Coronavirus India Update: ಕಳೆದ 24 ಗಂಟೆಗಳಲ್ಲಿ 1.68 ಲಕ್ಷ ಹೊಸ ಕೊವಿಡ್ ಪ್ರಕರಣ; ಸುಪ್ರೀಂಕೋರ್ಟ್​ನ ಶೇ 50ರಷ್ಟು ಸಿಬ್ಬಂದಿಗೆ ಸೋಂಕು

|

Updated on: Apr 12, 2021 | 10:20 AM

Covid 19 in India: ಕಳೆದ 24ಗಂಟೆಗಳಲ್ಲಿ ದೇಶದಲ್ಲಿ 1,68,912 ಹೊಸ ಕೊವಿಡ್ ಪ್ರಕರಣಗಳು ವರದಿಯಾಗಿದ್ದು 904 ಮಂದಿ ಸಾವಿಗೀಡಾಗಿದ್ದಾರೆ. 12,01,009 ರಷ್ಟು ಸಕ್ರಿಯ ಪ್ರಕರಣಗಳಿವೆ. 1,21,56,529ಮಂದಿ ಚೇತರಿಸಿಕೊಂಡಿದ್ದಾರೆ. ಒಟ್ಟು ಸಾವಿನ ಸಂಖ್ಯೆ 1,70,179ಕ್ಕೇರಿದ್ದು, ಸೋಂಕಿತರ ಸಂಖ್ಯೆ 1,35,27,717 ಆಗಿದೆ.

Coronavirus India Update: ಕಳೆದ 24 ಗಂಟೆಗಳಲ್ಲಿ 1.68 ಲಕ್ಷ ಹೊಸ ಕೊವಿಡ್ ಪ್ರಕರಣ; ಸುಪ್ರೀಂಕೋರ್ಟ್​ನ ಶೇ 50ರಷ್ಟು ಸಿಬ್ಬಂದಿಗೆ ಸೋಂಕು
ಮುಂಬೈನಲ್ಲಿ ಕೊರೊನಾ ಟೆಸ್ಟ್
Follow us on

ದೆಹಲಿ: ದೇಶದಾದ್ಯಂತ ಕೊರೊನಾವೈರಸ್ ಸೋಂಕು ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿದ್ದು ಸುಪ್ರೀಂಕೋರ್ಟ್​ನ ಶೇಕಡಾ 50 ಸಿಬ್ಬಂದಿಗಳಿಗೆ ಕೊವಿಡ್ ದೃಢಪಟ್ಟಿದೆ. ಕೋರ್ಟ್ ಕಲಾಪಗಳು ಇನ್ನು ಮುಂದೆ ಮನೆಯಿಂದಲೇ ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಯಲಿದೆ  ಎಂದು ಮೂಲಗಳು ತಿಳಿಸಿವೆ. ಕಳೆದ 24ಗಂಟೆಗಳಲ್ಲಿ ದೇಶದಲ್ಲಿ 1,68,912 ಹೊಸ ಕೊವಿಡ್ ಪ್ರಕರಣಗಳು ವರದಿಯಾಗಿದ್ದು 904 ಮಂದಿ ಸಾವಿಗೀಡಾಗಿದ್ದಾರೆ. 12,01,009 ರಷ್ಟು ಸಕ್ರಿಯ ಪ್ರಕರಣಗಳಿವೆ. 1,21,56,529ಮಂದಿ ಚೇತರಿಸಿಕೊಂಡಿದ್ದಾರೆ. ಒಟ್ಟು ಸಾವಿನ ಸಂಖ್ಯೆ 1,70,179ಕ್ಕೇರಿದ್ದು, ಸೋಂಕಿತರ ಸಂಖ್ಯೆ 1,35,27,717 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಭಾನುವಾರ ದೇಶದಲ್ಲಿ 1,52,879 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿತ್ತು.

ದೇಶದಾದ್ಯಂತ ಲಸಿಕೆ ನೀಡುವ ಅಭಿಯಾನ ಟೀಕಾ ಉತ್ಸವ  (ಲಸಿಕೆ ಉತ್ಸವ) ಎರಡನೇ  ದಿನವಾಗಿದೆ ಇದೆ.  ಏಪ್ರಿಲ್ 11 ರಾತ್ರಿ 8ಗಂಟೆಯವರೆಗಿನ ಅಂಕಿ ಅಂಶಗಳ ಪ್ರಕಾರ  10.43 ಕೋಟಿ ಲಸಿಕೆ ನೀಡಲಾಗಿದೆ.  ದೇಶದಾದ್ಯಂತ 9.14 ಕೋಟಿ ಮೊದಲ ಡೋಸ್ ಮತ್ತು 1.29  ಕೋಟಿ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.


