ಹಣ್ಣು ಸಂಗ್ರಹಿಸಿದ್ದ ಗೋದಾಮಿನಲ್ಲಿ ಅಗ್ನಿ ಅವಘಡ, 10 ಜೀವಂತ ಗುಂಡುಗಳ ಸಹಿತ ನ್ಯಾಯಾಧೀಶರ ಗನ್ಮ್ಯಾನ್ ಪಿಸ್ತೂಲ್ ಕಳವು
ಬೆಂಕಿ ಹೊತ್ತಿದ ಕೆಲವೇ ನಿಮಿಷಗಳಲ್ಲಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಚರಣೆ ನಡೆಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಬೆಂಕಿ ನಂದಿಸಿದ್ದಾರೆ. ಅಗ್ನಿ ಅವಘಡ ಸಂಭವಿಸಿದ ಸಮೀಪದಲ್ಲೇ ಪಟಾಕಿ ಅಂಗಡಿ ಇತ್ತು. ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಂಗಳೂರು: ಬೆಂಗಳೂರಿನ ಅಕ್ಕಿಪೇಟೆಯ ಹಣ್ಣು ಸಂಗ್ರಹಿಸಿಟ್ಟಿದ್ದ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತ ತಪ್ಪಿದಂತಾಗಿದೆ. ಮೂರನೇ ಅಂತಸ್ಥಿನ ಕಟ್ಟಡದ ನೆಲಮಹಡಿಯಲ್ಲಿ ಇದ್ದ ಹಣ್ಣಿನ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹೊತ್ತಿದ ಕೆಲವೇ ನಿಮಿಷಗಳಲ್ಲಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಚರಣೆ ನಡೆಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಬೆಂಕಿ ನಂದಿಸಿದ್ದಾರೆ. ಅಗ್ನಿ ಅವಘಡ ಸಂಭವಿಸಿದ ಸಮೀಪದಲ್ಲೇ ಪಟಾಕಿ ಅಂಗಡಿ ಇತ್ತು. ಆದರೆ, ಅದೃಷ್ಟವಷಾತ್ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೋಧಕೇತರ ಸಿಬ್ಬಂದಿ, ಉಪನ್ಯಾಸಕರಿಗೆ ಸಂಬಳ ನೀಡದೆ ವಂಚನೆ; ಕಾಲೇಜಿನ ಮಾಜಿ ಅಧ್ಯಕ್ಷ ಷರೀಫ್ ವಿರುದ್ಧ FIR ದಾಖಲು
ಬೋಧಕೇತರ ಸಿಬ್ಬಂದಿ, ಉಪನ್ಯಾಸಕರಿಗೆ ಸಂಬಳ ನೀಡದೆ ವಂಚನೆ ಮಾಡಿದ ಆರೋಪ ಗೌಸಿಯಾ ಮಹಿಳಾ ಪಾಲಿಟೆಕ್ನಿಕ್ ಕಾಲೇಜು ವಿರುದ್ಧ ಕೇಳಿಬಂದಿದೆ. ಬೆಂಗಳೂರಿನ ಸುದ್ದಗುಂಟೆಪಾಳ್ಯದಲ್ಲಿರುವ ಗೌಸಿಯಾ ಕಾಲೇಜಿನ ಮಾಜಿ ಕೌನ್ಸಿಲ್ ಅಧ್ಯಕ್ಷ ವಿರುದ್ಧ ಉಪನ್ಯಾಸಕರ ಆಕ್ರೋಶ ವ್ಯಕ್ತವಾಗಿದೆ. 70 ನೌಕರರಿಗೆ ಸಂಬಳವೇ ನೀಡದೆ 78 ಲಕ್ಷ ವಂಚನೆ ಆರೋಪ ಕೇಳಿಬಂದಿದೆ. ಕಾಲೇಜಿನ ಮಾಜಿ ಅಧ್ಯಕ್ಷ ಷರೀಫ್ ವಿರುದ್ಧ FIR ದಾಖಲು ಮಾಡಲಾಗಿದೆ. ಸುಬಾನ್ ಷರೀಫ್ ವಿರುದ್ಧ ಆಡಳಿತ ಮಂಡಳಿ FIR ದಾಖಲಿಸಿದೆ. ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ವಿಜಯನಗರ: ಆಕಸ್ಮಿಕ ಬೆಂಕಿಯಿಂದ 8 ಎಕರೆಯಲ್ಲಿ ಬೆಳೆದಿದ್ದ ಕಬ್ಬು ಭಸ್ಮ
