕ, ಮಹಾರಾಷ್ಟ್ರ, ಕೇರಳ, ರಾಜಸ್ಥಾನ, ತಮಿಳುನಾಡು, ಆಂಧ್ರಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ಛತ್ತೀಸಗಡದಲ್ಲಿ ಪ್ರಕರಣಗಳ ಸಂಖ್ಯೆ ಜಾಸ್ತಿ ಇದೆ.
ದೇಶದ ಪಾಸಿಟಿವಿಟಿ ದರವು ಮೇ 3 ರಂದು ದಾಖಲಾದ ಶೇಕಡಾ 24.47 ರಿಂದ ಶೇ 16.98 ಕ್ಕೆ ಇಳಿದಿದೆ ಎಂದು ಅದು ಹೇಳಿದೆ.
ಕೊವಿಡ್ -19 ಪರಿಸ್ಥಿತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ರಾಜಸ್ಥಾನ, ಛತ್ತೀಸಗಡ, ಉತ್ತರ ಪ್ರದೇಶ ಮತ್ತು ಪುದುಚೇರಿ ಮುಖ್ಯಮಂತ್ರಿಗಳೊಂದಿಗೆ ದೂರವಾಣಿ ಕರೆ ಮೂಲಕ ಚರ್ಚಿಸಿದ್ದಾರೆ.
Delhi: COVID19 patients at Sardar Patel Covid Care Centre, Radha Soami Beas, Chhatarpur participate in morning yoga and meditation sessions. It was followed by a round of wards by Stress Counsellors of ITBP. pic.twitter.com/TKFtGdHf5j
— ANI (@ANI) May 17, 2021
ಏತನ್ಮಧ್ಯೆ, ದೇಶಾದ್ಯಂತ ನೀಡಲಾಗುವ ಕೋವಿಡ್ -19 ಲಸಿಕೆ ಪ್ರಮಾಣವು ದೇಶಾದ್ಯಂತ ವ್ಯಾಕ್ಸಿನೇಷನ್ ಚಾಲನೆಯ 3 ನೇ ಹಂತದ ಅಡಿಯಲ್ಲಿ ಭಾನುವಾರ 18.29 ಕೋಟಿ ದಾಟಿದೆ. ಆರೋಗ್ಯ ಸಚಿವಾಲಯದ ವೆಬ್‌ಸೈಟ್‌ನಲ್ಲಿನ ಅಂಕಿ ಅಂಶದ ಪ್ರಕಾರ ಈವರೆಗೆ 18,29,26,460 ಡೋಸ್ ಲಸಿಕೆ ನೀಡಲಾಗಿದೆ.
ಇದನ್ನೂ ಓದಿ: ಕೊವಿಡ್ ಕರ್ತವ್ಯದಲ್ಲಿರುವ ಶಿಕ್ಷಕರಿಗೆ ಲಸಿಕೆ ನೀಡಿ; ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರಿಂದ ಸರ್ಕಾರಕ್ಕೆ ಮನವಿ
CBSE Class 12 Exam 2021: ಸಿಬಿಎಸ್ಇ ಹತ್ತರಂತೆ, ಕ್ಲಾಸ್ 12 ಪರೀಕ್ಷೆ ಸಹ ಕ್ಯಾನ್ಸಲ್? ಹಾಗಾದ್ರೆ ಮುಂದೇನು?
(India records 2.81 lakh new Covid-19 cases case count has fallen below the 3 lakh mark for the first time in 25 days)
Published On - 10:48 am, Mon, 17 May 21