ಕೊವಿಡ್ ನಿಯಂತ್ರಣ ಕ್ರಮ ಕೈಗೊಳ್ಳುವಲ್ಲಿ ಮೂರು ರಾಜ್ಯಗಳು ವಿಫಲ
ಪಂಜಾಬ್, ಮಹಾರಾಷ್ಟ್ರ ಮತ್ತು ಛತ್ತೀಸಗಡದಲ್ಲಿ ಕೊವಿಡ್ ರೋಗಿಗಳ ಸಂಖ್ಯೆ ಏರುತ್ತಲೇ ಇದ್ದು ಇಲ್ಲಿನ ಪರಿಸ್ಥಿತಿಯ ಬಗ್ಗೆ ಅಧ್ಯಯನ ಮಾಡಲು ಕೇಂದ್ರ ಸರ್ಕಾರ ತಜ್ಞರ ತಂಡವನ್ನು ಕಳುಹಿಸಿತ್ತು. ಈ ತಂಡವು ಮಹಾರಾಷ್ಟ್ರದ 30, ಛತ್ತೀಸಗಡದ 11 ಮತ್ತು ಪಂಜಾಬ್​ನ 9 ಜಿಲ್ಲೆಗಳಿಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದೆ. ತಂಡಗಳ ವರದಿ ಪ್ರಕಾರ ಈ ಪ್ರದೇಶಗಳಲ್ಲಿ ಆರೋಗ್ಯ ವ್ಯವಸ್ಥೆ ಸರಿಯಾಗಿಲ್ಲ, ಆರ್​ಟಿ -ಪಿಸಿಆರ್ ಪರೀಕ್ಷೆಗಳ ಸೌಕರ್ಯಗಳು ಇಲ್ಲ. ಆರೋಗ್ಯ ಕಾರ್ಯಕರ್ತರ ಕೊರತೆ ಇದೆ. ಒಂದು ಪ್ರದೇಶದಲ್ಲಿ ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆಯೂ ನಡೆದಿದೆ. ಈ ರಾಜ್ಯಗಳು ಕೊವಿಡ್ ನಿಯಂತ್ರಣಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಕೇಂದ್ರ ಸರ್ಕಾರ ನಿಯೋಜಿಸಿದ ತಜ್ಞರ ತಂಡ ಹೇಳಿದೆ.

ದೆಹಲಿಯ ಹೌಜ್ ಖಾಸ್ ಮೆಟ್ರೊ ನಿಲ್ದಾಣ ತಾತ್ಕಾಲಿಕ ಬಂದ್

ದೆಹಲಿಯ ಹೌಜ್ ಖಾಸ್ ಮೆಟ್ರೊ ನಿಲ್ದಾಣದಲ್ಲಿ ಸಾಮಾಜಿ ಅಂತರ ಕಾಪಾಡುವುದಕ್ಕೆ ಕಷ್ಟವಾಗಿರುವ ಕಾರಣ ಸೋಮವಾರ ಬೆಳಗ್ಗೆ ಈ ಸ್ಟೇಷನ್ ಗೆ ಪ್ರವೇಶವನ್ನು ತಾತ್ಕಾಲಿಕ ಬಂದ್ ಮಾಡಲಾಗಿದೆ. ಸ್ಟೇಷನ್ ನಿಂದ ಹೊರಹೋಗಲು ಅನುಮತಿ ಇದೆ.


ಮಥುರಾದಲ್ಲಿ ನೈಟ್ ಕರ್ಫ್ಯೂ
ಉತ್ತರ ಪ್ರದೇಶದ ಮಥುರಾದಲ್ಲಿ ಕೊವಿಡ್ ನಿಯಂತ್ರಣಕ್ಕಾಗಿ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ರಾತ್ರಿ 9 ಗಂಟೆಯಿಂದ 6 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಇರಲಿದೆ ಎಂದು ಜಿಲ್ಲಾ ಮೆಜಿಸ್ಟ್ರೇಟ್ ನವನೀತ್ ಸಿಂಗ್ ಚಹಾಲ್ ಭಾನುವಾರ ಹೇಳಿದ್ದಾರೆ.

ಏಪ್ರಿಲ್ 14ರ ನಂತರವೇ ಲಾಕ್​ಡೌನ್ ಬಗ್ಗೆ ನಿರ್ಧಾರ: ಮಹಾರಾಷ್ಟ್ರ ಆರೋಗ್ಯ ಸಚಿವ
ಏಪ್ರಿಲ್ 14ರ ವರೆಗೆ ಮಹಾರಾಷ್ಟ್ರದಲ್ಲಿ ಲಾಕ್​ಡೌನ್ ಇರುವುದಿಲ್ಲ. ರಾಜ್ಯದಲ್ಲಿ ಲಾಕ್​ಡೌನ್ ಘೋಷಿಸುವ ಬಗ್ಗೆ ಏಪ್ರಿಲ್ 14ರಂದು ನಡೆಯಲಿರುವ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ.

ಇದನ್ನೂ ಓದಿ: Covid-19 Karnataka Update: ಕರ್ನಾಟಕದಲ್ಲಿ ಇಂದು 10,250 ಮಂದಿಗೆ ಕೊರೊನಾ ಸೋಂಕು, 40 ಸಾವು

(India reports 1.68 lakh new Covid 19 cases in last 24 hours 904 dead as per Union health ministry data)

Published On - 10:16 am, Mon, 12 April 21