ಸಾಲ ವಾಪಸ್ ಕೇಳಿದ್ದಕ್ಕೆ ಅನೈತಿಕ ಸಂಬಂಧದ ಅಪಪ್ರಚಾರ; ಇಬ್ಬರು ಮಕ್ಕಳ ಜತೆ ತಾಯಿ ಆತ್ಮಹತ್ಯೆ
ಮತ್ತೊಬ್ಬಾಕೆ ಮಗಳು, 1 ವರ್ಷದ ಬಾಲಕಿ ದೇವಿಕಾ ಮೃತದೇಹಕ್ಕಾಗಿ ಶೋಧಕಾರ್ಯ ನಡೆಸಲಾಗಿದೆ. ಘಟನೆ ಬಳಿಕ ಆರೋಪಿ ಸಂತೋಷ್ ಪತ್ನಿ ಆಶಾ ಪರಾರಿ ಆಗಿದ್ದಾರೆ. ಆರೋಪಿ ಸಂತೋಷ್ನನ್ನು ಹೊಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ: ಸಾಲ ವಾಪಸ್ ಕೇಳಿದ್ದಕ್ಕೆ ಅನೈತಿಕ ಸಂಬಂಧದ ಅಪಪ್ರಚಾರ ಮಾಡಿದ ಕಾರಣಕ್ಕೆ ಡೆತ್ನೋಟ್ ಬರೆದಿಟ್ಟು ಇಬ್ಬರು ಮಕ್ಕಳ ಜತೆ ತಾಯಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಡೆದಿದೆ. ಅಪಪ್ರಚಾರಕ್ಕೆ ಬೇಸತ್ತು ಮಕ್ಕಳ ಜತೆ ತಾಯಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹಂಚಿನ ಹಂಚಿನ ಸಿದ್ದಾಪುರ ಬಳಿಯ ಭದ್ರಾ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭದ್ರಾ ಕಾಲುವೆಯಲ್ಲಿ ತಾಯಿ ವೀಣಾ, ಜಾನವಿ (7) ಶವ ಪತ್ತೆ ಆಗಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಭದ್ರಾ ಕಾಲುವೆಯಲ್ಲಿ ಮೃತದೇಹ ಪತ್ತೆಯಾಗಿದೆ. ನಿನ್ನೆ ತವರು ಮನೆಗೆ ಹೋಗುವುದಾಗಿ ಹೇಳಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಮತ್ತೊಬ್ಬಾಕೆ ಮಗಳು, 1 ವರ್ಷದ ಬಾಲಕಿ ದೇವಿಕಾ ಮೃತದೇಹಕ್ಕಾಗಿ ಶೋಧಕಾರ್ಯ ನಡೆಸಲಾಗಿದೆ. ಘಟನೆ ಬಳಿಕ ಆರೋಪಿ ಸಂತೋಷ್ ಪತ್ನಿ ಆಶಾ ಪರಾರಿ ಆಗಿದ್ದಾರೆ. ಆರೋಪಿ ಸಂತೋಷ್ನನ್ನು ಹೊಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ.
ಬೋಧಕೇತರ ಸಿಬ್ಬಂದಿ, ಉಪನ್ಯಾಸಕರಿಗೆ ಸಂಬಳ ನೀಡದೆ ವಂಚನೆ; ಗೌಸಿಯಾ ಮಹಿಳಾ ಪಾಲಿಟೆಕ್ನಿಕ್ ಕಾಲೇಜು ವಿರುದ್ಧ ಆರೋಪ
ಬೋಧಕೇತರ ಸಿಬ್ಬಂದಿ, ಉಪನ್ಯಾಸಕರಿಗೆ ಸಂಬಳ ನೀಡದೆ ವಂಚನೆ ಬಗ್ಗೆ ಗೌಸಿಯಾ ಮಹಿಳಾ ಪಾಲಿಟೆಕ್ನಿಕ್ ಕಾಲೇಜು ವಿರುದ್ಧ ಆರೋಪ ಕೇಳಿಬಂದಿದೆ. ಬೆಂಗಳೂರಿನ ಸುದ್ದಗುಂಟೆಪಾಳ್ಯದಲ್ಲಿರುವ ಗೌಸಿಯಾ ಕಾಲೇಜಿನ ಮಾಜಿ ಕೌನ್ಸಿಲ್ ಅಧ್ಯಕ್ಷ ವಿರುದ್ಧ ಉಪನ್ಯಾಸಕರ ಆಕ್ರೋಶ ವ್ಯಕ್ತವಾಗಿದೆ. 