ಕರ್ನಾಟಕದಲ್ಲಿ ವೀಕೆಂಡ್ ಕರ್ಫ್ಯೂಗೆ ಮಿಶ್ರ ಪ್ರತಿಕ್ರಿಯೆ; ಹಲವೆಡೆ ಮಾರುಕಟ್ಟೆ ಖಾಲಿ ಖಾಲಿ
ಬೆಂಗಳೂರಿನ ಹಲವು ನಗರಗಳಲ್ಲಿ ಬೆಳ್ಳಂಬೆಳಗೆ ಮಾಂಸ ಅಂಗಡಿ ಮುಂದೆ ಜನ ಕ್ಯೂ ನಿಂತಿದ್ದಾರೆ. ಕ್ಯೂನಲ್ಲಿ ನಿಂತು ಮಾಂಸ ಖರೀದಿ ಮಾಡುತ್ತಿದ್ದಾರೆ. ಇನ್ನು ಕೆಲವೆಡೆ ಮಾಂಸದ ಅಂಗಡಿಗಳು ಖಾಲಿ ಖಾಲಿಯಾಗಿವೆ.
ಬೆಂಗಳೂರು: ಕೊರೊನಾ (Coronavirus) ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ (Weekend Curfew) ಜಾರಿಯಾಗಿದೆ. ಕೆಆರ್ ಮಾರುಕಟ್ಟೆಯಲ್ಲಿ (KR Market) ಬೇಕಾಬಿಟ್ಟಿ ಓಡಾಡುವವರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ಬೆಳ್ಳಂಬೆಳಗ್ಗೆಯೇ ಫೀಲ್ಡ್ಗೆ ಇಳಿದಿರುವ ಪೊಲೀಸರು ಬ್ಯಾರಿಕೇಡ್ ಹಾಕಿ ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸರ ಜೊತೆ ಬಿಬಿಎಂಪಿ ಮಾರ್ಷಲ್ಗಳು ತಮ್ಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಜನರಿಂದ ತುಂಬಿರುತಿದ್ದ ಮಾರುಕಟ್ಟೆ ಸದ್ಯ ಖಾಲಿ ಖಾಲಿಯಾಗಿದೆ. ಇನ್ನು ನಗರದ ಹಲವೆಡೆ ವೀಕೆಂಡ್ ಕರ್ಪ್ಯೂ ನಡುವೆಯೂ ಮಾಂಸ ಖರೀದಿಯ ಭರಾಟೆ ಜೋರಾಗಿದೆ.
ರಾಜ್ಯದ ರಾಜಧಾನಿ ಬೆಂಗಳೂರಿನ ಹಲವು ನಗರಗಳಲ್ಲಿ ಬೆಳ್ಳಂಬೆಳಗೆ ಮಾಂಸ ಅಂಗಡಿ ಮುಂದೆ ಜನ ಕ್ಯೂ ನಿಂತಿದ್ದಾರೆ. ಕ್ಯೂನಲ್ಲಿ ನಿಂತು ಮಾಂಸ ಖರೀದಿ ಮಾಡುತ್ತಿದ್ದಾರೆ. ಇನ್ನು ಕೆಲವೆಡೆ ಮಾಂಸದ ಅಂಗಡಿಗಳು ಖಾಲಿ ಖಾಲಿಯಾಗಿವೆ. ಶಿವಾಜಿನಗರ ಸರ್ಕಲ್ ಬಳಿಯಿರುವ ಮಾಂಸದಂಗಡಿಯತ್ತ ಸದ್ಯ ಜನರು ಬರುತ್ತಿಲ್ಲ.
ಮೀನು ಖರೀದಿಗೆ ಮುಗಿ ಬಿದ್ದ ಜನ ಯಾದಗಿರಿ ನಗರದಲ್ಲಿ ಮೀನು ಖರೀದಿಗೆ ಜನರು ಮುಗಿ ಬಿದ್ದಿದ್ದಾರೆ. ನಗರದ ಶಾಸ್ತ್ರೀ ಸರ್ಕಲ್ನಲ್ಲಿರುವ ಮೀನಿನ ಮಾರ್ಕೆಟ್ನಲ್ಲಿ ಜನವೋ ಜನ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಮರೆತು ಮೀನು ಖರೀದಿಗೆ ಮುಂದಾಗಿದ್ದಾರೆ. ಇವತ್ತು ಭಾನುವಾರ ಆಗಿರುವ ಹಿನ್ನೆಲೆ ಮೀನು ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಚಿತ್ರದುರ್ಗದಲ್ಲಿ ಜನರು ಓಡಾಟ ವಿರಳವಾಗಿದೆ. ವಾಹನಗಳು ಓಡಾಟ ಇಲ್ಲದೆ ರಸ್ತೆಗಳು ಬಿಕೊ ಅನ್ನುತ್ತಿವೆ.
