ಜಮ್ಮು-ಕಾಶ್ಮೀರ ಜಲವಿದ್ಯುತ್ ಯೋಜನೆ; ಶಾಶ್ವತ ಮಧ್ಯಸ್ಥಿಕೆ ನ್ಯಾಯಾಲಯದ ತೀರ್ಪು ನಿರಾಕರಿಸಿದ ಭಾರತ

ಜಮ್ಮು ಮತ್ತು ಕಾಶ್ಮೀರದಲ್ಲಿನ ಎರಡು ಜಲವಿದ್ಯುತ್ ಯೋಜನೆಗಳ ಕುರಿತು ಹೇಗ್‌ನಲ್ಲಿರುವ ಶಾಶ್ವತ ಮಧ್ಯಸ್ಥಿಕೆ ನ್ಯಾಯಾಲಯದ ತೀರ್ಪನ್ನು ಪಾಕಿಸ್ತಾನ ಇಂದು ಸ್ವಾಗತಿಸಿದೆ. ಆದರೆ, ಭಾರತ ಅದನ್ನು ನಿರಾಕರಿಸಿದೆ ಹಾಗೂ ಆ ನ್ಯಾಯಾಲಯವನ್ನು ಅನಧಿಕೃತ ಎಂದು ಕರೆದಿದೆ. ಕಿಶನ್​ಗಂಗಾ ಮತ್ತು ರ್ಯಾಟಲ್ ಜಲವಿದ್ಯುತ್ ಯೋಜನೆಗಳ ಸಂಬಂಧ ನ್ಯಾಯಾಲಯದ ತೀರ್ಪನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.

ಜಮ್ಮು-ಕಾಶ್ಮೀರ ಜಲವಿದ್ಯುತ್ ಯೋಜನೆ; ಶಾಶ್ವತ ಮಧ್ಯಸ್ಥಿಕೆ ನ್ಯಾಯಾಲಯದ ತೀರ್ಪು ನಿರಾಕರಿಸಿದ ಭಾರತ
Hydroelectric Projects

Updated on: Jun 28, 2025 | 5:49 PM

ನವದೆಹಲಿ, ಜೂನ್ 28: ಜಮ್ಮು-ಕಾಶ್ಮೀರದಲ್ಲಿನ (Jammu and Kashmir) ಕಿಶನ್​ಗಂಗಾ ಮತ್ತು ರ್ಯಾಟಲ್ ಈ ಎರಡು ಜಲವಿದ್ಯುತ್ ಯೋಜನೆಗಳ ಕುರಿತು ಹೇಗ್‌ನಲ್ಲಿರುವ ಶಾಶ್ವತ ಮಧ್ಯಸ್ಥಿಕೆ ನ್ಯಾಯಾಲಯದ ತೀರ್ಪನ್ನು ಪಾಕಿಸ್ತಾನ (Pakistan) ಸ್ವಾಗತಿಸಿದೆ. ಆದರೆ, ಈ ತೀರ್ಪನ್ನು ಭಾರತ ತಿರಸ್ಕರಿಸಿದೆ. 1960ರಲ್ಲಿ ಸಿಂಧೂ ನದಿ ನೀರು ಹಂಚಿಕೆಯ ಮಧ್ಯಸ್ಥಿಕೆ ವಿಚಾರವಾಗಿ ಸ್ಥಾಪಿಸಿದ್ದ ನ್ಯಾಯಾಲಯವನ್ನು ಭಾರತ ಅನಧಿಕೃತ ಎನ್ನುವ ಮೂಲಕ ತನ್ನ ದಿಟ್ಟ ನಿಲುವು ತಿಳಿಸಿದೆ. ಸಿಂಧೂ ನದಿ ಹಂಚಿಕೆ ಒಪ್ಪಂದವನ್ನು ಉಲ್ಲಂಘಿಸಿ ಈ ಕೋರ್ಟ್ ಅನ್ನು ಸ್ಥಾಪಿಸಲಾಗಿತ್ತು ಎಂದು ಭಾರತ ಆರೋಪಿಸಿದೆ.