70 ನೌಕರರಿಗೆ ಸಂಬಳವೇ ನೀಡದೆ 78 ಲಕ್ಷ ವಂಚನೆ ಆರೋಪ ಕೇಳಿಬಂದಿದೆ. ಕಾಲೇಜಿನ ಮಾಜಿ ಅಧ್ಯಕ್ಷ ಷರೀಫ್ ವಿರುದ್ಧ FIR ದಾಖಲು ಮಾಡಲಾಗಿದೆ. ಸುಬಾನ್ ಷರೀಫ್ ವಿರುದ್ಧ ಆಡಳಿತ ಮಂಡಳಿ FIR ದಾಖಲಿಸಿಕೊಂಡಿದೆ. ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಗದಗ: ಜಮೀನಿನ ರಸ್ತೆ ವಿಚಾರಕ್ಕೆ 2 ಕುಟುಂಬಗಳ ಮಧ್ಯೆ ಗಲಾಟೆ
ಜಮೀನಿನ ರಸ್ತೆ ವಿಚಾರಕ್ಕೆ 2 ಕುಟುಂಬಗಳ ಮಧ್ಯೆ ಗಲಾಟೆ ನಡೆದ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕದಂಪುರದಲ್ಲಿ ನಡೆದಿದೆ. ರೈತರು, ಖಾರದ ಪುಡಿ ಎರಚಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕೃಷ್ಣಾ ನದಿಯಲ್ಲಿ ಈಜಲು ತೆರಳಿದ್ದ ಯುವಕ ನಾಪತ್ತೆ
ಕೃಷ್ಣಾ ನದಿಯಲ್ಲಿ ಈಜಲು ತೆರಳಿದ್ದ ಯುವಕ ನಾಪತ್ತೆ ಆದ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಅಣೆ ಮಲ್ಲೇಶ್ವರ ದೇವಸ್ಥಾನದ ಬಳಿ ಇರುವ ಕೃಷ್ಣಾ ನದಿಯಲ್ಲಿ ನಡೆದಿದೆ. ಯಾದಗಿರಿ ಜಿಲ್ಲೆ ಮಲಾರ್ ಗ್ರಾಮದ ವೀರೇಶ್ (24) ನಾಪತ್ತೆ ಆಗಿದ್ದಾರೆ. ಸ್ನೇಹಿತರ ಜೊತೆ ಪ್ರವಾಸಕ್ಕೆಂದು ಬಂದಿದ್ದ ಯುವಕ ವೀರೇಶ್ ನಾಪತ್ತೆ ಆಗಿದ್ದಾರೆ. ದೇವದುರ್ಗ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧಕಾರ್ಯ ನಡೆಸಲಾಗುತ್ತಿದೆ.
ಸಮುದ್ರದಲ್ಲಿ ಈಜಲು ತೆರಳಿದ್ದ ಪ್ರವಾಸಿಗ ಸಾವು
ಸಮುದ್ರದಲ್ಲಿ ಈಜಲು ತೆರಳಿದ್ದ ಪ್ರವಾಸಿಗ ಸಾವನ್ನಪ್ಪಿದ ದುರ್ಘಟನೆ ಉತ್ತರ ಕನ್ನಡ ಜಿಲ್ಲೆ ಮುರ್ಡೇಶ್ವರ ಕಡಲತೀರದಲ್ಲಿ ನಡೆದಿದೆ. ಹಾವೇರಿ ಜಿಲ್ಲೆ ಅಕ್ಕಿಆಲೂರಿನ ಮುತ್ತಪ್ಪ ಸುಣಗಾರ ಸಾವನ್ನಪ್ಪಿದ್ದಾರೆ. ಸ್ನೇಹಿತರ ಜೊತೆ ಪ್ರವಾಸಕ್ಕೆ ಬಂದಿದ್ದ ಮುತ್ತಪ್ಪ ಸುಣಗಾರ ಸಾವನ್ನಪ್ಪಿದ್ದಾರೆ. ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ಮಡಿಕೇರಿಯಲ್ಲಿ ಆನೆ ದಾಳಿಗೆ ವಿದ್ಯಾರ್ಥಿ ಸಾವು; ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕುಟುಂಬಸ್ಥರು ಆಕ್ರೋಶ
ಇದನ್ನೂ ಓದಿ: ಪ್ರಿಯಕರನಿಗಾಗಿ ಪತಿಯ ಕೊಲೆ ಮಾಡಿ ಮೂರ್ಛೆ ರೋಗದಿಂದ ಸಾವು ಎಂದು ಕತೆ ಕಟ್ಟಿದ್ದ ಖರ್ತನಾಕ್ ಲೇಡಿಯ ಬಂಧನ