ಭಾರತದಲ್ಲಿ ಕೊರೊನಾ (Corona) ಪ್ರಕರಣಗಳಲ್ಲಿ ಮತ್ತಷ್ಟು ಏರಿಕೆಯಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 2,71,202 ಹೊಸ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ಪ್ರಸ್ತುತ 15,50,377ಕ್ಕೆ ತಲುಪಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿರುವ ಇತ್ತೀಚಿನ ಮಾಹಿತಿಗಳ ಪ್ರಕಾರ, ದೈನಂದಿನ ಪಾಸಿಟಿವಿಟಿ ದರವು ಪ್ರಸ್ತುತ ಶೇಕಡಾ 16.28 ರಷ್ಟಿದ್ದರೆ, ಕಳೆದ ಏಳು ದಿನಗಳ ಪಾಸಿಟಿವಿಟಿ ದರವು ಶೇ.13.69 ರಷ್ಟಿದೆ. ನಿನ್ನೆ ಅಂದರೆ ಶನಿವಾರಕ್ಕಿಂತ ಇಂದು ಪಾಸಿಟಿವಿಟಿ ದರವು (Positivity Rate) ತುಸು ಇಳಿಕೆಯಾಗಿದೆ. ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 7,743ಕ್ಕೆ ತಲುಪಿದೆ.
India reports 2,71,202 COVID cases (2,369 more than yesterday), 314 deaths, and 1,38,331 recoveries in the last 24 hours.
Active case: 15,50,377
Daily positivity rate: 16.28%)Confirmed cases of Omicron: 7,743 pic.twitter.com/NhnMY247oV
— ANI (@ANI) January 16, 2022
ಕಳೆದ 24 ಗಂಟೆಗಳ ಅವಧಿಯಲ್ಲಿ ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಒಟ್ಟು 314 ಜನರು ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 4,86,066 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 1,38,331 ರೋಗಿಗಳು ಸೋಂಕಿನಿಂದ ಗುಣಮುಖರಾಗಿದ್ದು, ಒಟ್ಟು ಚೇತರಿಸಿಕೊಂಡವರ ಸಂಖ್ಯೆ 3,50,85,721 ಕ್ಕೆ ತಲುಪಿದೆ.
ಸೋಂಕು ಪತ್ತೆಗೆ ಇದುವರೆಗೆ ಒಟ್ಟು 70,24,48,838 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಜನವರಿ 15 ರಂದು 16,65,404 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಸರ್ಕಾರ ಹೇಳಿದೆ. ಈ ನಡುವೆ ಕಳೆದ ವರ್ಷ ಸರ್ಕಾರ ಪ್ರಾರಂಭಿಸಿದ ರಾಷ್ಟ್ರವ್ಯಾಪಿ ಲಸಿಕಾ ಯೋಜನೆಯ ಭಾಗವಾಗಿ ಇದುವರೆಗೆ 156.76 ಕೋಟಿ ಡೋಸ್ ಲಸಿಕೆಗಳನ್ನು ನೀಡಲಾಗಿದೆ.
ಹರಿಯಾಣದಲ್ಲಿ ಲಸಿಕೆ ಪಡೆದರೆ ಮಾತ್ರ ಶಾಲೆಗೆ ಪ್ರವೇಶ:
ಹರಿಯಾಣದಲ್ಲಿ ಕಳೆದ ಹದಿನೈದು ದಿನಗಳಲ್ಲಿ ಕೊರೊನಾವೈರಸ್ ಪ್ರಕರಣಗಳು ಭಾರೀ ಹೆಚ್ಚಾಗಿರುವುದರಿಂದ ಪ್ರಸ್ತುತ ಹರಿಯಾಣದಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ಕೊವಿಡ್-19 ಲಸಿಕೆ ಹಾಕಿಸಿಕೊಳ್ಳದಿದ್ದರೆ 15ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಶಾಲೆಗಳು ಮತ್ತೆ ತೆರೆದಾಗ ಅವರಿಗೆ ಶಾಲೆಯೊಳಗೆ ಪ್ರವೇಶಿಸಲು ಅನುಮತಿ ನೀಡುವುದಿಲ್ಲ ಎಂದು ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಹೇಳಿದ್ದಾರೆ.
ತೆಲಂಗಾಣದಲ್ಲಿ ಜನವರಿ 30ರವರೆಗೆ ಶಾಲಾ ಕಾಲೇಜಿಗೆ ರಜೆ:
ತೆಲಂಗಾಣದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಎಲ್ಲಾ ಶಾಲಾ ಕಾಲೇಜುಗಳೊಗೆ ರಜೆ ನೀಡಲಾಗಿದೆ. ಜನವರಿ 30ರವರೆಗೆ ಶಾಲೆಗಳನ್ನು ಮುಚ್ಚುವಂತೆ ಆದೇಶ ನೀಡಲಾಗಿದೆ.
ಇದನ್ನೂ ಓದಿ:
ಕರ್ನಾಟಕದಲ್ಲಿ ವೀಕೆಂಡ್ ಕರ್ಫ್ಯೂಗೆ ಮಿಶ್ರ ಪ್ರತಿಕ್ರಿಯೆ; ಹಲವೆಡೆ ಮಾರುಕಟ್ಟೆ ಖಾಲಿ ಖಾಲಿ
ಬ್ರಿಟನ್: ಪ್ರಯಾಣಿಕರಿಗೆ ಕಡ್ಡಾಯ ಕೊವಿಡ್ ಟೆಸ್ಟ್ ನಿಯಮದಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ಸಂಪೂರ್ಣ ಮಾಹಿತಿ ಇಲ್ಲಿದೆ
Published On - 9:59 am, Sun, 16 January 22