ಸಿಂಧೂ ಜಲ ಒಪ್ಪಂದಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಭಾರತದೊಂದಿಗೆ ಮಾತುಕತೆಗೆ ಸಿದ್ಧ ಎಂದು ಪಾಕಿಸ್ತಾನ ಹೇಳಿದೆ. ಆದರೆ, ಪಾಕಿಸ್ತಾನದೊಂದಿಗಿನ ವಿವಾದ ಪರಿಹಾರಕ್ಕಾಗಿ ಯಾವುದೇ ಚೌಕಟ್ಟನ್ನು ಗುರುತಿಸಿಲ್ಲ ಎಂದು ಭಾರತ ಶುಕ್ರವಾರ ಈ ತೀರ್ಪನ್ನು ಬಲವಾಗಿ ತಿರಸ್ಕರಿಸಿದೆ. ಭಾರತವೆಂದೂ ಈ ನ್ಯಾಯಾಲಯವನ್ನು ಅಧಿಕೃತ ಎಂದು ಎಂದಿಗೂ ಪರಿಗಣಿಸಿಲ್ಲ. ನಾವು ಈ ಕೋರ್ಟ್ ತೀರ್ಪನ್ನು ಎಂದಿಗೂ ಒಪ್ಪುವುದಿಲ್ಲ. ಜಮ್ಮು ಮತ್ತು ಕಾಶ್ಮೀರದ ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದಂತೆ ಈ ಕೋರ್ಟ್ ನೀಡಿರುವ ತೀರ್ಪನ್ನು ಅಮಾನ್ಯ ಎಂದು ಪರಿಗಣಿಸಲಾಗುವುದು. ಭಾರತ ಪ್ರತಿ ಸಲವೂ ಈ ನ್ಯಾಯಾಲಯದ ಎಲ್ಲ ತೀರ್ಪನ್ನೂ ನಿರಾಕರಿಸಿದೆ, ಈಗಲೂ ನಿರಾಕರಿಸುತ್ತದೆ ಎಂದು ವಿದೇಶಾಂಗ ಸಚಿವಾಲಯ ಹೇಳಿತ್ತು.

ಇದನ್ನೂ ಓದಿ: ಆಪರೇಷನ್ ಸಿಂಧೂರ್: ಭಾರತದಿಂದ ತಮ್ಮನ್ನು ಕಾಪಾಡುವಂತೆ ಸೌದಿ ರಾಜಕುಮಾರನಿಗೆ ಕರೆ ಮಾಡಿತ್ತು ಪಾಕ್ ಸರ್ಕಾರ

ಒಂದುವೇಳೆ ಭಾರತ ಮತ್ತು ಪಾಕಿಸ್ತಾನದ ನಡುವೆ ನದಿ ನೀರು ಹಂಚಿಕೆಯ ಬಗ್ಗೆ ಯಾವುದಾದರೂ ಪ್ರಕರಣ ದಾಖಲಾದರೆ ಅದನ್ನು ವಿಚಾರಣೆ ನಡೆಸುವ ಅಧಿಕಾರ ಮಾತ್ರ ಈ ನ್ಯಾಯಾಲಯಕ್ಕಿದೆ. ನದಿ ನೀರಿಗೆ ಸಂಬಂಧಿಸಿದ ಯೋಜನೆಗಳನ್ನು ನಿರ್ಧರಿಸುವ ಯಾವ ಅಧಿಕಾರವೂ ಈ ನ್ಯಾಯಾಲಯಕ್ಕಿಲ್ಲ. ಪಾಕಿಸ್ತಾನ ಭಯೋತ್ಪಾದನೆಯನ್ನು ನಿಲ್ಲಿಸುವವರೆಗೂ ಸಿಂಧೂ ಜಲ ಒಪ್ಪಂದವನ್ನು ರದ್ದುಪಡಿಸುವುದು ಖಚಿತ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ನ್ಯಾಯಾಲಯದ ತೀರ್ಪೇನು?:

ಏಪ್ರಿಲ್‌ನಲ್ಲಿ ಭಾರತವು ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದು, ಅದು ವಿವಾದದ ಬಗ್ಗೆ ತನ್ನ ಸಾಮರ್ಥ್ಯವನ್ನು ಮಿತಿಗೊಳಿಸುವುದಿಲ್ಲ ಮತ್ತು ಅದರ ತೀರ್ಪು ಪಕ್ಷಗಳ ಮೇಲೆ ಬದ್ಧವಾಗಿದೆ ಎಂದು ಮಧ್ಯಸ್ಥಿಕೆ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿದೆ. ಪಾಕಿಸ್ತಾನವು ಈ ತೀರ್ಪನ್ನು “ಪ್ರಮುಖ ಕಾನೂನು ಗೆಲುವು” ಎಂದು ಕರೆದಿದ್ದು, “ಭಾರತವು ಏಕಪಕ್ಷೀಯವಾಗಿ ಒಪ್ಪಂದವನ್ನು ಅಮಾನತುಗೊಳಿಸಲು ಅಥವಾ ಬದಿಗಿಡಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶವಿದು” ಎಂದು ಒತ್ತಿ ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 5:48 pm, Sat, 28 June 25

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us