ರಾಯಚೂರಿನಲ್ಲಿ ಜನರ ಓಡಾಟ ವಿರಳವಾಗಿದೆ. ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಪ್ರಮುಖ ಜಂಕ್ಷನ್ಗಳಲ್ಲಿ ಪೊಲೀಸರು ಚೆಕ್ ಪೋಸ್ಟ್ ನಿರ್ಮಾಣ ಮಾಡಿದ್ದಾರೆ. ಜಿಲ್ಲೆಯಲ್ಲಿ ಪೊಲೀಸರು ಪ್ರತಿ ವಾಹನಗಳನ್ನ ತಪಾಸಣೆ ಮಾಡುತ್ತಿದ್ದಾರೆ.
ಕಾದು ನಿಂತ ಬಸ್ ಚಾಲಕರು ಮೈಸೂರು ಗ್ರಾಮಾಂತರ ಬಸ್ ನಿಲ್ದಾಣ ಭಣಗುಡುತ್ತಿದೆ. ಪ್ರಯಾಣಿಕರಿಲ್ಲದೆ ಬಸ್ ಚಾಲಕರು ಸುಮ್ಮನೆ ಕುಳಿತಿದ್ದಾರೆ. ಮೈಸೂರಿನಲ್ಲಿ ಎರಡನೇ ದಿನ ಮಾರುಕಟ್ಟೆ ಖಾಲಿ ಖಾಲಿಯಾಗಿದೆ. ಭಾನುವಾರದ ವ್ಯಾಪಾರವಿಲ್ಲದೆ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಪ್ರತಿ ಭಾನುವಾರ ಭರ್ಜರಿ ವ್ಯಾಪಾರವಾಗುತ್ತಿತ್ತು. ಆದರೆ ವೀಕೆಂಡ್ ಕರ್ಪ್ಯೂ ಹಿನ್ನೆಲೆ ಜನರು ಮನೆಯಿಂದ ಹೊರಗೆ ಬರುತ್ತಿಲ್ಲ.
ವೀಕೆಂಡ್ ಕರ್ಪ್ಯೂಗೆ ಡೋಂಟ್ ಕೇರ್ ಕಲಬುರಗಿ ನಗರದಲ್ಲಿ ಜನರು ವೀಕೆಂಡ್ ಕರ್ಪ್ಯೂಗೆ ಡೋಂಟ್ ಕೇರ್ ಎಂದಿದ್ದಾರೆ. ನಗರದ ಕೇಂದ್ರ ಬಸ್ ನಿಲ್ದಾಣದ ಮುಂದೆ ಅಂಗಡಿಗಳು ಓಪನ್ ಆಗಿವೆ. ಗುಂಪು ಗುಂಪಾಗಿ ಜನರು ಸೇರಿ ಟೀ ಕುಡಿಯುತ್ತಿದ್ದಾರೆ. ವಾಹನಗಳು ಪ್ರತಿದಿನದಂತೆ ಸಂಚಾರ ನಡೆಸುತ್ತಿವೆ.
ಜನರಿಂದ ಗಿಜುಗುಡುತ್ತಿದ್ದ ಹುಬ್ಬಳ್ಳಿಯ ಎಪಿಎಂಸಿ ತರಕಾರಿ ಮಾರುಕಟ್ಟೆ ಖಾಲಿ ಖಾಲಿಯಾಗಿದೆ. ಜಿಲ್ಲಾಡಳಿತ ಕಠಿಣ ನಿಯಮ ಜಾರಿಗೊಳಿಸಿದ ಹಿನ್ನೆಲೆ ಬೆರಳೆಣಿಕೆಯಷ್ಟೆ ವ್ಯಾಪಾಸ್ಥರು ಇದ್ದಾರೆ. ಇನ್ನು ಕೊಪ್ಪಳದಲ್ಲಿ ತರಕಾರಿ ಮಾರುಕಟ್ಟೆ ಫುಲ್ ರಶ್ ಆಗಿದೆ. ಸಾಮಾಜಿಕ ಅಂತರ ಮರೆತು ತರಕಾರಿ ವ್ಯಾಪಾರದಲ್ಲಿ ವ್ಯಾಪಾರಸ್ಥರು, ಖರೀದಿದಾರರು ಮುಳುಗಿದ್ದಾರೆ.
ಇದನ್ನೂ ಓದಿ
ಪೊಲೀಸರ ಕೈಯಲ್ಲಿ ಸಿಕ್ಕಿಹಾಕಿಕೊಂಡಾಗ ಜನ ಹೇಳುವ ನೆಪಗಳು ಹೊಟ್ಟೆ ಹುಣ್ಣಾಗುವಂತೆ ನಗುವಷ್ಟು ಸ್ವಾರಸ್ಯಕರವಾಗಿರುತ್ತವೆ!