ಆಕಸ್ಮಿಕ ಬೆಂಕಿಯಿಂದ 8 ಎಕರೆಯಲ್ಲಿ ಬೆಳೆದಿದ್ದ ಕಬ್ಬು ಭಸ್ಮವಾಗಿದೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಶಿಂಗ್ರಿಹಳ್ಳಿ ಬಳಿ ರೈತ ಪರಸಪ್ಪಗೆ ಸೇರಿದ ಕಬ್ಬು ಬೆಳೆ ಭಸ್ಮವಾಗಿದೆ. ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಹಲವಾಗಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬೆಂಗಳೂರಲ್ಲಿ ನ್ಯಾಯಾಧೀಶರ ಗನ್ಮ್ಯಾನ್ ಪಿಸ್ತೂಲ್ ಕಳವು
ಬೆಂಗಳೂರಲ್ಲಿ ನ್ಯಾಯಾಧೀಶರ ಗನ್ಮ್ಯಾನ್ ಪಿಸ್ತೂಲ್ ಕಳವಾದ ಘಟನೆ ಸಂಭವಿಸಿದೆ. ನ್ಯಾಯಾಧೀಶರ ಗನ್ಮ್ಯಾನ್ ಪಿಸ್ತೂಲ್ ಕಳವಾಗಿದೆ. 10 ಜೀವಂತ ಗುಂಡುಗಳ ಸಮೇತ ಪಿಸ್ತೂಲ್ನ್ನು ಖದೀಮರು ಕಳ್ಳತನ ಮಾಡಿದ್ದಾರೆ. ಡಿಸೆಂಬರ್ 26 ರಂದು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪಿಸ್ತೂಲ್ ಕಳವು ಮಾಡಲಾಗಿದೆ. ಈ ಕುರಿತು ಉಪ್ಪಾರಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.
ಮಂಡ್ದ: ಕಿಚ್ಚು ಹಾಯಿಸುವಾಗ ಬೆಂಕಿಗೆ ಬಿದ್ದು ಯುವಕನಿಗೆ ಗಾಯ
ಕಿಚ್ಚು ಹಾಯಿಸುವಾಗ ಬೆಂಕಿಗೆ ಬಿದ್ದು ಯುವಕನಿಗೆ ಗಾಯವಾದ ದುರ್ಘಟನೆ ಮಂಡ್ಯ ನಗರದ ಹೊಸಹಳ್ಳಿಯಲ್ಲಿ ನಡೆದಿದೆ. ಕೂಡಲೇ ಯುವಕನನ್ನ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಮಂಗಳೂರು: ಹೆತ್ತ ತಾಯಿ ಮೇಲೆಯೇ ಮಗ ಅತ್ಯಾಚಾರವೆಸಗಿದ್ದ ಪ್ರಕರಣ; ಆರೋಪಿ ಬಂಧಿಸಲಾಗಿದೆ
ಹೆತ್ತ ತಾಯಿ ಮೇಲೆಯೇ ಮಗ ಅತ್ಯಾಚಾರವೆಸಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಆರೋಪಿ ಬಂಧಿಸಲಾಗಿದೆ ಎಂದು ಟಿವಿ9ಗೆ ದಕ್ಷಿಣ ಕನ್ನಡ SP ಋಷಿಕೇಶ್ ಸೋನಾವಣೆ ಹೇಳಿಕೆ ನೀಡಿದ್ದಾರೆ. 2 ಬಾರಿ ಅತ್ಯಾಚಾರ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿಗೆ ಮದುವೆಯಾಗಿದ್ದು ಪತ್ನಿ ಜೊತೆಗೆ ಇರಲಿಲ್ಲ. ಕುಡಿದ ಮತ್ತಿನಲ್ಲಿ ತಾಯಿ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ತಿಳಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಘಟನೆ ನಡೆದಿತ್ತು.
ಇದನ್ನೂ ಓದಿ: ಹಾವೇರಿ: ಎರಡು ಕಾರ್ಗಳಿಗೆ ಲಾರಿ ಡಿಕ್ಕಿ; ಒಂದೇ ಕುಟುಂಬದ ನಾಲ್ವರು ಸಾವು
ಇದನ್ನೂ ಓದಿ: ಸಾಲ ವಾಪಸ್ ಕೇಳಿದ್ದಕ್ಕೆ ಅನೈತಿಕ ಸಂಬಂಧದ ಅಪಪ್ರಚಾರ; ಇಬ್ಬರು ಮಕ್ಕಳ ಜತೆ ತಾಯಿ ಆತ್ಮಹತ್ಯೆ